ಬಂಟ್ವಾಳ, ಆಗಸ್ಟ್ 28, 2026 (ಕರಾವಳಿ ಟೈಮ್ಸ್) : ಟಿಪ್ಪರ್ ಲಾರಿ ಹಾಗೂ ಟೆಂಪೋ ಕಂಟೈನರ್ ನಡುವೆ ಅಪಘಾತ ಸಂಭವಿಸಿ ಓರ್ವ ಚಾಲಕ ಗಾಯಗೊಂಡ ಘಟನೆ ಸಜಿಪಮೂಡ ಗ್ರಾಮದ ಕಂದೂರು ಕೋಸ್ಟಲ್ ಫಾರ್ಮ್ ಎದುರುಗಡೆ ಆಗಸ್ಟ್ 25 ರಂದು ಸಂಭವಿಸಿದೆ.
ಗಾಯಗೊಂಡವರನ್ನು ಟಿಪ್ಪರ್ ಲಾರಿಯ ಚಾಲಕ ಚೇತನ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಟಿಪ್ಪರ್ ಪ್ರಯಾಣಿಕ ನಗ್ರಿ ನಿವಾಸಿ ಮಹಮ್ಮದ್ ಶಫೀಕ್ (26) ಅವರು ಬಂಟ್ವಾಳ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದು, ಇವರು ಪ್ರಯಾಣಿಕರಾಗಿ ಹಾಗೂ ಚೇತನ್ ಚಾಲಕರಾಗಿದ್ದ ಟಿಪ್ಪರ್ ಲಾರಿಯಲ್ಲಿ ಸಜಿಪ ಕಡೆಯಿಂದ ಮೆಲ್ಕಾರ್ ಮಾರ್ಗವಾಗಿ ವೀರಕಂಭ ಕಲ್ಲಿನ ಕೋರೆ ಕಡೆಗೆ ಮುಡುಪು-ಮೇಲ್ಕಾರ್ ರಾಜ್ಯ ಹೆದ್ದಾರಿಯಲ್ಲಿ ಹೋಗುವಾಗ ಬೆಳ್ಳಿಗೆ 10.35ರ ವೇಳೆಗೆ ಸಜಿಪಮೂಡ ಗ್ರಾಮದ ಕಂದೂರು ಕೋಸ್ಟಲ್ ಫಾರ್ಮ್ ಎದುರು ತಲುಪಿದಾಗ ಎದುರಿನಿಂದ ಅಂದರೆ ಸಜಿಪ ಕಡೆಯಿಂದ ಮೆಲ್ಕಾರ್ ಕಡೆಗೆ ಹೋಗುತ್ತಿದ್ದ, ಯೋಗೀಶ್ ಎಂಬವರು ಚಲಾಯಿಸುತ್ತಿದ್ದ ಕಂಟೈನರ್ ಟೆಂಪೆÇೀ ವಾಹನವನ್ನು ಚಾಲಕ ಯೊಗೀಶ್ ಅವರು ಯಾವುದೆ ಸೂಚನೆ ನೀಡದೆ ಏಕಾಏಕಿ ಬಲಕ್ಕೆ ಕೋಸ್ಟಲ್ ಫಾರ್ಮ್ ಕಡೆಗೆ ತಿರುಗಿಸಲು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಕಂಟೈನರ್ ಲಾರಿಯ ಹಿಂಬದಿಯ ಭಾಗಕ್ಕೆ ಟಿಪ್ಪರ್ ಲಾರಿಯ ಎದುರಿನ ಬಲ ಬದಿಯ ಭಾಗ ಡಿಕ್ಕಿಯಾಗಿರುತ್ತದೆ. ಪರಿಣಾಮ ಕಂಟೈನರ್ ವಾಹನ ರಸ್ತೆ ಬದಿಗೆ ಮುಗುಚಿ ಬಿದ್ದಿದ್ದುಮ, ಟಿಪ್ಪರ್ ಲಾರಿ ರಸ್ತೆಯಲ್ಲಿ ನಿಂತುಕೊಂಡಿದೆ. ಅಪಘಾತದಿಂಧ ಚೇತನ್ ಅವರ ಕಾಲಿಗೆ ಮತ್ತು ಸೊಂಟಕ್ಕೆ ಗಾಯಗಳಾಗಿದ್ದು, ಅವರನ್ನು ಮಂಗಳೂರು ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಿಂದ ಎರಡು ವಾಹನಗಳು ಜಖಂಗೊಂಡಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















0 comments:
Post a Comment