ತಲೆಮರೆಸಿಕೊಂಡಿದ್ದ ಆರೋಪಿ ವೇಣೂರು ಪೊಲೀಸರ ಬಲೆಗೆ - Karavali Times ತಲೆಮರೆಸಿಕೊಂಡಿದ್ದ ಆರೋಪಿ ವೇಣೂರು ಪೊಲೀಸರ ಬಲೆಗೆ - Karavali Times

728x90

13 August 2026

ತಲೆಮರೆಸಿಕೊಂಡಿದ್ದ ಆರೋಪಿ ವೇಣೂರು ಪೊಲೀಸರ ಬಲೆಗೆ

 ಬಂಟ್ವಾಳ, ಆಗಸ್ಟ್ 14, 2016 (ಕರಾವಳಿ ಟೈಮ್ಸ್) : ವೇಣೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 71/2008, ಕಲಂ 457 380 ಐಪಿಸಿ  ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡು ಸಿ.ಸಿ. ಸಂಖ್ಯೆ 535/2016 ರಂತೆ ವಾರಂಟು ಆಸಾಮಿ ಮಹಮ್ಮದ್ ಶರೀಪ್ (46) ಎಂಬಾತನನ್ನು ವೇಣೂರು ಪೊಲೀಸರು ಆಗಸ್ಟ್ 13 ರಂದು ಬಂಧಿಸಿದ್ದಾರೆ.

 ವೇಣೂರು  ಠಾಣಾ ಸಿಬ್ಬಂದಿಗಳಾದ ಎಎಸ್ಐ ಬೆಣ್ಣಿಚನ್, ಪಿಸಿ ಬಸವರಾಜ್ ಮತ್ತು  ಬೆಳ್ತಂಗಡಿ ಉಪ ವಿಭಾಗ ಕಚೇರಿಯ ಸಿಬ್ಬಂದಿ ಪ್ರವೀಣ್ ಎಂ ಅವರುಗಳ ತಂಡ ಆರೋಪಿಯನ್ನು ದಸ್ತಗಿರಿ ಮಾಡಿ ಬೆಳ್ತಂಗಡಿ ನ್ಯಾಯಾಧೀಶರ ಸಮ್ಮುಖ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ತಲೆಮರೆಸಿಕೊಂಡಿದ್ದ ಆರೋಪಿ ವೇಣೂರು ಪೊಲೀಸರ ಬಲೆಗೆ Rating: 5 Reviewed By: lk
Scroll to Top