ಬಂಟ್ವಾಳ, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ಮುಂಗಾರು ಮಳೆ ಕೊರತೆ ಕಾರಣದಿಂದ ರಾಜ್ಯಾದ್ಯಂತ ಈಗಾಗಲೇ ವಿದ್ಯುತ್ ಲೋಡ್ ಶೆಡ್ಡಿಂಗ್ ಆರಂಭಗೊಂಡಿದ್ದು, ಪಾಣೆಮಂಗಳೂರು ಮೆಸ್ಕಾಂ ಶಾಖೆಯಲ್ಲೂ ಪ್ರದೇಶವಾರು ವಿಂಗಡಿಸಿ ಲೋಡ್ ಶೆಡ್ಡಿಂಗ್ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ.
ರಾತ್ರಿ 7.25 ರಿಂದ 8.25 ರವರೆಗೆ ಪಾಣೆಮಂಗಳೂರು, ರಾತ್ರಿ 8.25 ರಿಂದ 9.25ರವರೆಗೆ ಮೆಲ್ಕಾರ್ ಫೀಡರಿನ ನಂದಾವರ ಏರಿಯಾದಲ್ಲಿ ಹಾಗೂ ರಾತ್ರಿ 9.25 ರಿಂದ 10.25ರವರೆಗೆ ಶಂಭೂರು ಫೀಡರಿನ ಶಂಭೂರು-ನರಿಕೊಂಬು ಏರಿಯಾದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇರಲಿದೆ ಎಂದು ಮೆಸ್ಕಾಂ ಪಾಣೆಮಂಗಳೂರು ಶಾಖಾ ಪ್ರಕಟಣೆ ತಿಳಿಸಿದೆ. (ಶಂಭೂರು ನರಿಕೊಂಬು ಏರಿಯ)











0 comments:
Post a Comment