ಪುತ್ತೂರು ಪ್ರೆಸ್ ಕ್ಲಬ್ ಬಳಿ ಗಲಾಟೆ : ತಂಡದ ವಿರುದ್ದ ಪೊಲೀಸ್ ಕೇಸು ದಾಖಲು - Karavali Times ಪುತ್ತೂರು ಪ್ರೆಸ್ ಕ್ಲಬ್ ಬಳಿ ಗಲಾಟೆ : ತಂಡದ ವಿರುದ್ದ ಪೊಲೀಸ್ ಕೇಸು ದಾಖಲು - Karavali Times

728x90

1 September 2026

ಪುತ್ತೂರು ಪ್ರೆಸ್ ಕ್ಲಬ್ ಬಳಿ ಗಲಾಟೆ : ತಂಡದ ವಿರುದ್ದ ಪೊಲೀಸ್ ಕೇಸು ದಾಖಲು

 ಪುತ್ತೂರು, ಸೆಪ್ಟೆಂಬರ್  02, 2026 (ಕರಾವಳಿ ಟೈಮ್ಸ್) : ಪುತ್ತೂರು ಪ್ರೆಸ್ ಕ್ಲಬ್ ಬಳಿ ಸೆ 1 ರಂದು ಗಲಾಟೆ ನಡೆಸಿ ಹೊಯಿ-ಕೈ ನಡೆಸಿದ ತಂಡದ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಸೆ 1 ರಂದು ಮಧ್ಯಾಹ್ನ ವೇಳೆ, ಪುತ್ತೂರು ಕಸಬ ಗ್ರಾಮದ ಪುತ್ತೂರು ಪ್ರೆಸ್ ಕ್ಲಬ್ ಎದುರು ಸಾರ್ವಜನಿಕ ಸ್ಥಳದಲ್ಲಿ ಜನರು ಗುಂಪು ಸೇರಿ ಗಲಾಟೆ ನಡೆಸುತ್ತಿರುವುದಾಗಿ ಪುತ್ತೂರು ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಜಾನ್ಸನ್ ಡಿಸೋಜ ಅವರಿಗೆ ಮಾಹಿತಿ ಬಂದ ಮೇರೆಗೆ, ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ, ಅಲ್ಲಿ ಕೆಲವು ಜನರು ಪರಸ್ಪರ ಕೈ ಕೈ ಮಿಲಾಯಿಸಿ ಗಲಾಟೆ ಮಾಡುತ್ತಾ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುತ್ತಿರುವುದು ಕಂಡುಬಂದಿದೆ. ಅವರೊಂದಿಗೆ ಪೊಲೀಸರು ತಿಳುವಳಿಕೆ ನೀಡಿದರೂ ಅವರುಗಳು ಕಲಹ ಮುಂದುವರಿಸಿರುವ ಹಿನ್ನೆಲೆಯಲ್ಲಿ ಮುಂಡೂರು ಗ್ರಾಮದ ಪ್ರವೀಣ್ ಆಚಾರ್ಯ, ಕೂರ್ನಡ್ಕದ  ರವೂಫ್ ಹಾಗೂ ಬೋಳ್ವಾರಿನ ಹಕೀಂ ಹಾಗೂ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2026, ಕಲಂ 194(2) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಪ್ರೆಸ್ ಕ್ಲಬ್ ಬಳಿ ಗಲಾಟೆ : ತಂಡದ ವಿರುದ್ದ ಪೊಲೀಸ್ ಕೇಸು ದಾಖಲು Rating: 5 Reviewed By: lk
Scroll to Top