ಬೆಳ್ಳಾರೆ : ಪತ್ನಿ ಹಾಗೂ ಅತ್ತೆಗೆ ಹಲ್ಲೆ ನಡೆಸಿ ತಾನೂ ಇಲಿಪಾಷಾಣ ಸೇವಿಸಿ ಆಸ್ಪತ್ರೆ ಸೇರಿದ - Karavali Times ಬೆಳ್ಳಾರೆ : ಪತ್ನಿ ಹಾಗೂ ಅತ್ತೆಗೆ ಹಲ್ಲೆ ನಡೆಸಿ ತಾನೂ ಇಲಿಪಾಷಾಣ ಸೇವಿಸಿ ಆಸ್ಪತ್ರೆ ಸೇರಿದ - Karavali Times

728x90

6 September 2026

ಬೆಳ್ಳಾರೆ : ಪತ್ನಿ ಹಾಗೂ ಅತ್ತೆಗೆ ಹಲ್ಲೆ ನಡೆಸಿ ತಾನೂ ಇಲಿಪಾಷಾಣ ಸೇವಿಸಿ ಆಸ್ಪತ್ರೆ ಸೇರಿದ

 ಬೆಳ್ಳಾರೆ, ಸೆಪ್ಟೆಂಬರ್ 07, 2026 (ಕರಾವಳಿ ಟೈಮ್ಸ್) : ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೆ ತಾನೂ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಸೇರಿದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಜೆ ಗ್ರಾಮದ ಮುಕ್ಕೂರು ಎಂಬಲ್ಲಿ ಸೆ 6 ರಂದು ಮಧ್ಯಾಹ್ನ ವೇಳೆ ನಡೆದಿದೆ.

ಇಲ್ಲಿನ ನಿವಾಸಿ ಗಣೇಶ (38) ಎಂಬಾತನು ಆತನ ಪತ್ನಿ ವಿನಿತಾ‌ (32) ಹಾಗೂ ಆಕೆಯ ತಾಯಿ ಕುಸುಮಾ(50) ಎಂಬವರಿಗೆ ಯಾವುದೋ ಹರಿತವಾದ ಸಾಧನದಿಂದ ಹಲ್ಲೆ ನಡೆಸಿ ಗಾಯಗೊಳಿಸಿರುತ್ತಾನೆ. ಗಾಯಗೊಂಡ ವಿನಿತಾ‌ ಹಾಗೂ ಕುಸುಮಾ ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶಸ್ರ್ತಚಿಕಿತ್ಸೆಗೆ ಒಳಗಾಗಿರುತ್ತಾರೆ.

 ಆರೋಪಿ ಕೂಡಾ ಇಲಿ ಪಾಷಾಣ ಸೇವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ  ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಬೆಳ್ಳಾರೆ : ಪತ್ನಿ ಹಾಗೂ ಅತ್ತೆಗೆ ಹಲ್ಲೆ ನಡೆಸಿ ತಾನೂ ಇಲಿಪಾಷಾಣ ಸೇವಿಸಿ ಆಸ್ಪತ್ರೆ ಸೇರಿದ Rating: 5 Reviewed By: lk
Scroll to Top