ಎಸ್.ಐ.ಆರ್. ಕರಡು ಮತದಾರರ ಪಟ್ಟಿಯಲ್ಲಿ ಮತದಾರನನ್ನು ಮೃತ ಎಂದು ನಮೂದು : ಈ ಬಗ್ಗೆ ಚುನಾವಣಾಧಿಕಾರಿ ಸ್ಪಷ್ಟನೆ - Karavali Times ಎಸ್.ಐ.ಆರ್. ಕರಡು ಮತದಾರರ ಪಟ್ಟಿಯಲ್ಲಿ ಮತದಾರನನ್ನು ಮೃತ ಎಂದು ನಮೂದು : ಈ ಬಗ್ಗೆ ಚುನಾವಣಾಧಿಕಾರಿ ಸ್ಪಷ್ಟನೆ - Karavali Times

728x90

2 September 2026

ಎಸ್.ಐ.ಆರ್. ಕರಡು ಮತದಾರರ ಪಟ್ಟಿಯಲ್ಲಿ ಮತದಾರನನ್ನು ಮೃತ ಎಂದು ನಮೂದು : ಈ ಬಗ್ಗೆ ಚುನಾವಣಾಧಿಕಾರಿ ಸ್ಪಷ್ಟನೆ

ಮಂಗಳೂರು, ಸೆಪ್ಟೆಂಬರ್ 01, 2026 ( ಕರಾವಳಿ ಟೈಮ್ಸ್) : ಮಂಗಳೂರು ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 24 ರ ಮತದಾರರಾಗಿರುವ ಡೊನಾಲ್ಡ್ ಜೋಸೆಫ್ ರೇಗೂ ಅವರ ಹೆಸರನ್ನು ಗಣತಿ ನಮೂನೆಯಲ್ಲಿ ಮೃತ ಎಂದು ನಮೂದಿಸಿ ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುತ್ತಾರೆ ಎಂದು ವರದಿ ಪ್ರಕಟವಾಗಿರುವ ಘಟನೆಯ  ಕುರಿತು ಪರಿಶೀಲಿಸಲಾಗಿದೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಭಾಗ ಸಂಖ್ಯೆ 24 ವ್ಯಾಪ್ತಿಯಲ್ಲಿನ ಕಟ್ಟಡ ಸಂಖ್ಯೆ 2-14-1212/17 ಜೆಸ್ಟಿನ್ ಅಪಾರ್ಟ್ ಮೆಂಟ್ ಫ್ಲಾಟ್ ಸಂಖ್ಯೆ 305, ಬಿಜೈ ನ್ಯೂ ರೋಡ್, ಮಂಗಳೂರು ಇಲ್ಲಿ ಡೊನಾಲ್ಡ್ ಜೋಸೆಫ್ ರೇಗೂ ಅವರು ವ್ಯಾಸ್ತವ್ಯವಿದ್ದು, ಅವರ ಹೆಸರು ಕರಡು ಮತದಾರರ ಪಟ್ಟಿ ಪ್ರಕಟವಾಗುವ ಮೊದಲು ಭಾಗ ಸಂಖ್ಯೆ  23 ರಲ್ಲಿನ ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 48 ರಲ್ಲಿ ಹೆಸರು ದಾಖಲಿದ್ದು, ಅವರ ಹೆಸರಿಗೆ ಎನ್ಯುಮರೇಶನ್ ಫಾರ್ಮ್ ಬಂದಿದ್ದು, ನಮೂನೆಯನ್ನು ಭಾಗ ಸಂಖ್ಯೆಯ ಬಿ.ಎಲ್.ಒ ಅವರು ವಿತರಣೆ ಮಾಡಿರುತ್ತಾರೆ. 

