ಸರಕಾರಿ ಲೇಡಿಗೋಷನ್ ಆಸ್ಪತ್ರೆ, ಕೆಎಂಸಿ ತಜ್ಞರ ಜಂಟಿ ಕಾರ್ಯಾಚರಣೆಯಿಂದ ಗರ್ಭಿಣಿ ಮಹಿಳೆಗೆ ಪುನರ್ ಜನ್ಮದ ಸಾಧನೆ - Karavali Times ಸರಕಾರಿ ಲೇಡಿಗೋಷನ್ ಆಸ್ಪತ್ರೆ, ಕೆಎಂಸಿ ತಜ್ಞರ ಜಂಟಿ ಕಾರ್ಯಾಚರಣೆಯಿಂದ ಗರ್ಭಿಣಿ ಮಹಿಳೆಗೆ ಪುನರ್ ಜನ್ಮದ ಸಾಧನೆ - Karavali Times

728x90

27 September 2026

ಸರಕಾರಿ ಲೇಡಿಗೋಷನ್ ಆಸ್ಪತ್ರೆ, ಕೆಎಂಸಿ ತಜ್ಞರ ಜಂಟಿ ಕಾರ್ಯಾಚರಣೆಯಿಂದ ಗರ್ಭಿಣಿ ಮಹಿಳೆಗೆ ಪುನರ್ ಜನ್ಮದ ಸಾಧನೆ

ಮಂಗಳೂರು, ಸೆಪ್ಟೆಂಬರ್ 28, 2026 (ಕರಾವಳಿ ಟೈಮ್ಸ್) : ಸಮಾಜಮುಖಿ ಹಾಗೂ ಮಹಿಳಾಪರ ಸೇವೆಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಯು ಖಾಸಗಿ ಆಸ್ಪತ್ರೆಯವರು ಕೈ ಚೆಲ್ಲಿದ ಪ್ರಕರಣದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಮಹಿಳೆಯೊಬ್ಬರಿಗೆ ಜೀವದಾನ ಮಾಡಿ ತನ್ನ ಸೇವಾಪರತೆಯ ವೈಶಿಷ್ಟ್ಯತೆಯನ್ನು ಮತ್ತೆ ಮೆರೆದು ದಾಖಲೆ ನಿರ್ಮಿಸಿದೆ.

ಉತ್ತರ ಕನ್ನಡ ಜಿಲ್ಲೆಯ 33 ವಾರಗಳ ಗರ್ಭಾವಧಿಯ ಗರ್ಭಿಣಿಯೊಬ್ಬರನ್ನು ಪ್ರಸವಪೂರ್ವ ರಕ್ತಸ್ರಾವದ ಕಾರಣದಿಂದಾಗಿ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆ ಒಂದರಲ್ಲಿ ದಾಖಲುಗೊಳಿಸಲಾಗಿತ್ತು. ಸದ್ರಿ ಮಹಿಳೆಯ ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಲಾಗಿ ಪ್ಲಾಸೆಂಟಾ ಅಥವಾ ಮಾಸು ಶಿಶು ತಾಯಿ ಗರ್ಭದಿಂದ ಹೊರಬರುವ ದಾರಿಗೆ ಅಡ್ಡವಾಗಿ ಇರುವುದು ಕಂಡು ಬಂದಿತ್ತು. ಅಲ್ಲದೆ ಪ್ಲಾಸೆಂಟಾ ಅಂಟಿಕೊಂಡಿರುವ ಜಾಗದ ವೈಪರೀತ್ಯಗಳಾದ ಪ್ಲಾಸೆಂಟಾ ಅಕ್ರೀಟಾ ಅಥವಾ ಪ್ಲಾಸೆಂಟಾ ಪರ್ಕ್ರೀಟಾ ಇದಾಗಿರುವ ಸಾಧ್ಯತೆ ಇತ್ತು. ಇವೆರಡು ಸನ್ನಿವೇಶಗಳಲ್ಲಿ ಪ್ಲಾಸೆಂಟಾದ ರಕ್ತನಾಳ ಮತ್ತು ಜೀವಕೋಶಗಳು ಗರ್ಭಾಶಯದ ಸ್ನಾಯು ಭಾಗವನ್ನು ಪ್ರವೇಶಿಸುವುದು ಮಾತ್ರವಲ್ಲದೆ ಕೆಲವು ಸಂದರ್ಭಗಳಲ್ಲಿ ಗರ್ಭಾಶಯದಿಂದಲೂ ಹೊರಬಂದು ಅದರ ಪಕ್ಕದಲ್ಲಿರುವ ಅಂಗವಾದ ಮೂತ್ರ ಕೋಶಕ್ಕೂ ಲಗ್ಗೆಯಿಡಬಹುದಾದ ಸ್ಥಿತಿ ಇರುತ್ತದೆ. ಇಂತಹ ವಿಲಕ್ಷಣ ಪರಿಸ್ಥಿತಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ತೆಗೆದುಕೊಳ್ಳುವ ರೋಗ ನಿರ್ಣಯವೇ ಮುಖ್ಯ. ಪ್ರಸೂತಿ ಸಂಬಂಧಿತ ಗಂಭೀರ ಪ್ಲಾಸೆಂಟಾ ಪರ್ಕ್ರೀಟಾದ ಕಥೆ ಇದಾಗಿದ್ದರೂ ಇಲ್ಲಿ ಮೂತ್ರ ಕೋಶಕ್ಕೆ ಗಂಭೀರ ಹಾನಿ ಉಂಟಾಗಿರುವುದರಿಂದ ಮೂತ್ರ ಕೋಶ ತಜ್ಞರ ಅವಶ್ಯಕತೆ ಇದ್ದೇ ಇರುತ್ತದೆ. ಜೊತೆಯಲ್ಲಿ ಸಣ್ಣ ಕರುಳು ಅಥವಾ ದೊಡ್ಡ ಕರುಳಿಗೂ ಇದರಿಂದಾಗಿ ಗಾಯವಾಗ ಬಹುದಾಗಿರುವುದರಿಂದ ಸಾಮಾನ್ಯ ಶಸ್ತ್ರ ಚಿಕಿತ್ಸಾ ತಜ್ಞರ ಪಾಲ್ಗೊಳ್ಳುವಿಕೆ ಕೂಡಾ ಅಷ್ಟೇ ಮಹತ್ವವನ್ನು ಪಡೆಯುತ್ತದೆ. ಮುಂದುವರಿದು ಗರ್ಭಕೋಶವನ್ನೇ ಶಸ್ತ್ರ ಚಿಕಿತ್ಸಾ ಮುಖಾಂತರ ಕತ್ತರಿಸಿ ತೆಗೆಯುವುದು ಅನಿವಾರ್ಯವಾಗುತ್ತದೆ. ಸುಮಾರು 3 ಲೀಟರಿನಿಂದ 4 ಲೀಟರಿನಷ್ಟು ಮೌಲ್ಯಯುತ ರಕ್ತ ಪೆÇೀಲಾಗುವುದರಿಂದ ಈ ಗರ್ಭಿಣಿ ರೋಗಿಯನ್ನು ಬದುಕುಳಿಸುವುದೇ ಬಹುದೊಡ್ಢ ಸವಾಲು. ಇಂತಹ ಪರಿಸ್ಥಿತಿಯಲ್ಲಿ ತಾಯಿ ಮರಣಗಳು ಸಂಭವಿಸುವ ಸಂದರ್ಭವೇ ಅತ್ಯಧಿಕ. ಆದರೆ ಕಳೆದ ಒಂದೂವರೆ ವರ್ಷದಿಂದ ಅಳವಡಿಸಿಕೊಂಡ ಜೀವರಕ್ಷಕ ವಿಧಾನದಿಂದಾಗಿ ಈ ಮಾರಣಾಂತಿಕ ಸ£್ನವೇಶದಿಂದ ತಾಯಂದಿರನ್ನು ಉಳಿಸಿಕೊಳ್ಳಲಾಗಿದೆ. ವಿವಿಧ ಅಂಗಾಂಗಗಳು ಇದರಲ್ಲಿ ಬಲಿಪಶುವಾಗುವುದರಿಂದ ಅಂತಹ ಅಂಗಗಳಿಗೆ ಸಂಬಂಧಿತ ತಜ್ಞರು ಮತ್ತು ಸೂಪರ್ ಸ್ಪೆಶಾಲಿಟಿ ತಜ್ಞರನ್ನು ಮುಂಚಿತವಾಗಿಯೇ ಶಸ್ತ್ರ ಚಿಕಿತ್ಸಾಗಾರಕ್ಕೆ ಬರಮಾಡಿಕೊಂಡು ಅವರ ಉಪಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಗರ್ಭಿಣಿಯ ದೇಹದಿಂದ ಹೊರ ಹೊಮ್ಮುವ ಒಂದೊಂದು ಹನಿ ರಕ್ತವನ್ನು ಕನಿಷ್ಠಗೊಳಿಸಬೇಕೆನ್ನುವ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ದುರ್ಗಾಪ್ರಸಾದ್ ಎಂ.ಆರ್. ಅವರ ಪರಿಕಲ್ಪನೆಯ ವಿಶೇಷ ಅಂಶವಾಗಿ ಈ ಪ್ರಕ್ರಿಯೆಯನ್ನು ಲೇಡಿಗೋಷನ್ ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಸದ್ರಿ ಮಹಿಳೆಯನ್ನು ಕೂಡಾ ಬಹು ವೈದ್ಯ ಜೀವ ರಕ್ಷಕ ಆರೈಕೆ ಪದ್ಧತಿಯನ್ನು ಅನುಪಾಲನೆ ಮಾಡಿ ಅತ್ಯಮೂಲ್ಯ ತಾಯಿಯ ಪ್ರಾಣವನ್ನು ಉಳಿಸಲಾಗಿದೆ. ಸಂತಸದ ವಿಚಾರವೆಂದರೆ ಈ ರೀತಿಯ ನೈಪುಣ್ಯತೆಯ ಆರೈಕೆಯಿಂದ ಹೊಸ ಜೀವನ ಹಾಗೂ ಪುನರ್ಜನ್ಮವನ್ನು ಪಡೆದ ಸರದಿಯಲ್ಲಿ ಹತ್ತನೆಯ ಗರ್ಭಿಣಿ ಮಹಿಳೆ ಇವರಾಗಿರುತ್ತಾರೆ. ಇಂತಹ ಒಂದು ಅತ್ಯಮೂಲ್ಯ ಕಾರ್ಯದಲ್ಲಿ ಸಕಾಲಿಕ ನಿರ್ಣಯ ತೆಗೆದುಕೊಳ್ಳುವಲ್ಲಿ ಕೆ.ಎಂ.ಸಿ. ಪ್ರಸೂತಿ ವಿಭಾಗದ ಪೆÇ್ರಫೆಸರ್ ಡಾ ನಿಖಿಲ್ ಶೆಟ್ಟಿ ಅವರ ಪಾತ್ರ ಹಿರಿದಾಗಿದ್ದು ಮುಖ್ಯ ಪ್ರಸೂತಿ ಶಸ್ತ್ರಚಿಕಿತ್ಸಕರಾಗಿ ಕರ್ತವ್ಯ ನಿರ್ವಹಿಸಿದರು. ಸೀನಿಯರ್ ರೆಸಿಡೆಂಟ್ ಡಾ ಸುಶಾಮ್ ಶೆಟ್ಟಿ, ಅಸಿಸ್ಟೆಂಟ್ ಪೆÇ್ರಫೆಸರ್ ಗಳಾದ ಡಾ ಗಗನ್ ದೀಪ್ ಕೌರ್ ಮತ್ತು ಡಾ ಪ್ರಥ್ವಿ ಶೆಣೈ, ಜೂನಿಯರ್ ರೆಸಿಡೆಂಟ್ ಡಾ ತನ್ವಿತಾ ಸಹಕರಿಸಿದ್ದಾರೆ. 

