ಬಂಟ್ವಾಳ, ಸೆಪ್ಟೆಂಬರ್ 30, 2026 (ಕರಾವಳಿ ಟೈಮ್ಸ್) : ಎಐಸಿಸಿಟಿಯು ಹಾಗೂ ಎಐಸಿಡಬ್ಲ್ಯುಎಫ್ ಆಶ್ರಯದಲ್ಲಿ ಪ್ರಗತಿಪರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಮಾವೇಶವು ಅಕ್ಟೋಬರ್ 4 ರಂದು ಭಾನುವಾರ ಬೆಳಿಗ್‍ಎ 10 ಗಂಟೆಗೆ ಬಿ ಸಿ ರೋಡಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಸಮಾವೇಶದಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಸೌಲಭ್ಯಗಳ ಸಮರ್ಪಕ ಜಾರಿಗಾಗಿ, ಪಿಂಚಣಿ ಪ್ರತಿ ತಿಂಗಳು ಜಮೆ ಮಾಡಲು ಆಗ್ರಹ, ಪಿಂಚಣಿ ತಿಂಗಳಿಗೆ 10 ಸಾವಿರಕ್ಕೆ ಏರಿಕೆ, ಸೇಫ್ಟಿ ಕಿಟ್ ಮತ್ತು ಇತರ ಟೂಲ್ ಕಿಟ್ ಗಳನ್ನು ಹಾಗೂ ಆರೋಗ್ಯ ತಪಾಸಣೆಯನ್ನು ನಿಲ್ಲಿಸಿ ಕಾರ್ಮಿಕರಿಗೆ ನೇರ ಹಣ ಪಾವತಿ ಮಾಡುವಂತೆ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ತಕ್ಷಣ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿಡಲಾಗುವುದು. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಹಾಗೂ ಪಿಂಚಣಿದಾರರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.













0 comments:
Post a Comment