ಎನ್ಯುಮರೇಶನ್ ಫಾರ್ಮ್ ಅನ್ನು ಮತದಾರರಾಗಿರುವ ಡೊನಾಲ್ಡ್ ಜೋಸೆಫ್ ರೇಗೂ ಇವರು ಭರ್ತಿ ಮಾಡಿಕೊಂಡು, ಬಿ.ಎಲ್.ಒ ಅವರಿಗೆ ನೀಡಿದ್ದು, ಎನ್ಯುಮರೇಶನ್ ಫಾರ್ಮ್ ನಲ್ಲಿ ಮತದಾರರು ಅವರಿಗೆ ಸಂಬಂಧಿಸಿದ 2002ನೇ ಸಾಲಿನ ಮತದಾರರ ಪಟ್ಟಿಯ ವಿವರವನ್ನು ಮತ್ತು ಅವರ ಸಂಬಂಧಿಯ ವಿವರವನ್ನು ದಾಖಲಿಸಿರುವುದಿಲ್ಲ. ಫಾರ್ಮ್ ನಲ್ಲಿ ವೈಯಕ್ತಿಕ ಮಾಹಿತಿ ಮಾತ್ರ ದಾಖಲಿಸಿರುತ್ತಾರೆ ಹಾಗೂ ಮತದಾರರು ಅವರ ತಂದೆಯ ಮರಣ ದೃಢಪತ್ರವನ್ನು ಫಾರ್ಮ್ ನೊಂದಿಗೆ ಲಗತ್ತಿಸಿ ಬಿ.ಎಲ್.ಒ ಅವರಿಗೆ ನೀಡಿರುತ್ತಾರೆ. ಬಿ.ಎಲ್.ಒ ಅವರು ‘ನೊ ಮ್ಯಾಪಿಂಗ್ ಕೇಸ್’ ಎಂದು ಪರಿಗಣಿಸಿ ಸ್ವೀಕರಿಸಿರುತ್ತಾರೆ. 

ಎನ್ಯುಮರೇಶನ್ ಫಾರ್ಮ್ ಅನ್ನು  ಬಿ.ಎಲ್.ಒ ಅವರು ಡಿಜಿಟೈಸೇಶನ್ ಮಾಡುವ ಸಮಯದಲ್ಲಿ ಮತದಾರರು ಫಾರ್ಮ್ ನೊಂದಿಗೆ ತಂದೆಯ ಮರಣ ದೃಢಪತ್ರವನ್ನು ಲಗತ್ತಿಸಿರುವ ಕಾರಣದಿಂದ ಬಿ.ಎಲ್.ಒ ಅವರು ತಪ್ಪಾಗಿ ಮತದಾರರನು ಮೃತ ಎಂದು ದಾಖಲಿಸಿ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಟ್ಟಿರುವುದು ಕಂಡು ಬಂದಿದೆ.

ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯವರು, ಮತಗಟ್ಟೆಗೆ ಸಂಬಂಧಿಸಿದ ಬಿ.ಎಲ್.ಒ ಅವರರಿಂದ ಸ್ಪಷ್ಟೀಕರಣ ಪಡೆದಿದ್ದು  ಹಾಗೂ ಈ ಕಛೇರಿಯಿಂದಲೂ ಬಿ.ಎಲ್.ಒ. ಅವರಿಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಲಾಗಿರುತ್ತದೆ.

ಮತದಾರರಾದ ಡೊನಾಲ್ಡ್ ಜೋಸೆಫ್ ರೇಗೂ ಅವರ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವುದಾಗಿ ಬಿ.ಎಲ್.ಒ ಅವರ ಗಮನಕ್ಕೆ ಬಂದಿರುವ ತಕ್ಷಣ ಆಗಸ್ಟ್ 29 ರಂದು  ಮತದಾರರ ನೋಂದಣಾಧಿಕಾರಿಯವರು ಹಾಗೂ ಬಿ.ಎಲ್.ಒ ಅವರು ಖುದ್ದಾಗಿ ಮತದಾರರನ್ನು ಸಂಪರ್ಕಿಸಿ ಬಿ.ಎಲ್.ಒ    ಆಪ್ ಮುಖಾಂತರ ಉಲ್ಲೇಖ ಸಂಖ್ಯೆ ಎಸ್10203ಜಿ6ಎನ್2908261200041 ರಂತೆ ನಮೂನೆ 6 ರಲ್ಲಿ ಅರ್ಜಿ ಸ್ವೀಕೃತಿ ಮಾಡಿ ಹೊಸ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಈಗಾಗಲೇ ನಿಯಮಾನುಸಾರ ದಾಖಲೆಗಳನ್ನು ಪಡೆದು ಕ್ರಮಕೈಗೊಳ್ಳಲಾಗಿರುತ್ತದೆ. 

ಮಂಗಳೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಭಾಗ ಸಂಖ್ಯೆ 24ರಲ್ಲಿ ಮತದಾರರಾಗಿ ಡೊನಾಲ್ಡ್ ಜೋಸೆಫ್ ರೇಗೂ ಅವರ ಹೆಸರು ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಎಸ್.ಐ.ಆರ್. ಕರಡು ಮತದಾರರ ಪಟ್ಟಿಯಲ್ಲಿ ಮತದಾರನನ್ನು ಮೃತ ಎಂದು ನಮೂದು : ಈ ಬಗ್ಗೆ ಚುನಾವಣಾಧಿಕಾರಿ ಸ್ಪಷ್ಟನೆ Rating: 5 Reviewed By: karavali Times
Scroll to Top