ಎಸ್ಕೆಎಸ್ಸೆಸ್ಸೆಫ್ ನೆಹರುನಗರ ಶಾಖೆಯ ನೂತನ ಅಧ್ಯಕ್ಷರಾಗಿ ಪಿ.ಎಸ್. ಅಬ್ದುಲ್ ಲತೀಫ್ ಆಯ್ಕೆ - Karavali Times ಎಸ್ಕೆಎಸ್ಸೆಸ್ಸೆಫ್ ನೆಹರುನಗರ ಶಾಖೆಯ ನೂತನ ಅಧ್ಯಕ್ಷರಾಗಿ ಪಿ.ಎಸ್. ಅಬ್ದುಲ್ ಲತೀಫ್ ಆಯ್ಕೆ - Karavali Times

728x90

23 September 2026

ಎಸ್ಕೆಎಸ್ಸೆಸ್ಸೆಫ್ ನೆಹರುನಗರ ಶಾಖೆಯ ನೂತನ ಅಧ್ಯಕ್ಷರಾಗಿ ಪಿ.ಎಸ್. ಅಬ್ದುಲ್ ಲತೀಫ್ ಆಯ್ಕೆ

ಬಂಟ್ವಾಳ, ಸೆಪ್ಟೆಂಬರ್ 23, 2026 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು-ನೆಹರುನಗರ ಶಾಖೆಯ ನೂತನ ಅಧ್ಯಕ್ಷರಾಗಿ ಪಿ ಎಸ್ ಅಬ್ದುಲ್ ಲತೀಫ್ ಆಯ್ಕೆಯಾಗಿದ್ದಾರೆ. ಇಲ್ಲಿನ ಅಲ್ ಬದ್ರಿಯಾ ಮದ್ರಸ ಸಭಾಂಗಣದಲ್ಲಿ ಸೆ 20 ರಂದು ನಡೆದ 2026-2029ನೇ ಸಾಲಿನ ನೂತನ ಸಮಿತಿ ರಚನಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. 

ಉಪಾಧ್ಯಕ್ಷರಾಗಿ ಮಹಮ್ಮದ್ ಮೇಸ್ತ್ರಿ, ಅಬ್ದುಲ್ ರಹಿಮಾನ್ ಕೀಳಂಗಡಿ ಹಾಗೂ ಮುಬಾರಕ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್, ಕೋಶಾಧಿಕಾರಿಯಾಗಿ ಮಹಮ್ಮದ್ ರಮೀಝ್,  ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ರಿಝ್ವಾನ್, ಮುಹಮ್ಮದ್ ಕಾಮಿಲ್, ಅರ್ಫಾಝ್ ಹಾಗೂ ಸುಹೈಲ್ ಅವರು ಆಯ್ಕೆಯಾಗಿದ್ದಾರೆ. 

ನೆಹರುನಗರ ಬದ್ರಿಯಾ ಜುಮಾ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಪೈಝಿ ದುಆ ನೆರವೇರಿಸಿ, ನೂತನ ಸಮಿತಿಯು ಸಂಘಟನೆಯ ಆಶಯ ಹಾಗೂ ಧ್ಯೇಯಗಳನ್ನು ಮುಂದುವರಿಸಿಕೊಂಡು, ಯುವ ಸಮುದಾಯದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಸಲಹೆ ನೀಡಿದರು. ಅನ್ವರ್ ಅಝ್ಝರಿ ಸ್ವಾಗತಿಸಿದರು.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಎಸ್ಕೆಎಸ್ಸೆಸ್ಸೆಫ್ ನೆಹರುನಗರ ಶಾಖೆಯ ನೂತನ ಅಧ್ಯಕ್ಷರಾಗಿ ಪಿ.ಎಸ್. ಅಬ್ದುಲ್ ಲತೀಫ್ ಆಯ್ಕೆ Rating: 5 Reviewed By: karavali Times
Scroll to Top