ಇಲಾಖೆಗಳು ಪರಸ್ಪರ ಸಹಕರಿಸುವ ಮೂಲಕ ಮಂಗಳೂರು ದಸರಾ ವಿಜೃಂಭಣೆಯಲ್ಲಿ ನಡೆಯುವಂತೆ ನೋಡಿಕೊಳ್ಳಿ : ಸಚಿವ ಡಾ. ಯು.ಟಿ. ಖಾದರ್ ಸೂಚನೆ - Karavali Times ಇಲಾಖೆಗಳು ಪರಸ್ಪರ ಸಹಕರಿಸುವ ಮೂಲಕ ಮಂಗಳೂರು ದಸರಾ ವಿಜೃಂಭಣೆಯಲ್ಲಿ ನಡೆಯುವಂತೆ ನೋಡಿಕೊಳ್ಳಿ : ಸಚಿವ ಡಾ. ಯು.ಟಿ. ಖಾದರ್ ಸೂಚನೆ - Karavali Times

728x90

1 September 2026

ಇಲಾಖೆಗಳು ಪರಸ್ಪರ ಸಹಕರಿಸುವ ಮೂಲಕ ಮಂಗಳೂರು ದಸರಾ ವಿಜೃಂಭಣೆಯಲ್ಲಿ ನಡೆಯುವಂತೆ ನೋಡಿಕೊಳ್ಳಿ : ಸಚಿವ ಡಾ. ಯು.ಟಿ. ಖಾದರ್ ಸೂಚನೆ

ಮಂಗಳೂರು, ಸೆಪ್ಟೆಂಬರ್ 01, 2026 ( ಕರಾವಳಿ ಟೈಮ್ಸ್) : ಮುಂಬರುವ ಮಂಗಳೂರು ದಸರಾ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವಂತೆ ಸಿದ್ಧತೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೂಚಿಸಿದರು. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೆ 1 ರಂದು ನಡೆದ ಮಂಗಳೂರು ದಸರಾ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಸರಾದ ವಿದ್ಯುತ್ ದೀಪಾಲಂಕಾರ, ಸ್ವಚ್ಛತೆ, ಅಲಂಕಾರ ಸೇರಿದಂತೆ ಮಂಗಳೂರು ನಗರದಲ್ಲಿ ಹಬ್ಬದ ವಾತಾವರಣ ಮೂಡುವಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಬೇಕು. ಕುದ್ರೋಳಿ ದೇವಸ್ಥಾನ, ಮಂಗಳಾದೇವಿ, ಉರ್ವಾ ಮಾರಿಯಮ್ಮ ಸೇರಿದಂತೆ ನಗರದಲ್ಲಿ ಪ್ರಮುಖ ದಸರಾ ನಡೆಯುವ ಸ್ಥಳಗಳ ಪ್ರಮುಖ ರಸ್ತೆಗಳಲ್ಲಿ, ಪ್ರಮುಖ ಜಂಕ್ಷನ್‍ಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಬೇಕು. ಎಲ್ಲ ಇಲಾಖೆಯವರು ಸಹಕಾರ ನೀಡಲು ಸಚಿವರು ಸೂಚಿಸಿದರು. 

ಟ್ರಾಫಿಕ್ ವ್ಯವಸ್ಥೆ ನಿರ್ವಹಿಸಲು ಸುಸಜ್ಜಿತ  ವ್ಯವಸ್ಥೆಯೊಂದಿಗೆ ಟ್ರಾಫಿಕ್ ಪೆÇಲೀಸರನ್ನು ನಿಯೋಜಿಸಬೇಕು. ದಸರಾ ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಯಾವುದೇ ಅಡೆತಡೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರ ವ್ಯವಸ್ಥೆ ನಿರ್ವಹಿಸಬೇಕು. ಆರೋಗ್ಯ ಇಲಾಖೆ ವತಿಯಿಂದ 24*7 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವಂತೆ  ಸಚಿವರು ಸೂಚಿಸಿದರು. ದಸರಾ ಸಮಯದಲ್ಲಿ ಸಿಟಿ ಬಸ್‍ಗಳು ರಾತ್ರಿ ದೀರ್ಘ ಕಾಲದವರೆಗೆ ಸಂಚಾರ ನಡೆಸುವಂತೆ ಆರ್.ಟಿ.ಓ ಗಮನ ಹರಿಸಬೇಕು. ನಗರದಲ್ಲಿ ವಾಣಿಜ್ಯ ವ್ಯಾಪಾರ ಕೇಂದ್ರಗಳು ರಾತ್ರಿ ದೀರ್ಘ ಕಾಲದವರೆಗೆ ವ್ಯವಹಾರ ನಡೆಸುವಂತಾಗಬೇಕು ಎಂದರು. 

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದಸರಾ ಸಂದರ್ಭ ಭಾರೀ ಸಂಖ್ಯೆಯಲ್ಲಿ ಸೇರುವ ಜನತೆಗೆ ಅನುಕೂಲ ಕಲ್ಪಿಸಲು ಹೆಚ್ಚುವರಿ ಶೌಚಾಲಯ ನಿರ್ಮಿಸಿ ಸಹಕರಿಸುವಂತೆ ಸೂಚಿಸಿದರು. ಮೆಸ್ಕಾಂ ಇಲಾಖೆ ಗರಿಷ್ಠ ಪ್ರಮಾಣದಲ್ಲಿ ಸಹಕಾರ ನೀಡುವಂತೆಯೂ ಅವರು ಸೂಚಿಸಿದರು. 

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಪೆÇಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಎಸ್ಪಿ ಡಾ ಅರುಣ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ,  ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಮ್ ಪಾಂಡೆ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಇಲಾಖೆಗಳು ಪರಸ್ಪರ ಸಹಕರಿಸುವ ಮೂಲಕ ಮಂಗಳೂರು ದಸರಾ ವಿಜೃಂಭಣೆಯಲ್ಲಿ ನಡೆಯುವಂತೆ ನೋಡಿಕೊಳ್ಳಿ : ಸಚಿವ ಡಾ. ಯು.ಟಿ. ಖಾದರ್ ಸೂಚನೆ Rating: 5 Reviewed By: karavali Times
Scroll to Top