ಎಂ.ಆರ್.ಪಿ.ಎಲ್. ದುರಂತದಲ್ಲಿ ಓರ್ವ ದಾರುಣ ಮೃತ್ಯು, ಇನ್ನೋರ್ವಗೆ ಸುಟ್ಟ ಗಾಯ, ಇತರ 8 ಮಂದಿಗೆ ಗಾಯ, ಹಲವೆಡೆ ಹಾನಿ, ಉಸ್ತುವಾರಿ ಸಚಿವ ಖಾದರ್ ಭೇಟಿ, ಪರಿಶೀಲನೆ - Karavali Times ಎಂ.ಆರ್.ಪಿ.ಎಲ್. ದುರಂತದಲ್ಲಿ ಓರ್ವ ದಾರುಣ ಮೃತ್ಯು, ಇನ್ನೋರ್ವಗೆ ಸುಟ್ಟ ಗಾಯ, ಇತರ 8 ಮಂದಿಗೆ ಗಾಯ, ಹಲವೆಡೆ ಹಾನಿ, ಉಸ್ತುವಾರಿ ಸಚಿವ ಖಾದರ್ ಭೇಟಿ, ಪರಿಶೀಲನೆ - Karavali Times

728x90

30 September 2026

ಎಂ.ಆರ್.ಪಿ.ಎಲ್. ದುರಂತದಲ್ಲಿ ಓರ್ವ ದಾರುಣ ಮೃತ್ಯು, ಇನ್ನೋರ್ವಗೆ ಸುಟ್ಟ ಗಾಯ, ಇತರ 8 ಮಂದಿಗೆ ಗಾಯ, ಹಲವೆಡೆ ಹಾನಿ, ಉಸ್ತುವಾರಿ ಸಚಿವ ಖಾದರ್ ಭೇಟಿ, ಪರಿಶೀಲನೆ

 ಮಂಗಳೂರು, ಅಕ್ಟೋಬರ್ 01, 2026 (ಕರಾವಳಿ ಟೈಮ್ಸ್) : ಎಂಆರ್‌ಪಿಎಲ್‌ನಲ್ಲಿ ಆವರಣದಲ್ಲಿ ಸೆ 30 ರಂದು ಬುಧವಾರ ಮಧ್ಯಾಹ್ನದ ವೇಳೆ ಸಂಭವಿಸಿದ ಭಾರೀ ಸ್ಫೋಟ ಹಾಗೂ ಬೆಂಕಿ ದುರಂತದಲ್ಲಿ ಓರ್ವ ಕಾರ್ಮಿಕನ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಮುಲ್ಕಿ ನಿವಾಸಿ, ಇಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಮನಿಶ್ ಕರ್ಕಡ (30) ಎಂದು ಗುರುತಿಸಲಾಗಿದೆ. 

ಪ್ರಕರಣದಲ್ಲಿ ಓರ್ವ ಮೃತಪಟ್ಟಿದ್ದು, ಒಬ್ಬರಿಗೆ ಸುಟ್ಟ ಗಾಯಗಳು ಹಾಗೂ 8 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 

ಗಾಯಾಳುಗಳನ್ನು ರವಿ ಪೂಜಾರಿ, ರಾಜೇಶ್ ಪ್ರಸಾದ್, ಇಂದ್ರಜೀತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ, ಜಗದೀಶ್ ಸಿಂಗ್, ಶರತ್ ಶೆಟ್ಟಿ, ರಾಜೇಶ್ ಪೂಜಾರಿ ಎಂದು ಹೆಸರಿಸಲಾಗಿದೆ.

 ಚಾಮರಾಜನಗರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ದುರಂತದ ವಿಷಯ ತಿಳಿಯುತ್ತಲೇ ಕಾರ್ಯಕ್ರಮ ಮೊಟಕುಗೊಳಿಸಿ ತಕ್ಷಣ ಘಟನಾ ಸ್ಥಳಕ್ಕೆ, ಮೃತರ ಮನೆಗೆ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶಿಸಿದ್ದಾರೆ. ಘಟನೆಗೆ ಕಾರಣ ಎಂಬುದರ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಿದ್ದಾರಲ್ಲದೆ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಬಳಿಕ ಘಟನೆಯಿಂದ ಹಾನಿಗೊಂಡ ಮನೆ ಪ್ರಾರ್ಥನಾ ಮಂದಿರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಷ್ಟ ನಷ್ಟಗಳಿಗೆ ಕಂಪೆನಿ ಕಡೆಯಿಂದ ಗರಿಷ್ಠ ಪರಿಹಾರ ದೊರಕಿಸಿ ಕೊಡಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದಿದ್ದಾರೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಕಂಪೆನಿ ಇದಾಗಿರುವುದರಿಂದ ಈ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೂ ತಂದು ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.

