ಹೆದ್ದಾರಿ ಕಾಮಗಾರಿಗಳ ಸಂದರ್ಭ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ : ಹೈವೇ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಸೂಚನೆ - Karavali Times ಹೆದ್ದಾರಿ ಕಾಮಗಾರಿಗಳ ಸಂದರ್ಭ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ : ಹೈವೇ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಸೂಚನೆ - Karavali Times

728x90

30 September 2026

ಹೆದ್ದಾರಿ ಕಾಮಗಾರಿಗಳ ಸಂದರ್ಭ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ : ಹೈವೇ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಸೂಚನೆ

ಪುತ್ತೂರು, ಸೆಪ್ಟೆಂಬರ್ 30, 2026 (ಕರಾವಳಿ ಟೈಮ್ಸ್) : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಕೆಲವು ಕಡೆಗಳಲ್ಲಿ ಜನರ ಓಡಾಟಕ್ಕೆ ಮತ್ತು ಸಂಪರ್ಕ ರಸ್ತೆಗಳಿಗೂ ತೊಂದರೆಯಾದ ಬಗ್ಗೆ ದೂರುಗಳು ಬಂದಿದ್ದು, ಕಾಮಗಾರಿಯಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಅಶೋಕ್ ರೈ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎ ಐ) ಅಧಿಕಾರಿಗಳಿಗೆ ಸೂಚಿಸಿದರು. 

ಉಪ್ಪಿನಂಗಡಿ ಬಳಿಯ ಕರ್ವೆಲು, ಪೆರ್ನೆ ಹಾಗೂ  ಬಿಳಿಯೂರು ಬಳಿ ಸರ್ವಿಸ್ ರಸ್ತೆಗಳಿಲ್ಲ, ಸಂಪರ್ಕ ರಸ್ತೆಗಳಿಲ್ಲ ಮತ್ತು ಕೆಲವು ಕಡೆಗಳಲ್ಲಿ ಮಣ್ಣು ಹಾಕಿ ಹಳೆಯ ರಸ್ತೆಗಳನ್ನು ಮುಚ್ಚಿ ಹಾಕಲಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಎನ್ ಎಚ್ ಎ ಐ ಪೆÇ್ರಜೆಕ್ಟ್ ಡೈರೆಕ್ಟರ್ ಅಬ್ದುಲ್ ಜಾವೆದ್ ಹಾಗೂ ಇಂಜಿನಿಯರ್ ಗಳನ್ನು ಶಾಸಕರು ಕಚೇರಿಗೆ ಕರೆಸಿ ಮಾತುಕತೆ ನಡೆಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದರು.

ಅಭಿವೃದ್ದಿ ಬೇಕು ಆದರೆ ರಸ್ತೆ ಅಗಲೀಕರಣದ ವೇಳೆ ಜನರಿಗೆ ತೊಂದರೆಯಾಗಬಾರದು. ಈ ಹಿಂದೆ ಇದ್ದ ಕೆಲವು ಸಂಂಪರ್ಕ ರಸ್ತೆಗಳ ಬಳಿ ಯೂ ಟರ್ನ್ ಬದಲಾಯಿಸಲಾಗಿದೆ. ಯೂ ಟರ್ನ್ ಬದಲಾವಣೆಯಾದ ಕಾರಣ ಕಿಲೋ ಮೀಟರ್ ದೂರ ತೆರಳಿ ತಮ್ಮ ರಸ್ತೆಗಳಿಗೆ ಸಂಪರ್ಕ ಮಾಡಬೇಕಾದ ಸ್ಥಿತಿ ಎಂಬ ದೂರುಗಳು ಇದೆ. ಎಲ್ಲೆಲ್ಲಿ ಯೂ ಟರ್ನ್ ಕೊಡಲು ಸಾಧ್ಯವೋ ಅಲ್ಲಿ ಕೊಡುವ ಕೆಲಸವನ್ನು ಮಾಡಬೇಕು. ಶಾಲೆಗಳು, ದೇವಸ್ಥಾನ, ಮಸೀದಿ ಇರುವಲ್ಲಿ ಸರ್ವಿಸ್ ರಸ್ತೆಗಳು ಮ್ತತು ಯು ಟರ್ನ್ ಗಳನ್ನು ಕೊಡುವಲ್ಲಿ ಕ್ರಮವಹಿಸಬೇಕು. ರಸ್ತೆ ಬದಿ ಎಲ್ಲಿಯಾದರೂ ಮಣ್ಣು ರಾಶಿ ಹಾಕಿ ಸಂಪರ್ಕ ರಸ್ತೆಗೆ ತೊಂದರೆಯಾಗಿದ್ದಲ್ಲಿ ಅದನ್ನು ತೆರವು ಮಾಡಬೇಕು. ಅಪಘಾತ ವಲಯಗಳಲ್ಲಿ ಯಾವುದೇ ಯೂ ಟರ್ನ್‍ಗಳನ್ನು ಕೊಡಬೇಡಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. 

ಈ ಸಂದರ್ಭ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್ ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಹೆದ್ದಾರಿ ಕಾಮಗಾರಿಗಳ ಸಂದರ್ಭ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ : ಹೈವೇ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಸೂಚನೆ Rating: 5 Reviewed By: karavali Times
Scroll to Top