ಕರಿಯಂಗಳ : ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಅವಿವಾಹಿತ ಮೃತದೇಹ ಪತ್ತೆ - Karavali Times ಕರಿಯಂಗಳ : ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಅವಿವಾಹಿತ ಮೃತದೇಹ ಪತ್ತೆ - Karavali Times

728x90

19 August 2026

ಕರಿಯಂಗಳ : ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಅವಿವಾಹಿತ ಮೃತದೇಹ ಪತ್ತೆ

 ಬಂಟ್ವಾಳ, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ಬಳಿಯ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ವ್ಯಕ್ತಿಯೋರ್ವರ ಮೃತದೇಹ ಸಂಶಯಾಸ್ಪದವಾಗಿ ಪತ್ತೆಯಾದ ಘಟನೆ ಆಗಸ್ಟ್ 17 ರಂದು ಸಂಭವಿಸಿದೆ. 

ಮೃತರ ಇಲ್ಲಿನ ನಿವಾಸಿ ಹರೀಶ್ ಟಿ (38) ಎಂದು ಹೆಸರಿಸಲಾಗಿದೆ. ಇವರು ಅವಿವಾಹಿತರಾಗಿದ್ದು, ಇಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿರುವುದಾಗಿದೆ. ಆಗಸ್ಟ್ 16 ರಂದು ಕೆಲಸಕ್ಕೆ ಹೋಗಿ ಬಂದು ರಾತ್ರಿ ಮಲಗಿದ್ದ ಇವರು ಬೆಳಗ್ಗೆ ನೋಡುವಾಗ ಮನೆಯಲ್ಲಿರಲಿಲ್ಲ. ಬೆಳಿಗ್ಗೆ 7.30ಕ್ಕೆ ಇವರ ಮೃತದೇಹ ಇಲ್ಲಿನ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಪತ್ತೆಯಾಗಿದೆ. ಈ ಬಗ್ಗೆ ಮೃತರ ಸಹೋದರ ದಿನೇಶ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕರಿಯಂಗಳ : ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಅವಿವಾಹಿತ ಮೃತದೇಹ ಪತ್ತೆ Rating: 5 Reviewed By: karavali Times
Scroll to Top