ನವದೆಹಲಿ, ಸೆಪ್ಟೆಂಬರ್ 28, 2026 (ಕರಾವಳಿ ಟೈಮ್ಸ್) : ಭಾರತೀಯ ಬ್ಯಾಂಕ್‍ಗಳ ಒಕ್ಕೂಟ (ಐಬಿಎ) ಹಾಗೂ ಯುನೈಟೆಡ್ ಫೆÇೀರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯು ಎಫ್ ಬಿ ಯು) ನಡುವೆ ಸೆ 27 ರಂದು ಭಾನುವಾರ ರಾತ್ರಿ ನಡೆದ ಸಭೆ ಯಶಸ್ವಿಯಾಗಿರುವ ಹಿನ್ನಲೆಂiÀiಲ್ಲಿ ಸೆ 28 ರ ಸೋಮವಾರದಿಂದ ನಿರ್ಧರಿಸಲಾಗಿದ್ದ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಲಾಗಿದೆ.
ಮುಷ್ಕರದ ಕರೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವು ಬ್ಯಾಂಕ್ ನೌಕರರಿಗೆ ಮನವಿ ಮಾಡಿದ್ದು, ಅವರ ಬಹುತೇಕ ಸಮಸ್ಯೆಗಳನ್ನು ಈಗಾಗಲೇ ಮಾತುಕತೆ ಮತ್ತು ಕಲ್ಯಾಣ ಕ್ರಮಗಳ ಮೂಲಕ ಬಗೆಹರಿಸಲಾಗಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ 28 ರಿಂದ 30ರ ಅವಧಿಯಲ್ಲಿ ಮುಷ್ಕರ ನಡೆಸಿದರೆ ಅದು ಬ್ಯಾಂಕಿಂಗ್ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದು ಬ್ಯಾಂಕುಗಳ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯ ಸಮಯವಾಗಿದೆ ಎಂದು ಸರ್ಕಾರ ಎಚ್ಚರಿಕೆ ನೀಡಿತ್ತು.
ಸಾರ್ವಜನಿಕ ವಲಯದ ಬ್ಯಾಂಕ್‍ಗಳು 2014-15ರಿಂದ 2025-26ರ ಹಣಕಾಸು ವರ್ಷಗಳ ನಡುವೆ ಸುಮಾರು 4.83 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ ಆಗಸ್ಟ್ 2024ರಲ್ಲಿ ಸಿಬ್ಬಂದಿ ಕಲ್ಯಾಣ ನಿಧಿಯನ್ನು ಶೇ. 56 ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಪಿಂಚಣಿ, ವಿಸ್ತೃತ ವೈದ್ಯಕೀಯ ವಿಮೆ, ಸರಳೀಕೃತ ಭಡ್ತಿ ಮತ್ತು ವರ್ಗಾವಣೆ ನೀತಿಗಳು ಹಾಗೂ ವಿಶೇಷ ರಜೆ ಸೌಲಭ್ಯಗಳು ಸೇರಿದಂತೆ ಹಲವು ಕಲ್ಯಾಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
2024ರ ವೇತನ ಪರಿಷ್ಕರಣೆ ಒಪ್ಪಂದದಿಂದ ಬಾಕಿ ಉಳಿದಿರುವ ‘ವಾರಕ್ಕೆ 5 ದಿನಗಳ ಕೆಲಸ’ದ ಪ್ರಸ್ತಾವನೆಯನ್ನು ತಕ್ಷಣವೇ ಜಾರಿಗೊಳಿಸಬೇಕು. ಏಕಪಕ್ಷೀಯವಾಗಿ ಮತ್ತು ತಾರತಮ್ಯದಿಂದ ಕೂಡಿದ ರೀತಿಯಲ್ಲಿ ಪರಿಷ್ಕರಿಸಲಾಗಿದೆ ಎನ್ನಲಾದ ಕಾರ್ಯಕ್ಷಮತೆ ಆಧಾರಿತ ಪೆÇ್ರೀತ್ಸಾಹಧನ ನಿಯಮಗಳನ್ನು ಬದಲಾಯಿಸಬೇಕು. ಪಿಂಚಣಿ ಮೊತ್ತವನ್ನು ಹೆಚ್ಚಿಸುವುದು ಹಾಗೂ ನಿವೃತ್ತ ನೌಕರರಿಗೆ ಏಕರೂಪದ ತುಟ್ಟಿಭತ್ಯೆ (ಡಿಎ) ಸೂತ್ರವನ್ನು ಅಳವಡಿಸುವುದು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿ ಎಸ್) ಬದಲಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸುವುದು. ಬಾಕಿ ಉಳಿದಿರುವ ವೇತನ ಹಾಗೂ ಸೇವಾ ಸಂಬಂಧಿತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಬ್ಯಾಂಕ್ ನೌಕರರ ಸಂಘಟನೆಗಳು ಮೂರು ದಿನಗಳ ಕಾಲ ನಿರಂತರ ಮುಷ್ಕರಕ್ಕೆ ಕರೆ ನೀಡಿತ್ತು.
ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ವಿವಿಧ ಬೇಡಿಕೆಗಳು ಹಾಗೂ ಸಂಘಟನೆಗಳು ಪ್ರಸ್ತಾಪಿಸಿದ್ದ ವಿಷಯಗಳ ಕುರಿತು ಐಬಿಎ ಮತ್ತು ಉ ಎಫ್ ಬಿ ಯು ಪ್ರತಿನಿಧಿಗಳು ಸಭೆಯಲ್ಲಿ ಚರ್ಚೆ ನಡೆಸಿದರು. ಮಾತುಕತೆಯ ಬಳಿಕ ಪ್ರಸ್ತಾವಿತ ಮುಷ್ಕರವನ್ನು ಮುಂದೂಡಲು ಯು ಎಫ್ ಬಿ ಯು ನಿರ್ಧರಿಸಿದೆ.
ಭಾರತೀಯ ಬ್ಯಾಂಕ್‍ಗಳ ಸಂಘವು ಸದಸ್ಯ ಬ್ಯಾಂಕ್‍ಗಳ ಆಡಳಿತ ಮಂಡಳಿಗಳನ್ನು ಪ್ರತಿನಿಧಿಸಿದರೆ, ಯು ಎಫ್ ಬಿ ಯು ವಿವಿಧ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಸಂಘಟನೆಗಳ ಒಕ್ಕೂಟವಾಗಿ ಕಾರ್ಯನಿರ್ವಹಿಸುತ್ತದೆ.
ಮುಷ್ಕರ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಭಾರತೀಯ ಬ್ಯಾಂಕ್‍ಗಳ ಒಕ್ಕೂಟ (ಐಬಿಎ) ಹಾಗೂ ಯುನೈಟೆಡ್ ಫೆÇೀರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯು ಎಫ್ ಬಿ ಯು) ನಡುವೆ ರಾತ್ರಿ 9.30ಕ್ಕೆ ಸಭೆ ನಡೆಯಿತು. ಮಾತುಕತೆ ಬಳಿಕ ಹಲವು ಪ್ರಮುಖ ವಿಷಯಗಳ ಕುರಿತು ಎರಡೂ ಕಡೆಯವರು ಒಪ್ಪಂದಕ್ಕೆ ಬಂದಿದ್ದು, ಸದ್ಯಕ್ಕೆ ಪ್ರತಿಭಟನೆ ಹಾಗೂ ಮುಷ್ಕರವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಯು ಎಫ್ ಬಿ ಯು ತಿಳಿಸಿದೆ.
ಎಲ್ಲ ಶನಿವಾರಗಳನ್ನೂ ಬ್ಯಾಂಕ್ ರಜೆಯನ್ನಾಗಿ ಮಾಡುವ ಬೇಡಿಕೆ ಕುರಿತು ಐಬಿಎ ಮತ್ತು ಯು ಎಫ್ ಬಿ ಯು ಒಳಗೊಂಡ ಜಂಟಿ ಸಮಿತಿಯನ್ನು ತಕ್ಷಣ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಆಯ್ಕೆಗಳನ್ನು ಪರಿಶೀಲಿಸಲಿದೆ. ಗ್ರಾಹಕರು ಸೇರಿದಂತೆ ಪರಿಣಾಮ ಬೀರುವ ಎಲ್ಲರೊಂದಿಗೆ ಚರ್ಚಿಸಿ, ಎಲ್ಲರಿಗೂ ಒಪ್ಪುವ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿದೆ.
ಮಾರ್ಚ್ 8, 2024ರಂದು ಐಬಿಎ ಎಲ್ಲ ಶನಿವಾರಗಳನ್ನೂ ಬ್ಯಾಂಕ್ ರಜೆಯನ್ನಾಗಿ ಮಾಡುವ ಪ್ರಸ್ತಾವಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು. ಇದಕ್ಕೆ ಪ್ರತಿಯಾಗಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸುಮಾರು 40 £ಮಿಷ ಹೆಚ್ಚುವರಿ ಕೆಲಸ ಮಾಡುವ ಪ್ರಸ್ತಾವವಿತ್ತು. ಈ ಪ್ರಸ್ತಾವವನ್ನು ಸರ್ಕಾರದ ಅನುಮೋದನೆಗಾಗಿ ಕಳುಹಿಸಿ ಎರಡು ವರ್ಷಕ್ಕೂ ಹೆಚ್ಚು ಕಾಲ ಕಳೆದಿದ್ದರೂ ಇನ್ನೂ ಅಂತಿಮ ಅನುಮತಿ ದೊರೆತಿಲ್ಲ ಎಂದು ಬ್ಯಾಂಕ್ ನೌಕರರ ಸಂಘಟನೆಗಳು ಹೇಳುತ್ತಿವೆ.