ಕೆ.ಎಂ.ಸಿ. ಮೂತ್ರ ರೋಗ ಶಸ್ತ ್ರಚಿಕಿತ್ಸಾ ತಜ್ಞರುಗಳಾದ ಡಾ ಪ್ರಮೋದ್, ಡಾ ಮೀಟ್, ಡಾ ಶಿವಾನಂದ್ ಇರಂತರ ನಾಲ್ಕು ಗಂಟೆಗಳ ಸತತ ಶಸ್ತ್ರ ಚಿಕಿತ್ಸಾ ಸೇವಾ ಪ್ರಯತ್ನದಿಂದ ಸಂಪೂರ್ಣ ಘಾಸಿಕೊಂಡ ಮೂತ್ರ ಕೋಶಕ್ಕೆ ಹೊಸ ವಿನ್ಯಾಸದ ಪೂರ್ವ ಚಿಕಿತ್ಸಾ ರೂಪವನ್ನು ನೀಡಿದರು. ಅರಿವಳಿಕೆ ತಜ್ಞರಾಗಿ ಕೆ.ಎಂ.ಸಿ. ಅಸೋಸಿಯೇಟ್ ಪೆÇ್ರಫೆಸರ್ ಡಾ ಶಿಲ್ಪಾ ಶಸ್ತ್ರಚಿಕಿತ್ಸಾ ಸಮಯದಲ್ಲಿ ಆದ್ಯಂತವಾಗಿ ರೋಗಿಯ ಪ್ರಾಣ ಮಾನದಂಡಗಳ ಮೇಲೆ ತೀವ್ರ ನಿಗಾ ವಹಿಸಿದರು. ಅಪರಿಪಕ್ವ ಶಿಶುವನ್ನು ನವಜಾತ ಶಿಶು ವಿಭಾಗಕ್ಕೆ ಸ್ಥಳಾಂತರಗೊಳಿಸುವ ಮುಂಚಿತವಾಗಿ ಅಗತ್ಯ ತುರ್ತು ಆರೈಕೆಯನ್ನು ಮಕ್ಕಳ ತಜ್ಞೆ ಡಾ ಆರುಷಿ ನಿರ್ವಹಿಸಿದರು. ಶುಶ್ರೂಷಕಿ ಶ್ರೀಮತಿ ದೀಪಾ ಸಹಾಯಕರಾಗಿ ಸಕಾಲಿಕವಾಗಿ ಕರ್ತವ್ಯ ನಿರ್ವಹಿಸಿದರು. ಸರ್ವ ಸುಸಜ್ಜಿತವಾಗಿ ಸರ್ಕಾರದ ಅನುದಾನದಿಂದ ಪ್ರಾರಂಭಿಸಲ್ಪಟ್ಟ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸಾಗಾರ ಮತ್ತು ಪ್ರಸೂತಿ ತೀವ್ರ ನಿಗಾ ಘಟಕ ಅಸಹಾಯಕ ಬಡ ಮಹಿಳೆಯ ಅಮೂಲ್ಯ ಪ್ರಾಣವನ್ನು ಉಳಿಸಿ ಸರಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಅತ್ಯುನ್ನತ ಮೇರು ಪಂಕ್ತಿಯಲ್ಲಿ ನಿಂತಿರುವುದಂತೂ ಅಷ್ಟೇ ವಾಸ್ತವ.

