ಪೆರ್ನೆ : ದಂಪತಿ ಕಲಹದಿಂದ ಕೋಪಗೊಂಡು ಇಬ್ಬರು ಪುಟಾಣಿಗಳನ್ನು ಬಾವಿಗೆಸೆದ ರಾಕ್ಷಸೀ ಪತ್ನಿ, ಒಂದು ಮಗು ಮೃತ್ಯು, ಇನ್ನೊಂದು ಪುಟಾಣಿ ಗಂಭೀರ - Karavali Times ಪೆರ್ನೆ : ದಂಪತಿ ಕಲಹದಿಂದ ಕೋಪಗೊಂಡು ಇಬ್ಬರು ಪುಟಾಣಿಗಳನ್ನು ಬಾವಿಗೆಸೆದ ರಾಕ್ಷಸೀ ಪತ್ನಿ, ಒಂದು ಮಗು ಮೃತ್ಯು, ಇನ್ನೊಂದು ಪುಟಾಣಿ ಗಂಭೀರ - Karavali Times

728x90

19 September 2026

ಪೆರ್ನೆ : ದಂಪತಿ ಕಲಹದಿಂದ ಕೋಪಗೊಂಡು ಇಬ್ಬರು ಪುಟಾಣಿಗಳನ್ನು ಬಾವಿಗೆಸೆದ ರಾಕ್ಷಸೀ ಪತ್ನಿ, ಒಂದು ಮಗು ಮೃತ್ಯು, ಇನ್ನೊಂದು ಪುಟಾಣಿ ಗಂಭೀರ

ಬಂಟ್ವಾಳ, ಸೆಪ್ಟೆಂಬರ್ 19, 2026 (ಕರಾವಳಿ ಟೈಮ್ಸ್) : ತಾಲೂಕಿನ ಪೆರ್ನೆ ಎಂಬಲ್ಲಿ ದಂಪತಿಗಳ ನಡುವಿನ ವೈವಾಹಿಕ ಕಲಹದಿಂದ ಕೋಪಗೊಂಡ ಪತ್ನಿ ಇಬ್ಬರು ಪುಟಾಣಿಗಳನ್ನು ಬಾವಿಗೆಸೆದ ಪರಿಣಾಮ ಒಂದು ಮಗು ಮೃತಪಟ್ಟಿದ್ದು, ಇನ್ನೊಂದು ಗಂಭೀರಾವಸ್ಥೆಯಲ್ಲಿ ಆಸ್ಪತೆಗೆ ದಾಖಲಾದ ಹೃದಯ ವಿದ್ರಾವಕ ಘಟನೆ ಸೆ 19 ರಂದು ಸಂಭವಿಸಿದೆ. 

ಸೆ 19 ರಂದು ಮಧ್ಯಾಹ್ನದ ವೇಳೆ ಈ ಘಟನೆ ಸಂಭವಿಸಿದೆ. ಪೆರ್ನೆ ನಿವಾಸಿ ಸಿನಾನ್ (32) ಹಾಗೂ ನೂರುನ್ನಿಸಾ (28) ದಂಪತಿಗಳ ನಡುವೆ ಫೆÇೀನ್ ಕರೆಯಲ್ಲಿ ವೈವಾಹಿಕ ಕಲಹ ನಡೆದಿರುತ್ತದೆ. ಕಲಹದಿಂದ ಕೊಪಗೊಂಡ ಆರೋಪಿ ಪತ್ನಿ ನೂರುನ್ನಿಸಾ, ಮನೆಯಲ್ಲಿದ್ದ ಆಕೆಯ ಮೂರುವರೆ ವರ್ಷದ ಮಗು ಆಲಿಯಾ ಹಾಗೂ ಆಕೆಯ ಗಂಡನ ತಂಗಿಯ ಮೂರು ವರ್ಷದ ಮಗು ರಬೀಹ್ ಅವರನ್ನು ಮನೆ ಸಮೀಪದ ಬಾವಿಗೆ ಎಸೆದಿರುತ್ತಾಳೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ಮೇಲಕ್ಕೆ ಎತ್ತಿದರಾದರೂ ಅದಾಗಲೇ ಆರೋಪಿತೆಯ ಗಂಡನ ತಂಗಿಯ ಮಗು ರಬೀಹ್ ಮೃತಪಟ್ಟಿದ್ದು, ಆರೋಪಿತೆಯ ಮಗು ಆಲಿಯಾಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತೆ ನೂರುನ್ನೀಸಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪೆರ್ನೆ : ದಂಪತಿ ಕಲಹದಿಂದ ಕೋಪಗೊಂಡು ಇಬ್ಬರು ಪುಟಾಣಿಗಳನ್ನು ಬಾವಿಗೆಸೆದ ರಾಕ್ಷಸೀ ಪತ್ನಿ, ಒಂದು ಮಗು ಮೃತ್ಯು, ಇನ್ನೊಂದು ಪುಟಾಣಿ ಗಂಭೀರ Rating: 5 Reviewed By: karavali Times
Scroll to Top