ಹಿರಿಯ ಅಧಿಕಾರಿಗಳ ಪಿ ಎಲ್ ಐ ಯೋಜನೆ ಬದಲಾವಣೆಗೂ ಚರ್ಚೆ ನಡೆದಿದೆ. ಸ್ಕೇಲ್ 4 ಹಾಗೂ ಅದಕ್ಕಿಂತ ಮೇಲಿನ ಹಂತದ ಅಧಿಕಾರಿಗಳಿಗೆ ಅನ್ವಯಿಸುವ ಕಾರ್ಯಕ್ಷಮತೆ ಆಧಾರಿತ ಪೆÇ್ರೀತ್ಸಾಹಧನ (ಪಿ ಎಲ್ ಐ) ಯೋಜನೆಯ ಬದಲಾವಣೆ ಕುರಿತೂ ಐಬಿಎ ಜತೆ ಮಾತುಕತೆ ಆರಂಭಿಸಲು ಒಪ್ಪಿಗೆ ನೀಡಲಾಗಿದೆ.
ಈ ಯೋಜನೆಯಡಿ ಸ್ಕೇಲ್ 4 ಮತ್ತು ಮೇಲಿನ ಅಧಿಕಾರಿಗಳಿಗೆ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಗರಿಷ್ಠ 365 ದಿನಗಳ ಮೂಲ ವೇತನದಷ್ಟು ಪೆÇ್ರೀತ್ಸಾಹಧನ ಸಿಗುವ ಅವಕಾಶವಿದೆ. ಸ್ಕೇಲ್3 ವರೆಗೆ ಇರುವ ಇತರ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಗರಿಷ್ಠ 15 ದಿನಗಳ ಮೂಲ ವೇತನದ ಜೊತೆಗೆ ತುಟ್ಟಿಭತ್ಯೆ (ಡಿಎ) ಆಧಾರಿತ ಪೆÇ್ರೀತ್ಸಾಹಧನ ಸಿಗುತ್ತದೆ. ಈ ವ್ಯತ್ಯಾಸದ ಬಗ್ಗೆ ಬ್ಯಾಂಕ್ ನೌಕರರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಹಿಂದೆ ಪೆÇ್ರೀತ್ಸಾಹಧನವು ವೈಯಕ್ತಿಕ ಕಾರ್ಯಕ್ಷಮತೆಗಿಂತ ಇಡೀ ಬ್ಯಾಂಕಿನ ಕಾರ್ಯಕ್ಷಮತೆಯನ್ನು ಆಧರಿಸಬೇಕು ಹಾಗೂ ಎಲ್ಲರಿಗೂ ಸಮಾನವಾಗಿರಬೇಕು ಎಂಬ ಒಪ್ಪಂದವಾಗಿತ್ತು ಎಂಬುದು ಸಂಘಟನೆಗಳ ವಾದ.
ಬಾಕಿ ಬೇಡಿಕೆಗಳ ಬಗ್ಗೆಯೂ ಚರ್ಚೆ : ಮಾರ್ಚ್ 8, 2024ರ ಸಭೆಯ ನಡಾವಳಿಯಲ್ಲಿ ದಾಖಲಿಸಿರುವ ಇತರ ಬಾಕಿ ವಿಷಯಗಳ ಕುರಿತೂ ಚರ್ಚೆ ನಡೆಸಿ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಈ ಒಪ್ಪಂದಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಯೋಜಿಸಿದ್ದ ಪ್ರತಿಭಟನೆ ಹಾಗೂ ಮುಷ್ಕರಗಳನ್ನು ಮುಂದೂಡುತ್ತಿರುವುದಾಗಿ ತಿಳಿಸಿದೆ.
ಐದು ದಿನಗಳ ಕೆಲಸದ ವಾರ ಜಾರಿ ಹಾಗೂ ಹಿರಿಯ ಅಧಿಕಾರಿಗಳ ಹೊಸ ಕಾರ್ಯಕ್ಷಮತೆ ಆಧಾರಿತ ಪೆÇ್ರೀತ್ಸಾಹಧನ ಯೋಜನೆಯಲ್ಲಿ ಬದಲಾವಣೆ ಸೇರಿದಂತೆ ಎರಡು ಪ್ರಮುಖ ಬೇಡಿಕೆಗಳಿಗಾಗಿ ಬ್ಯಾಂಕ್ ನೌಕರರ ಸಂಘಟನೆಗಳು ಈ ವರ್ಷದಿಂದಲೇ ಹೋರಾಟ ನಡೆಸುತ್ತಿವೆ. ಇದೀಗ ಐಬಿಎ-ಯು ಎಫ್ ಬಿ ಯು ನಡುವೆ ನಡೆದ ಮಾತುಕತೆಯಲ್ಲಿ ಜಂಟಿ ಸಮಿತಿ ರಚನೆ ಹಾಗೂ ಮುಂದಿನ ಚರ್ಚೆಗಳಿಗೆ ಒಪ್ಪಿಗೆ ದೊರೆತಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಮುಂದೂಡಲಾಗಿದೆ.













0 comments:
Post a Comment