ಸ್ಥಳಕ್ಕೆ ಸಂಸದ ಕ್ಯಾಬ್ರಿಜೇಶ್‌ ಚೌಟ ಮತ್ತು ಪ್ರಮುಖ ಅಧಿಕಾರಿಗಳು ಕೂಡಾ ಭೇಟಿ ನೀಡಿದ್ದು ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಘಟನೆ ಬಗ್ಗೆ ಎಂ ಆರ್ ಪಿ ಎಲ್ ನ 3 ನೇ ಪೇಸ್‌ ನಲ್ಲಿರುವ ಉದ್ಯೋಗಿಗಳಿಗೆ ಊಟ ಪಹಾರ ಮತ್ತು ನೀರು ಸರಬರಾಜು ಮಾಡುವ K Star Food And Hospitality Services ನಲ್ಲಿ ಕೆಲಸ ಮಾಡಿಕೊಂಡಿರುವ ಕಾರ್ಕಳ ಮೂಲದ ರವಿ ಪೂಜಾರಿ ಅವರು  ಪೊಲೀಸರಿಗೆ ದೂರು ನೀಡಿದ್ದು,‌ ಸೆ 30 ರಂದು ಮಧ್ಯಾಹ್ನ 12.15 ಗಂಟೆಗೆ ಕೆಲಸ ಮಾಡಿಕೊಂಡಿದ್ದ ವೇಳೆ COKER HYDRO TREATER UNIT ನಲ್ಲಿ ಒಮ್ಮೆಲೆ ಸ್ಫೋಟಗೊಂಡು ಅದರ ಯಂತ್ರೋಪಕರಣ ಹಾಗೂ ಸಿಬ್ಬಂದಿಗಳು ಚಿದ್ರಗೊಂಡು ಬೆಂಕಿಯ ಜ್ವಾಲೆಯಿಂದ ಪರಿಸರದಲ್ಲಿ ಚಿಮ್ಮಿದ್ದು ಪರಿಣಾಮವಾಗಿ  ಕಾರ್ಮಿಕರಿಗರ ಗಾಯವಾಗಿದೆ. ಈ ಪೈಕಿ ರಾಜೇಶ್ ಮತ್ತು ಮನೀಷ್ ಕರ್ಕಡ ಅವರಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಸಮಯ ಮನೀಷ್ ಕರ್ಕಡ ಅವರು ಮೃತಪಟ್ಟಿರುತ್ತಾರೆ.

 ಪೇಜ್-3 ನಲ್ಲಿರುವ COKER HYDRO TREATER UNIT ನಲ್ಲಿ ಯಂತ್ರೋಪಕರಣಗಳನ್ನು ಯುನಿಟ್ ನ ಮುಖ್ಯಸ್ಥರು ಮತ್ತು ಎಂ ಆರ್ ಪಿ ಎಲ್ ಸಂಸ್ಥೆಯವರು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ ಪರಿಹಾರ ಘಟನೆ ನಡೆದಿರುತ್ತದೆ ಎಂದು ದೂರಿದ್ದಾರೆ.

 ಸ್ಫೋಟದ ತೀವ್ರತೆಗೆ ಜೋಕಟ್ಟೆ ಈದ್ಗಾ ಮಸೀದಿ, ಪೇಜಾವರ ಚರ್ಚ್, ಸೇಂಟ್ ಜೋಸೆಫ್ ಕಾಳಾವರ ಚರ್ಚ್ ಜೋಕಟ್ಟೆ, ಜೋಕಟ್ಟೆ ಮಸೀದಿ ಹಾಗೂ ಸ್ಥಳೀಯ ಹಲವು ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. 

ಇನ್ನು ಸ್ಫೋಟದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಗಳು ಕಂಪಿಸಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು.

 ಸ್ಫೋಟದಿಂದ ಜೋಕಟ್ಟೆ ಗ್ರಾಮದಲ್ಲಿ 25, ಕಳವಾರಿನಲ್ಲಿ 19, ಬಾಳದಲ್ಲಿ 10 ಮನೆಗಳಿಗೆ ಹಾನಿಯಾಗಿದ್ದು, ಜೋಕಟ್ಟೆಯಲ್ಲು 5 ಹಾಗೂ ಕಳವಾರಿನಲ್ಲಿ 3 ಸೇರಿ ಒಟ್ಟು 8 ಪ್ರಾರ್ಥನಾ ಮಂದಿರಗಳಿಗೂ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಎಂ.ಆರ್.ಪಿ.ಎಲ್. ದುರಂತದಲ್ಲಿ ಓರ್ವ ದಾರುಣ ಮೃತ್ಯು, ಇನ್ನೋರ್ವಗೆ ಸುಟ್ಟ ಗಾಯ, ಇತರ 8 ಮಂದಿಗೆ ಗಾಯ, ಹಲವೆಡೆ ಹಾನಿ, ಉಸ್ತುವಾರಿ ಸಚಿವ ಖಾದರ್ ಭೇಟಿ, ಪರಿಶೀಲನೆ Rating: 5 Reviewed By: lk
Scroll to Top