7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಸಾಮಿಯನ್ನು ಬಂಧಿಸಿದ ಮಂಗಳೂರು ಪೊಲೀಸರು - Karavali Times 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಸಾಮಿಯನ್ನು ಬಂಧಿಸಿದ ಮಂಗಳೂರು ಪೊಲೀಸರು - Karavali Times

728x90

4 August 2026

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಸಾಮಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ಮಂಗಳೂರು, ಆಗಸ್ಟ್ 04, 2026 (ಕರಾವಳಿ ಟೈಮ್ಸ್) : ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ 13ಕ್ಕೂ ಹೆಚ್ಚು ಪ್ರಕರಣಗಳ ರೂವಾರಿಯನ್ನು ಮಂಗಳೂರು ಪೊಲೀಸರು ದಸ್ತಗಿರಿ ಮಾಡಿದ್ದಾರೆ. 

ಬಂಧಿತ ಆಸಾಮಿಯನ್ನು ಮೂಲತಃ ಉಳ್ಳಾಲ ತಾಲೂಕು ಮಾರ್ಗತಲೆ ನಿವಾಸಿ, ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ, ಮಂಜೇಶ್ವರ-ಪಾವೂರು, ಕುಂಡಪ್ಪು-ಗೇರುಕಟ್ಟೆ ನಾಜಿಯಾ ಮಂಝಿಲ್ ಮನೆಯಲ್ಲಿ ವಾಸವಾಗಿರುವ ಅಬ್ದುಲ್ ಖಾದರ್ ಎಂಬವರ ಪುತ್ರ ಉಮ್ಮರ್ ನವಾಫ್ ಎಂದು ಹೆಸರಿಸಲಾಗಿದೆ. 

ಈತನ ಮೇಲೆ 13 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 7 ವರ್ಷದಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಈತನ ಮೇಲೆ 30ಕ್ಕಿಂತ ಹೆಚ್ಚು ವಾರಂಟ್ ಗಳನ್ನು ಹೊರಡಿಸಿದೆ. ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೆÇಲೀಸ್ ಆಯುಕ್ತರವರ ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ ಉಪವಿಭಾಗ ಕಛೇರಿಯ ವಿಶೇಷ ಕರ್ತವ್ಯ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿ ಉಮ್ಮರ್ ನವಾಫ್ ಎಂಬಾತನನ್ನು ಆಗಸ್ಟ್ 2ರಂದು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದಿದ್ದಾರೆ. 

ಉಳ್ಳಾಲ ಪೆÇಲೀಸ್ ಠಾಣಾ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ಈತನ ವಿರುದ್ದ ಪೆÇ್ರೀಕ್ಲಮೇಶನ್ ಹಾಗೂ ಎಲ್.ಪಿ.ಸಿ ಜ್ಯಾರಿ ಮಾಡಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಸಾಮಿಯನ್ನು ಬಂಧಿಸಿದ ಮಂಗಳೂರು ಪೊಲೀಸರು Rating: 5 Reviewed By: karavali Times
Scroll to Top