ಗಮನಿಸಬೇಕಾದ ಅಂಶವೆಂದರೆ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗರ್ಭಿಣಿ, ಬಾಣಂತಿ ಹಾಗೂ ನವಜಾತ ಶಿಶುವಿನ ಆರೈಕೆ ಸರಕಾರದ ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಂತೆ ಸಂಪೂರ್ಣ ಉಚಿತವಾಗಿರುತ್ತದೆ. ಆದುದರಿಂದ ಸಾರ್ವಜನಿಕರು ಸರಕಾರಿ ಆರೋಗ್ಯ ವ್ಯವಸ್ಥೆಗಳನ್ನು ತಾತ್ಸಾರದಿಂದ ನೋಡದೆ ಬಡಜನತೆಯ ಜೀವ ಉಳಿಸುವ ಸಂಜೀವಿನಿ ಎಂದೇ ಗೌರವ ಭಾವನೆಯಿಂದ ನೋಡಬೇಕಿದೆ ಎಂದು ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ದುರ್ಗಾಪ್ರಸಾದ್ ಎಂ.ಆರ್. ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸರಕಾರಿ ಲೇಡಿಗೋಷನ್ ಆಸ್ಪತ್ರೆ, ಕೆಎಂಸಿ ತಜ್ಞರ ಜಂಟಿ ಕಾರ್ಯಾಚರಣೆಯಿಂದ ಗರ್ಭಿಣಿ ಮಹಿಳೆಗೆ ಪುನರ್ ಜನ್ಮದ ಸಾಧನೆ Rating: 5 Reviewed By: karavali Times
Scroll to Top