ಪೂರ್ಲಿಪ್ಪಾಡಿ : ಗೂಡ್ಸ್ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ನಗರ ಪೊಲೀಸರು, 24 ಜಾನುವಾರುಗಳು ಪತ್ತೆ - Karavali Times ಪೂರ್ಲಿಪ್ಪಾಡಿ : ಗೂಡ್ಸ್ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ನಗರ ಪೊಲೀಸರು, 24 ಜಾನುವಾರುಗಳು ಪತ್ತೆ - Karavali Times

728x90

30 September 2026

ಪೂರ್ಲಿಪ್ಪಾಡಿ : ಗೂಡ್ಸ್ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ನಗರ ಪೊಲೀಸರು, 24 ಜಾನುವಾರುಗಳು ಪತ್ತೆ

 ಬಂಟ್ವಾಳ, ಅಕ್ಟೋಬರ್ 01, 2026 (ಕರಾವಳಿ ಟೈಮ್ಸ್) : ತಾಲೂಕಿನ ಬಾಳ್ತಿಲ ಗ್ರಾಮದ ಕಲ್ಲಡ್ಕ ಸಮೀಯ ಪೂರ್ಲಿಪ್ಪಾಡಿ ಎಂಬಲ್ಲಿ ಗೂಡ್ಸ್ ಟೆಂಪೋದಲ್ಲಿ ಅಕ್ರಮ ದನ ಸಾಗಾಟ ಪ್ರಕರಣವನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬೇಧಿಸಿದ ಘಟನೆ ಸೆಪ್ಟೆಂಬರ್ 30 ರಂದು ಮುಂಜಾನೆ ವೇಳೆ ನಡೆದಿದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಶೆಟ್ಟಿ ನೇತೃತ್ವದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಿದ್ದಾರೆ.

 ಬಾಳ್ತಿಲ ಗ್ರಾಮದ ಪುರ್ಲಿಪ್ಪಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ಲೈ ಓವರ್ ಮೇಲೆ KA19 D7120 ನೊಂದಣಿ ಸಂಖ್ಯೆಯ ಲಾರಿಯನ್ನು ಪೊಲೀಸರು ತಡೆದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ವೇಳೆ ಲಾರಿ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ಪರಿಶೀಲಿಸಿದಾಗ ಒಳಭಾಗದಲ್ಲಿ ಹಿಂಸಾತ್ಮಕವಾಗಿ ಕಟ್ಟಿರುವ ಒಟ್ಟು 24 ಜಾನುವಾರುಗಳು ಕಂಡುಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/2026, ಕಲಂ: 4, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಮತ್ತು  ಕಲಂ 11(1)(d) Prevention of Cruelty to Animals Act, 1960 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪೂರ್ಲಿಪ್ಪಾಡಿ : ಗೂಡ್ಸ್ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ನಗರ ಪೊಲೀಸರು, 24 ಜಾನುವಾರುಗಳು ಪತ್ತೆ Rating: 5 Reviewed By: lk
Scroll to Top