ಬಂಗ್ಲೆಗುಡ್ಡೆ ಅಬೂಬಕ್ಕರ್ (ಹೋಟೆಲ್ ಅಬ್ಬು) ಅನಾರೋಗ್ಯದಿಂದ ನಿಧನ - Karavali Times ಬಂಗ್ಲೆಗುಡ್ಡೆ ಅಬೂಬಕ್ಕರ್ (ಹೋಟೆಲ್ ಅಬ್ಬು) ಅನಾರೋಗ್ಯದಿಂದ ನಿಧನ - Karavali Times

728x90

5 September 2026

ಬಂಗ್ಲೆಗುಡ್ಡೆ ಅಬೂಬಕ್ಕರ್ (ಹೋಟೆಲ್ ಅಬ್ಬು) ಅನಾರೋಗ್ಯದಿಂದ ನಿಧನ

ಬಂಟ್ವಾಳ, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ನಿವಾಸಿ ಅಬೂಬಕ್ಕರ್ ಯಾನೆ ಹೋಟೆಲ್ ಅಬ್ಬುವಾಕ (67) ಅವರು ಸೆಪ್ಟೆಂಬರ್ 5 ರಂದು ಶನಿವಾರ ರಾತ್ರಿ ನಿಧನರಾದರು. 

ಸೆ 3 ರಂದು ಹಠಾತ್ ಅನಾರೋಗ್ಯಕ್ಕೀಡಾದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ತೀರಾ ಹದಗೆಟ್ಟ ಪರಿಣಾಮ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಶನಿವಾರ ರಾತ್ರಿ ವಾಪಾಸು ಮನೆಗೆ ಕರೆತರಲಾಗಿತ್ತು. ರಾತ್ರಿ ಸುಮಾರು 10.05ರ ವೇಳೆಗೆ ಅವರು ಬಂಗ್ಲೆಗಗುಡ್ಡೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 

ಮೃತರು ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ದಫನ ಕ್ರಿಯೆ ಸೆ 6 ರಂದು ಭಾನುವಾರ ಬೆಳಿಗ್ಗೆ ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ.

ಅಬೂಬಕ್ಕರ್ ಯಾನೆ ಹೋಟೆಲ್ ಅಬ್ಬು ಅವರು ಈ ಹಿಂದೆ ಆಲಡ್ಕದಲ್ಲಿ ಹೋಟೆಲ್ ನಡೆಸುತ್ತಿದ್ದವರು ಬಳಿಕ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ ಹಲವು ವರ್ಷಗಳ ಕಾಲ ಸೌದಿಯ ಹಪರ್ ಅಲ್-ಬಾತಿನ್ ಎಂಬಲ್ಲಿ ಉದ್ಯೋಗಿಯಾಗಿದ್ದರು. ಇವರ ಇಬ್ಬರು ಪುತ್ರರು ಹಾಗೂ ಇಬ್ಬರು ಸಹೋದರರು ಕೊಲ್ಲಿ ರಾಷ್ಟ್ರದಲ್ಲಿದ್ದು, ಇತ್ತೀಚೆಗಷ್ಟೆ ಊರಿಗೆ ಬಂದು ವಾಪಾಸು ಮರಳಿದ್ದರು. ಮರಣದ ಸುದ್ದಿ ತಿಳಿದು ಶನಿವಾರ ರಾತ್ರಿ ಮತ್ತೆ ಊರಿಗೆ ಬಂದಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಬಂಗ್ಲೆಗುಡ್ಡೆ ಅಬೂಬಕ್ಕರ್ (ಹೋಟೆಲ್ ಅಬ್ಬು) ಅನಾರೋಗ್ಯದಿಂದ ನಿಧನ Rating: 5 Reviewed By: karavali Times
Scroll to Top