ಪುತ್ತೂರು, ಸೆಪ್ಟೆಂಬರ್ 21, 2026 (ಕರಾವಳಿ ಟೈಮ್ಸ್) : ಗಣೇಶೋತ್ಸವ ಮೆರವಣಿಗೆಯಲ್ಲಿ ನಿಯಮ ಮೀರಿ ಧ್ವನಿವರ್ಧಕ ಬಳಕೆ ಮಾಡಿರುವುದನ್ನು ಪೊಲೀಸರು ನಿಲ್ಲಿಸುತ್ತಿದ್ದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ 17 ರಂದು ರಾತ್ರಿ ವೇಳೆ ಪುತ್ತೂರು ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದ ವೇಳೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ ಜಂಕ್ಷನ್ ಬಳಿ ಪಂಚಮುಖಿ ಪ್ರೆಂಡ್ಸ್ ಎಂಬ ಹೆಸರಿನ ಟ್ಯಾಬ್ಲೊದಲ್ಲಿ ನಿಯಮ ಮೀರಿ ದ್ವನಿವರ್ಧಕವನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬಳಸಿರುವುದಾಗಿದೆ. ವೇಳೆ ಸದ್ರಿ ಧ್ವನಿವರ್ಧಕ ಬಳಕೆಯನ್ನು ನಿಲ್ಲಿಸುವಂತೆ ಪುತ್ತೂರು ನಗರ ಪೆÇಲೀಸ್ ಠಾಣಾ ಪಿಎಸ್ಸೈ ಅವರು ಸಂಬಂಧಪಟ್ಟವರಿಗೆ ಸೂಚಿಸಿರುತ್ತಾರೆ. ಈ ವೇಳೆ ಟ್ಯಾಬ್ಲೊದ ಆಯೋಜಕರು ಧ್ವನಿವರ್ಧಕ ಬಳಕೆಯನ್ನು ನಿಲ್ಲಿಸಿದ್ದು, ಆರೋಪಿ ಅಜಿತ್ ರೈ ಹೊಸಮನೆ ಮತ್ತು ಇತರರು ಬಂದು ಧ್ವನಿವರ್ಧಕ ಬಳಕೆಯನ್ನು ನಿಲ್ಲಿಸಲು ಅಡ್ಡಿಪಡಿಸಿ, ಸ್ಥಳದಲ್ಲಿದ್ದ ಇತರರನ್ನು ಪ್ರಚೋದಿಸಿರುತ್ತಾರೆ. ಅವರುಗಳಿಗೆ ಸರ್ವೋಚ್ಚ ನ್ಯಾಯಾಲಯವು ಹೊರಡಿಸಿದ ಆದೇಶದ ಬಗ್ಗೆ ತಿಳುವಳಿಕೆಯನ್ನು ನೀಡಿದರೂ ಒಪ್ಪದೇ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿರುವುದಲ್ಲದೇ ಸರಕಾರಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿರುತ್ತಾರೆ. ಈ ಬಗ್ಗೆ ಆರೋಪಿ ಅಜಿತ್ ರೈ ಹೊಸಮನೆ, ಪಂಚಮುಖಿ ಪ್ರೆಂಡ್ಸ್ ಟ್ಯಾಬ್ಲೋ ಆಯೋಜಕರು ಹಾಗೂ ಇತರರ ವಿರುದ್ಧ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2026, ಕಲಂ 49, 132, 3(5) ಬಿ ಎನ್ ಎಸ್-2023 ಮತ್ತು ಕಲಂ 103, 109 ಕೆ ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.











0 comments:
Post a Comment