ಮೂಡಬಿದ್ರೆ, ಸೆಪ್ಟೆಂಬರ್ 03, 2026 (ಕರಾವಳಿ ಟೈಮ್ಸ್) : 2009ನೇ ಸಾಲಿನ ಮೇ ತಿಂಗಳಲ್ಲಿ ವಾಹನಗಳನ್ನು ಖರೀದಿಸಲು ಸಾಲ/ ಹಣಕಾಸು ಸಹಾಯ ಮಾಡುವ ಸಂಸ್ಥೆಯಾದ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಷರತ್ತುಗಳಿಗೆ ಒಪ್ಪಿ ಟೆಲ್ಕಾನ್ ಇ ಎಕ್ಸ್ 70 ಮೆಶಿನ್ ವಾಹನವನ್ನು ಖರೀದಿಸುವ ಬಗ್ಗೆ 10 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಷರತ್ತಿನಂತೆ ವಾಹನ ಖರೀದಿಸಿದ ಬಳಿಕ ವಾಹನದ ಸಾಲದ ಕಂತನ್ನು ಶ್ರೀರಾಮ್ ಫೈನಾನ್ಸ್ ಸಂಸ್ಥೆಗೆ ಮರುಪಾವತಿಸದೇ ಬಾಕಿ ಇರಿಸಿದ್ದು, ವಾಹನವನ್ನು ತಪಾಸಣೆ ಬಗ್ಗೆ ಹಾಜರುಪಡಿಸಲು ತಿಳಿಸಿದಲ್ಲಿ ವಾಹನವನ್ನು ಹಾಜರುಪಡಿಸದೇ ಶ್ರೀರಾಮ್ ಫೈನಾನ್ಸ್ ಸಂಸ್ಥೆಗೆ ವಂಚನೆ ಮಾಡಿರುವ ಬಗ್ಗೆ ಸುಳ್ಯ ತಾಲೂಕು, ಜಾಲ್ಸೂರು-ಬೈತಡ್ಕ ನಿವಾಸಿ ದಿವಂಗತ ರಾಮ್ ಕುಮಾರ್ ಎಂಬವರ ಪುತ್ರ ಶ್ರೀನಿವಾಸ ಬಿ.ಆರ್. ಎಂಬವರ ವಿರುದ್ದ ಮೂಡಬಿದ್ರೆ ಠಾಣೆಯಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ದೂರಿನಂತೆ ಮೂಡಬಿದ್ರೆ ಠಾಣೆಯಲ್ಲಿ ಅ.ಕ್ರ. 59/2012 ಕಲಂ 406, 420, 421 ಜತೆಗೆ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿ ಶ್ರೀನಿವಾಸ ಬಿ.ಆರ್ ಎಂಬಾತನಿಗೆ ನ್ಯಾಯಾಲಯ ಸಿಸಿ ನಂಬ್ರ 526/2025 ರಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಿರುತ್ತದೆ. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿ ಶ್ರೀನಿವಾಸ ಬಿ.ಆರ್ (48) ಎಂಬಾತನನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡವು ಸೆಪ್ಟೆಂಬರ್ 2 ರಂದು ಜಾಲ್ಸೂರು ಗ್ರಾಮದ ಬೈತಡ್ಕ ಜಂಕ್ಷನ್ನಿನಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈತನ ವಿರುದ್ದ ಮೂಡಬಿದ್ರೆ ಠಾಣಾ ಅ.ಕ್ರ. 59/2012 ಕಲಂ 406, 420, 421 ಜತೆಗೆ 34 ಐಪಿಸಿ (ಸಿಸಿ ನಂಬ್ರ 526/2025) ಹಾಗೂ ಮಂಗಳೂರು ಜೆ ಎಂ ಎಫ್ ಸಿ 5ನೇ ನ್ಯಾಯಾಲಯದ ಸಿಸಿ ನಂಬ್ರ 1453/2024 (ಚೆಕ್ ಬೌನ್ಸ್ ಪ್ರಕರಣ) ಪ್ರಕರಣದಲ್ಲಿ ದಸ್ತಗಿರಿ ವಾರಂಟುಗಳು ಬಾಕಿ ಇರುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.











0 comments:
Post a Comment