ಪುತ್ತೂರು : ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ ವ್ಯಕ್ತಿಗೆ ಜೀವಬೆದರಿಕೆ ಒಡ್ಡಿದ ತಂಡ ವಿರುದ್ದ ಎಫ್.ಐ.ಆರ್. ದಾಖಲು - Karavali Times ಪುತ್ತೂರು : ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ ವ್ಯಕ್ತಿಗೆ ಜೀವಬೆದರಿಕೆ ಒಡ್ಡಿದ ತಂಡ ವಿರುದ್ದ ಎಫ್.ಐ.ಆರ್. ದಾಖಲು - Karavali Times

728x90

3 September 2026

ಪುತ್ತೂರು : ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ ವ್ಯಕ್ತಿಗೆ ಜೀವಬೆದರಿಕೆ ಒಡ್ಡಿದ ತಂಡ ವಿರುದ್ದ ಎಫ್.ಐ.ಆರ್. ದಾಖಲು

ಪುತ್ತೂರು, ಸೆಪ್ಟೆಂಬರ್ 03, 2026 (ಕರಾವಳಿ ಟೈಮ್ಸ್) : ವೈಯುಕ್ತಿಕ ಆಪಾದನೆಗಳ ಬಗ್ಗೆ ಸ್ಪಷ್ಟನೆ ನೀಡಲು ಪುತ್ತೂರು ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ ಹಕೀಂ ಎಂಬವರಿಗೆ ನಿಂದಿಸಿ ಜೀವಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪುತ್ತೂರು-ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರು ರಾಜಕೀಯ ಪಕ್ಷವೊಂದರ  ಕಾರ್ಯಕರ್ತನಾಗಿದ್ದು, ಇವರ ಬಗ್ಗೆ ಮಾಡಲಾಗಿರುವ ಕೆಲವು ಅಪಾದನೆಗಳ ಬಗ್ಗೆ ಸ್ಪಷ್ಟನೆ ಕೊಡುವ ಸಲುವಾಗಿ ಸೆ 1 ರಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಿ ಪುತ್ತೂರಿನ ಪ್ರೆಸ್ ಕ್ಲಬ್ಬಿಗೆ ಬಂದಿದ್ದಾಗ, ಆರೋಪಿಗಳಾದ ಉದಯ ಪಾಟಾಳಿ, ಜುನೈದ ಬಿ ಜಿ, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ, ಹಕೀಮ ಬೋಲ್ವಾರು, ಮೋನು ಬಪ್ಪಳಿಗೆ, ನಾಶಿರ್ ಕೋಲ್ಪೆ, ಪ್ರವೀನ್ ಆಚಾರ್ಯ ಹಾಗೂ ಇತರರು ಸೇರಿ  ಹಕೀಂ ಅವರನ್ನು ತಳ್ಳಾಡಿ, ಅವ್ಯಾಚವಾಗಿ ನಿಂದಿಸಿ, ಜೀವಬೆದರಿಕೆ ಒಡ್ಡಿರುತ್ತಾರೆ. ಬಳಿಕ ಪ್ರೆಸ್ ಕ್ಲಬ್ ಒಳಗೆ ಹೋಗಿದ್ದ ಹಕೀಂ ಅವರನ್ನು ಹಿಂತಿರುಗಿ ಹೊರಗೆ ಬರದಂತೆ ಅಕ್ರಮವಾಗಿ ತಡೆದಿರುತ್ತಾರೆ. ಆರೋಪಿಗಳ ತಳ್ಳಾಟದಿಂದಾದ ನೋವಿಗಾಗಿ ಚಿಕಿತ್ಸೆ ಪಡೆಯಲು ಹಕೀಂ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ದ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 105/2026 ಕಲಂ 127(2), 351(1), 351(2), 351(3), 352, 115 ಆರ್/ಡಬ್ಲ್ಯು 3(5) ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ ವ್ಯಕ್ತಿಗೆ ಜೀವಬೆದರಿಕೆ ಒಡ್ಡಿದ ತಂಡ ವಿರುದ್ದ ಎಫ್.ಐ.ಆರ್. ದಾಖಲು Rating: 5 Reviewed By: karavali Times
Scroll to Top