ಬಂಟ್ವಾಳ, ಸೆಪ್ಟೆಂಬರ್ 02, 2026 (ಕರಾವಳಿ ಟೈಮ್ಸ್) : ಬಿ ಕಸ್ಬಾ ಗ್ರಾಮದ ಬಂಟ್ವಾಳ ಪೇಟೆ ಸಮೀಪದ ಬಡ್ಡಕಟ್ಟೆ ಎಂಬಲ್ಲಿ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಸವಾರ ಅಂಗಡಿಯಲ್ಲಿ ಸಾಮಾನು ಖರೀದಿಸುತ್ತಿದ್ದ ವೇಳೆ ಸ್ಕೂಟರಿಗೆ ಟೆಂಪೋ ಡಿಕ್ಕಿ ಹೊಡೆದ ಘಟನೆ ಸೆಪ್ಟೆಂಬರ್ 1 ರಂದು ರಾತ್ರಿ ವೇಳೆ ಸಂಭವಿಸಿದೆ.
ಬಿ ಕಸ್ಬಾ ಗ್ರಾಮದ ಚೆಂಡ್ತಿಮಾರ್ ನಿವಾಸಿ ಮೋಹನ್ ಚಂಡ್ತಿಮಾರು (50) ಅವರು ಸೆ 1 ರಂದು ರಾತ್ರಿ ಸುಮಾರು 7.53ರ ವೇಳೆಗೆ ಬಂಟ್ವಾಳ ಪೇಟೆ ಬಡ್ಡಕಟ್ಟೆ ಎಂಬಲ್ಲಿ ತಮ್ಮ ಸ್ಕೂಟರ್ ರಸ್ತೆ ಬದಿ ನಿಲ್ಲಿಸಿ ಅಂಗಡಿಯೊಂದರಲ್ಲಿ ಮನೆಗೆ ಸಾಮಾನು ತೆಗೆದುಕೊಳ್ಳುತ್ತಿದ್ದ ಸಂದರ್ಭ ಬಿ ಸಿ ರೋಡು ಕಡೆಯಿಂದ ಬಂಟ್ವಾಳ ಪೇಟೆ ಮಾರ್ಗದಲ್ಲಿ ಅಬ್ದುಲ್ ರಜಾಕ್ ಎಂಬವರು ಚಲಾಯಿಸಿಕೊಂಡು ಬಂದ ಟೆಂಪೆÇೀ ವಾಹನ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಸ್ಕೂಟರ್ ರಸ್ತೆಗೆ ಬಿದ್ದಿರುತ್ತದೆ ಎಂದು ಮೋಹನ್ ಅವರು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment