ಸೆ 28 ರಂದು ಬಿ.ಸಿ.ರೋಡಿನಲ್ಲಿ ಹಿಂದೂ ಸಂಘಟನೆಯಿಂದ ಪ್ರತಿಭಟನೆ, ಪೊಲೀಸ್ ಬಿಗು ಬಂದೋಬಸ್ತ್ : ಗೂಂಡಾ ಕಾಯ್ದೆ ದಾಖಲಾಗಿರುವ ಆರೋಪಿಗಳ ಪ್ರಕರಣಗಳ ವಿವರ ಬಿಡುಗಡೆಗೊಳಿಸಿದ ಪೊಲೀಸ್ ಇಲಾಖೆ - Karavali Times ಸೆ 28 ರಂದು ಬಿ.ಸಿ.ರೋಡಿನಲ್ಲಿ ಹಿಂದೂ ಸಂಘಟನೆಯಿಂದ ಪ್ರತಿಭಟನೆ, ಪೊಲೀಸ್ ಬಿಗು ಬಂದೋಬಸ್ತ್ : ಗೂಂಡಾ ಕಾಯ್ದೆ ದಾಖಲಾಗಿರುವ ಆರೋಪಿಗಳ ಪ್ರಕರಣಗಳ ವಿವರ ಬಿಡುಗಡೆಗೊಳಿಸಿದ ಪೊಲೀಸ್ ಇಲಾಖೆ - Karavali Times

728x90

27 September 2026

ಸೆ 28 ರಂದು ಬಿ.ಸಿ.ರೋಡಿನಲ್ಲಿ ಹಿಂದೂ ಸಂಘಟನೆಯಿಂದ ಪ್ರತಿಭಟನೆ, ಪೊಲೀಸ್ ಬಿಗು ಬಂದೋಬಸ್ತ್ : ಗೂಂಡಾ ಕಾಯ್ದೆ ದಾಖಲಾಗಿರುವ ಆರೋಪಿಗಳ ಪ್ರಕರಣಗಳ ವಿವರ ಬಿಡುಗಡೆಗೊಳಿಸಿದ ಪೊಲೀಸ್ ಇಲಾಖೆ

ಬಂಟ್ವಾಳ, ಸೆಪ್ಟೆಂಬರ್ 28, 2026 (ಕರಾವಳಿ ಟೈಮ್ಸ್) : ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಸಿ ರೋಡಿನಲ್ಲಿ ಸೆಪ್ಟೆಂಬರ್ 28 ರಂದು ಹಿಂದೂ ಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಕಾರ್ಯಕ್ರಮಕ್ಕೆ ಜಿಲ್ಲಾ ಪೆÇಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಈ ಪ್ರಯುಕ್ತ ಸಾರ್ವಜನಿಕರಿಗೆ ಧೈರ್ಯ ತುಂಬಲು ಸೆ 27 ರಂದು ಬಿ ಸಿ ರೋಡ್ ಪರಿಸರದಿಂದ ಕೈಕಂಬ ಜಂಕ್ಷನ್ ವರೆಗೆ ಪೆÇಲೀಸರಿಂದ ಪಥ ಸಂಚಲನ ನಡೆಯಿತು. 

ಸೆ 28 ರಂದು ನಡೆಯುವ ಪ್ರತಿಭಟನೆ ಪ್ರಯುಕ್ತ ಬಂಟ್ವಾಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಓರ್ವ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಓರ್ವ ಸಹಾಯಕ ಪೊಲೀಸ್ ಅಧೀಕ್ಷಕರು, 8 ಮಂದಿ ಪೊಲೀಸ್ ಇನ್ಸ್ ಪೆಕ್ಟರ್ ಗಳು, 23 ಮಂದಿ ಪಿಎಸ್ಸೈಗಳು, 34 ಮಂದಿ ಎಎಸೈಗಳು, 184 ಮಂದಿ ಪೊಲೀಸ್ ಸಿಬ್ಬಂದಿಗಳು ಹಾಗೂ 5 ಮಂದಿ ಹೋಂಗಾರ್ಡ್ ಗಳು, 2 ಎಸ್ ಎ ಎಫ್ ತುಕಡಿ, 3 ಡಿ ಎ ಆರ್ ತುಕಡಿ, 4 ಕೆ ಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಕೆ ತಿಳಿಸಿದ್ದಾರೆ.

ಹಿಂದೂ ಸಂಘಟನೆಗಳು ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಆರೋಪಿಗಳ ವಿರುದ್ಧದ ಪ್ರಕರಣಗಳ ವಿವರಗಳನ್ನು ಪೊಲೀಸ್ ಇಲಾಖೆ ಮಾಧ್ಯಮಗಳಿಗೆ ಬಿಡುಡಗೆಗೊಳಿಸಿದೆ. 

ಗೂಂಡಾ ಕಾಯ್ದೆ ವಿಧಿಸಿದ ಪ್ರಮುಖ ಆರೋಪಿ ಭರತ್ ಕುಮ್ಡೇಲು ವಿರುದ್ದ ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 169/2017 ಕಲಂ 143, 147, 148, 447, 448, 302, 120(ಬಿ), 201 ಜೊತೆಗೆ 149 ಐಪಿಸಿ ಅಡಿ ಕೊಲೆ ಪ್ರಕರಣ, ಉಪ್ಪಿನಂಗಡಿ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 130/2023 ಕಲಂ: 143, 147, 323 ಜೊತೆಗೆ 149 ಐಪಿಸಿ ಹಾಗೂ 3(1)(ಆರ್), 3(1) ಎಸ್ಸಿ/ ಎಸ್ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015

ಅಡಿ ದಲಿತ ದೌರ್ಜನ್ಯ ಪ್ರಕರಣ, ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 152/2024, ಕಲಂ: 189(2), 191(2), 352, 351(2), 190 ಭಾರತೀಯ ನ್ಯಾಯ ಸಂಹಿತೆ-2023 ರಂತೆ ಸಾರ್ವಜನಿಕ ಆಸ್ತಿಗೆ ಹಾನಿ ಪ್ರಕರಣ, ಪುತ್ತೂರು ನಗರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 35/2025, ಕಲಂ: 353(2) ಬಿಎನ್‍ಎಸ್-2023

ರಂತೆ ಕೋಮು ಪ್ರಚೋದನಾತ್ಮಕ ಭಾಷಣ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 54/2025, ಕಲಂ: 103(1), 109(1), 118(1), 118(2), 61(2)(ಎ), 238(ಎ), 238(ಬಿ), 249(ಎ) ಜೊತೆಗೆ 3(5) ಬಿಎನ್‍ಎಸ್-2023 ಹಾಗೂ ಕಲಂ 25(1)(ಎ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1959 ಮತ್ತು ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ-2000ರ ಕಲಂ 3(1)(1), 3(1)(11), 3(2), 3(3), 3(4) ಅಡಿ ಕೊಲೆ ಪ್ರಕರಣ ದಾಖಲಾಗಿವೆ. 

ಇನ್ನೋರ್ವ ಆರೋಪಿ ಅಭಿನವ್ ರೈ ವಿರುದ್ದ ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 169/2017 ಕಲಂ: 143, 147, 148, 302, 120(ಬಿ), 201 ಜೊತೆಗೆ 149 ಐಪಿಸಿ ಅಡಿ ಕೊಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 54/2025 ಕಲಂ: 103(1), 109(1), 118(1), 118(2), 61(2)(ಎ), 238(ಎ), 238(ಬಿ), 249(ಎ) ಜೊತೆಗೆ 3(5) ಬಿಎನ್‍ಎಸ್-2023 ಹಾಗೂ ಕಲಂ 25(1)(ಎ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1959 ಮತ್ತು ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ-2000ರ ಕಲಂ 3(1)(1), 3(1)(ii), 3(2), 3(3), 3(4) ಅಡಿ ಕೊಲೆ ಪ್ರಕರಣ ದಾಖಲಾಗಿದೆ. 

ಪ್ರದೀಪ್ ವಿರುದ್ದ ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 169/2017, ಕಲಂ: 143, 147, 148, 447, 448, 302, 120(ಬಿ), 201 ಜೊತೆಗೆ 149 ಐಪಿಸಿ ಅಡಿ ಕೊಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 124/2021 ಕಲಂ: 448, 504, 323, 324, 307, 506 ಜೊತೆಗೆ 34 ಐಪಿಸಿ ಅಡಿ ಕೊಲೆ ಯತ್ನ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 54/2025 ಮೇಲ್ಕಂಡ ಬಿಎನ್‍ಎಸ್, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ ಕಲಂಗಳಡಿ ಕೊಲೆ ಪ್ರಕರಣ ದಾಖಲಾಗಿದೆ. 

ಶಿವಪ್ರಸಾದ್ ವಿರುದ್ದ ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 169/2017, ಕಲಂ: 143, 147, 148, 447, 448, 302, 120(ಬಿ), 201 ಜೊತೆಗೆ 149 ಐಪಿಸಿ ಅಡಿ ಕೊಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 54/2025, ಬಿಎನ್‍ಎಸ್, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ ವಿವಿಧ ಕಲಂಗಳಡಿ ಕೊಲೆ ಪ್ರಕರಣ ದಾಖಲಾಗಿದೆ. 

ರಂಜಿತ್ ವಿರುದ್ದ ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 169/2017, ಕಲಂ: 143, 147, 148, 447, 448, 302, 120(ಬಿ), 201 ಜೊತೆಗೆ 149 ಐಪಿಸಿ ಅಡಿ ಕೊಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 54/2025, ಬಿಎನ್‍ಎಸ್, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ ವಿವಿಧ ಕಲಂಗಳಡಿ ಕೊಲೆ ಪ್ರಕರಣ ದಾಖಲಾಗಿದೆ. 

ತೇಜಾಕ್ಷ ವಿರುದ್ದ ಬಜಪೆ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 179/2023, ಕಲಂ 8(ಸಿ),20(ಬಿ)(11)(ಎ)  ಎನ್‍ಡಿಪಿಎಸ್ ಕಾಯ್ದೆ ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 119/2024, ಕಲಂ: 126(2), 352, 115(2), 351(2) ಜೊತೆಗೆ 3(5) ಬಿಎನ್‍ಎಸ್ ಅಡಿ ಸಾರ್ವಜನಿಕ ಆಸ್ತಿಗೆ ಹಾನಿ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 54/2025

ಬಿಎನ್‍ಎಸ್, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ ವಿವಿಧ ಕಲಂಗಳಡಿ ಕೊಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಸಂಖ್ಯೆ: 58/2025

ಕಲಂ: 110 ಬಿಎನ್‍ಎಸ್ ಕಾಯ್ದೆ ಅಪರಾಧಿ ಮಾನವ ಹತ್ಯೆಗೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಎಸ್ಪಿ ಡಾ ಕೆ ಅರುಣ್ ಅವರು ಆರೋಪಿಗಳ ಅಪರಾಧಿಕ ಹಿನ್ನಲೆ ಬಹಿರಂಗಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸೆ 28 ರಂದು ಬಿ.ಸಿ.ರೋಡಿನಲ್ಲಿ ಹಿಂದೂ ಸಂಘಟನೆಯಿಂದ ಪ್ರತಿಭಟನೆ, ಪೊಲೀಸ್ ಬಿಗು ಬಂದೋಬಸ್ತ್ : ಗೂಂಡಾ ಕಾಯ್ದೆ ದಾಖಲಾಗಿರುವ ಆರೋಪಿಗಳ ಪ್ರಕರಣಗಳ ವಿವರ ಬಿಡುಗಡೆಗೊಳಿಸಿದ ಪೊಲೀಸ್ ಇಲಾಖೆ Rating: 5 Reviewed By: karavali Times
Scroll to Top