ಬಂಟ್ವಾಳ, ಸೆಪ್ಟೆಂಬರ್ 23, 2026 (ಕರಾವಳಿ ಟೈಮ್ಸ್) : ಕಾರ್ಕಳ-ಸಾಣೂರಿನಲ್ಲಿ ಸೆ 20 ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಪವಾಡಸದೃಶ ಪಾರಾದ ಮಾಜಿ ಸಚಿವ ಬಿ ರಮಾನಾಥ ರೈ ಅವರಿಗಾದ ಅಪಘಾತದ ಬಗ್ಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ಕಿನಲ್ಲಿ ಅವ್ಯಾಚ್ಯವಾಗಿ ನಿಂದಿಸಿ ಸಂದೇಶ ಹರಿಯಬಿಟ್ಟಿರುವ ಆರೋಪಿ ಪ್ರಭಾಕರ ಹೆಗ್ಡೆ ಎಂಬಾತನ ವಿರುದ್ದ ಸೆ 23 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ನೇತೃತ್ವದ ನಿಯೋಗ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಪ್ರಭಾಕರ ಹೆಗ್ಡೆ ಎಂಬಾತ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ಕಿನಲ್ಲಿ ರಮಾನಾಥ ರೈ ಅವರ ಕಾರು ಅಪಘಾತದ ದೃಶ್ಯವನ್ನು ಯಾರೋ ಹಂಚಿಕೊಂಡ ಪೆÇೀಸ್ಟಿಗೆ “ಇವನು ಮಾಡಿದುನ್ನು ಮಹಾರಾಯ ರಾಮನನ್ನ ತೆಗಲಿದ ಕಾಂಗ್ರೆಸ್ ಜಿಹಾದಿಗೆ ಇಂದು ಒಂದು ರಾಮನ ಮುಂಜಾಗ್ರತೆ ಇಂಜೆಕ್ಷನ್ ಮುಂದೆ ನೋಡು ಸೂಳೆ ಮಗನೇ ನಿನ್ನ ಗತಿ !!!” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ವಿಕೃತಿ ಮೇರೆದಿದ್ದು, ಆತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.














0 comments:
Post a Comment