ಬಂಟ್ವಾಳ, ಸೆಪ್ಟೆಂಬರ್ 02, 2026 (ಕರಾವಳಿ ಟೈಮ್ಸ್) : ಕ್ಯಾಂಪ್ಕೋ ಸದಸ್ಯ ಶಿವಪ್ಪ ಅವರ ಹೃದಯ ಚಿಕಿತ್ಸೆಗಾಗಿ ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ 50 ಸಾವಿರ ರೂಪಾಯಿ ಸಹಾಯ ಧನವನ್ನು ಕ್ಯಾಂಪ್ಕೋ ಮಂಚಿ ಶಾಖೆಯಲ್ಲಿ ಹಸ್ತಾಂತರಿಸಲಾಯಿತು.
ಕ್ಯಾಂಪ್ಕೋದ ಸಾಂತ್ವನ ಯೋಜನೆಯಡಿ ಶಿವಪ್ಪ ಅವರಿಗೆ ಮಂಜೂರಾದ ಈ ಸಹಾಯಧನದ ಮೊತ್ತವನ್ನು ಸಂಸ್ಥೆಯ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಅವರು ಫಲಾನುಭವಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಸ್ಥೆಯ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಕುಮಾರ್ ಶೆಟ್ಟಿ, ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಪಿ ಹಾಗೂ ಕ್ಯಾಂಪ್ಕೋ ಮಂಚಿ ಶಾಖೆಯ ಸಿಬ್ಬಂದಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.











0 comments:
Post a Comment