ಮಂಗಳೂರು : ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದ ವೇಳೆ ಸಭಾಂಗಣದ ಕಾರಿಡಾರ್ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ - Karavali Times ಮಂಗಳೂರು : ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದ ವೇಳೆ ಸಭಾಂಗಣದ ಕಾರಿಡಾರ್ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ - Karavali Times

728x90

26 September 2026

ಮಂಗಳೂರು : ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದ ವೇಳೆ ಸಭಾಂಗಣದ ಕಾರಿಡಾರ್ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ

ಮಂಗಳೂರು, ಸೆಪ್ಟೆಂಬರ್ 26, 2026 (ಕರಾವಳಿ ಟೈಮ್ಸ್) : ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಸೇರಿದ್ದ ಸಭಾಂಗಣದ ಬಾಲ್ಕನಿ ಕುಸಿದು ಬಿದ್ದು ಕನಿಷ್ಠ 5 ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಗರದ ಹೊರ ವಲಯದ ಎಮ್ಮೆಕೆರೆ ಎಂಬಲ್ಲಿ ಸೆ 26 ರಂದು ಸಂಭವಿಸಿದೆ. 

ಗಾಯಗೊಂಡವರನ್ನು ಹಳೆಯಂಗಡಿ ನಿವಾಸಿ ಮಹಮ್ಮದ್ ಇಲಿಯಾಸ್ ಮೊಯಿದಿನಬ್ಬ ಅವರ ಪುತ್ರ ಮಹಮ್ಮದ್ ಶಮಾಜ್ (16), ಸೂರಿಂಜೆ ನಿವಾಸಿ ಹಬೀಬ್ ಅಹಮ್ಮದ್ ಅವರ ಪುತ್ರ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರ್ ನಿವಾಸಿ ಸುಲೈಮಾನ್ ಅವರ ಪುತ್ರ ಹನೀಫ್ (23), ಕಾವೂರು-ಗಾಂಧಿನಗರ ನಿವಾಸಿ ಫಾತಿಮಾ ಅವರ ಪುತ್ರ ದಾವೂದ್ ಫರ್ಸೀನ್ ಅಹಮ್ಮದ್ (18) ಹಾಗೂ ಕಸಬ-ಬೆಂಗ್ರೆ ನಿವಾಸಿ ಮಹಮ್ಮದ್ ಶಾಲಿ ಅವರ ಪುತ್ರ ಮಹಮ್ಮದ್ ಶಕೀಲ್ ಹುಸೈನ್ (18) ಎಂದು ಹೆಸರಿಸಲಾಗಿದ್ದು, ಗಾಯಾಳುಗಳೆಲ್ಲರನ್ನೂ ನಗರದ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ ಶಮಾಜ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. 

ಎಮ್ಮೆಕೆರೆಯ ರಾಮ ಲಕ್ಷ್ಮಿ ನಾರಾಯಣ ಸಭಾ ಭವನದಲ್ಲಿ ಪದಾಧಿಕಾರಿಗಳ ಸಮಾರಂಭವನ್ನು ಆಚರಿಸಲು ವಿದ್ಯಾರ್ಥಿಗಳು ಜಮಾಯಿಸಿದ್ದರು. ಅತಿಯಾದ ಜನಸಂದಣಿಯಿಂದಾಗಿ, ಹೊರಗಿನ ಕಾರಿಡಾರ್‍ನಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಆಧಾರ ಗೋಡೆಗೆ ಒರಗಿಕೊಂಡಿದ್ದರು. ಆ ಗೋಡೆ ದುರ್ಬಲವಾಗಿದ್ದರಿಂದ ಕುಸಿದು ಬಿದ್ದ ಪರಿಣಾಮ ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದ ವೇಳೆ ಸಭಾಂಗಣದ ಕಾರಿಡಾರ್ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ Rating: 5 Reviewed By: karavali Times
Scroll to Top