ಕಾರ್ಯಕರ್ತರ ವಿರುದ್ದ ಗೂಂಡಾ ಕಾಯ್ದೆ ವಿರೋಧಿಸಿ ಹಿಂದೂ ಸಂಘಟನೆಗಳಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ - Karavali Times ಕಾರ್ಯಕರ್ತರ ವಿರುದ್ದ ಗೂಂಡಾ ಕಾಯ್ದೆ ವಿರೋಧಿಸಿ ಹಿಂದೂ ಸಂಘಟನೆಗಳಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ - Karavali Times

728x90

28 September 2026

ಕಾರ್ಯಕರ್ತರ ವಿರುದ್ದ ಗೂಂಡಾ ಕಾಯ್ದೆ ವಿರೋಧಿಸಿ ಹಿಂದೂ ಸಂಘಟನೆಗಳಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ

 ಬಂಟ್ವಾಳ, ಸೆಪ್ಟೆಂಬರ್ 29, 2026 (ಕರಾವಳಿ ಟೈಮ್ಸ್) : ನ್ಯಾಯಾಲಯದಿಂದ ಜಾಮೀನು ದೊರೆತರೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ದ ಗೂಂಡಾ ಕಾಯ್ದೆ ಬಳಸಿ ಜೈಲಿಗಟ್ಟಿರುವ ಪೊಲೀಸರ ಕ್ರಮ ವಿರೋಧಿಸಿ ಹಿಂದೂ ಸಂಘಟನೆಗಳ ವತಿಯಿಂದ ಬಿ ಸಿ ರೋಡಿನಲ್ಲಿ ಸೆ 28 ರಂದು ಪ್ರತಿಭಟನೆ ನಡೆಯಿತು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶಾಸಕರಾದ ಯು ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಡಾ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಪ್