ನರಿಕೊಂಬು : ಶೈಕ್ಷಣಿಕ ಸಾಧನೆಗಾಗಿ ಹಿತೈಷಿ ಸಂಸ್ಥೆಯ ಡೈರೆಕ್ಟರ್ ಹಿತೇಶ್ ಕುಮಾರ್ ಅವರಿಗೆ ಗೌರವಾಭಿನಂದನೆ - Karavali Times ನರಿಕೊಂಬು : ಶೈಕ್ಷಣಿಕ ಸಾಧನೆಗಾಗಿ ಹಿತೈಷಿ ಸಂಸ್ಥೆಯ ಡೈರೆಕ್ಟರ್ ಹಿತೇಶ್ ಕುಮಾರ್ ಅವರಿಗೆ ಗೌರವಾಭಿನಂದನೆ - Karavali Times

728x90

6 September 2026

ನರಿಕೊಂಬು : ಶೈಕ್ಷಣಿಕ ಸಾಧನೆಗಾಗಿ ಹಿತೈಷಿ ಸಂಸ್ಥೆಯ ಡೈರೆಕ್ಟರ್ ಹಿತೇಶ್ ಕುಮಾರ್ ಅವರಿಗೆ ಗೌರವಾಭಿನಂದನೆ

ಬಂಟ್ವಾಳ, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : 2024 ಹಾಗೂ 2026 ರ ಎನ್ ಬಿ ಸಿ ಇ ಸಿಲ್ವರ್ ಸೆಂಟರ್ ಎವಾರ್ಡ್ ಪಡೆದು ಕಳೆದ 10 ವರ್ಷಗಳಿಂದ ಉತ್ತಮ ಹಾಗೂ ಗುಣ ಮಟ್ಟದ ತರಬೇತಿ ನೀಡುತಿರುವ ಶಿಕ್ಷಣ ಸಂಸ್ಥೆ ಹಿತೈಷಿ ಎಜ್ಯುಕೇಶನ್ ಇನ್ಸ್ಟಿಟ್ಯೂಟ್ (ರಿ) ಸೆಂಟರ್ ಇದರ ಡೈರೆಕ್ಟರ್ ಹಿತೇಶ್ ಕುಮಾರ್ ಅವರ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ನರಿಕೊಂಬು ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆ 5 ರಂದು ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

ಹಿತೈಷಿ ಸಂಸ್ಥೆಯು 2024-25ರ ಶೈಕ್ಷಣಿಕ ವರ್ಷದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ಆಧಾರಿತ ಕೋರ್ಸ್‍ಗಳನ್ನು ಹಾಗೂ 1 ರಿಂದ ಎಸ್ಸೆಸ್ಸೆಲ್ಸಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮತ್ತು ಸಿಇಟಿ, ನೀಟ್, ಸಿಎ ಫೌಂಡೇಶನ್ ತರಗತಿಗಳನ್ನು ಉತ್ತಮ ತರಬೇತಿಯೊಂದಿಗೆ ನೀಡಿದ್ದು, ಈ ಸಾಧನೆಗಾಗಿ ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಾರ್ಯಗಾರದಲ್ಲಿ ಬೆಸ್ಟ್ ಸೆಂಟರ್ ಅವಾರ್ಡ್ 2024, ಬೆಸ್ಟ್ ಟ್ರೈನಿಂಗ್ ಸೆಂಟರ್ ಅವಾರ್ಡ್ 2024, ಬೆಸ್ಟ್ ಸೆಂಟರ್ ಅವಾರ್ಡ್ 2026 ಪ್ರಶಸ್ತಿಯನ್ನು ಸಂಸ್ಥೆಯು ಪಡೆದುಕೊಂಡಿದೆ. ಹಿತೇಶ್ ಕುಮಾರ್ ಅವರ ಈ ಸಾಧನೆಯನ್ನು ಗುರುತಿಸಿ ನರಿಕೊಂಬು ಯುವಕ ಮಂಡಲದ ವತಿಯಿಂದ ಗೌರವಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ನರಿಕೊಂಬು : ಶೈಕ್ಷಣಿಕ ಸಾಧನೆಗಾಗಿ ಹಿತೈಷಿ ಸಂಸ್ಥೆಯ ಡೈರೆಕ್ಟರ್ ಹಿತೇಶ್ ಕುಮಾರ್ ಅವರಿಗೆ ಗೌರವಾಭಿನಂದನೆ Rating: 5 Reviewed By: karavali Times
Scroll to Top