ಬಂಟ್ವಾಳ, ಆಗಸ್ಟ್ 28, 2026 (ಕರಾವಳಿ ಟೈಮ್ಸ್) : ಓಣಂ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ದಕ್ಷಿಣ ರೈಲ್ವೆ ವತಿಯಿಂದ ರೈಲು ಸಂಖ್ಯೆ 06072 ಮಂಗಳೂರು ಜಂಕ್ಷನ್-ಎಸ್‍ಎಂವಿಟಿ ಬೆಂಗಳೂರು ಏಕಮುಖ ಎಕ್ಸ್‍ಪ್ರೆಸ್ ವಿಶೇಷ ರೈಲು ಸಂಚಾರಕ್ಕೆ ಅಧಿಸೂಚನೆ ನೀಡಲಾಗಿದೆ.
ಈ ವಿಶೇಷ ರೈಲು 06072 29 ಆಗಸ್ಟ್ ಶನಿವಾರ ರಾತ್ರಿ 11:15ಕ್ಕೆ ಮಂಗಳೂರು ಜಂಕ್ಷನ್ನಿನಿಂದ ಹೊರಡಲಿದೆ. ರೈಲು ಕೆಳಗಿನ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
ಕಾಸರಗೋಡು 11:54/ 11:56, ಕಾಂಞಂಗಾಡ್ 12:14/ 12:15, ನೀಲೇಶ್ವರ 12:24/ 12:25, ಪಯ್ಯನ್ನೂರು 12:45/ 12:46, ಕಣ್ಣೂರು 13:27/ 13:30, ತಲಶ್ಶೇರಿ 13:50/ 13:51, ವಡಕರ 14:14/ 14:15, ಕೋಝಿಕ್ಕೋಡ್ 14:57/ 15:00, ತಿರೂರು 15:34/ 15:35, ಶೋರನೂರು ಜಂಕ್ಷನ್ 16:30/ 16:35, ಪಾಲಕ್ಕಾಡ್ ಜಂಕ್ಷನ್ 17:30/ 17:40, ಪೆÇದನೂರು ಜಂಕ್ಷನ್ 19:20/ 19:22, ತಿರುಪ್ಪೂರು 20:18/ 20:20, ಈರೋಡ್ ಜಂಕ್ಷನ್ 21:00/ 21:10, ಸೇಲಂ ಜಂಕ್ಷನ್ 22:10/ 22:13, ಬಂಗಾರಪೇಟೆ ಜಂಕ್ಷನ್ 02:11/ 02:12, ಕೃಷ್ಣರಾಜಪುರಂ 02:54/ 02:55. ನಂತರ ರೈಲು ಆಗಸ್ಟ್ 30 ರಂದು ಭಾನುವಾರ ಬೆಳಿಗ್ಗೆ 4 ಗಂಟೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ತಲುಪಲಿದೆ.
ಈ ವಿಶೇಷ ರೈಲಿನಲ್ಲಿ ಒಟ್ಟು 20 ಐಸಿಎಳ್ ಬೋಗಿಗಳು ಇರಲಿದ್ದು, ಅವುಗಳಲ್ಲಿ ಎಸಿ 2 ಟೈರ್ ಕೋಚ್
3, ಎಸಿ 3 ಟೈರ್ ಕೋಚ್‍ಗಳು, 10 ಸ್ಲೀಪರ್ ಕ್ಲಾಸ್ ಕೋಚ್‍ಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಕೋಚ್‍ಗಳು, ದಿವ್ಯಾಂಗ ಜನರಿಗಾಗಿ ಪ್ರತ್ಯೇಕ ವಿಭಾಗ ಹೊಂದಿರುವ 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‍ಗಳನ್ನು ಒಳಗೊಂಡಿರುತ್ತವೆ ಎಂದು ಹುಬ್ಬಳ್ಳಿ ದಕ್ಷಿಣ ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ ಮಂಜುನಾಥ್ ಕನಮಾಡಿ ತಿಳಿಸಿದ್ದಾರೆ.





















0 comments:
Post a Comment