ಮಂಗಳೂರು, ಸೆಪ್ಟೆಂಬರ್ 01, 2026 ( ಕರಾವಳಿ ಟೈಮ್ಸ್) : 2026-27ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ರಾಷ್ಟೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ (ಐಐಟಿ, ಐಐಎಂ, ಐಐಐಟಿ, ಎನ್ ಐ ಟಿ, ಐ ಐ ಎಸ್ ಇ ಆರ್, ಎ ಐ ಐ ಎಂ ಎಸ್, ಎನ್ ಎಲ್ ಯು, ಐ ಎನ್ ಐ ಹಾಗೂ ಎಲ್ ಯು ಎಸ್ ಎಲ್ ಎ) ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿ ಒಂದು ಬಾರಿಗೆ ಪೆÇ್ರೀತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಸೇವಾಸಿಂಧು ಪೆÇೀರ್ಟಲ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











0 comments:
Post a Comment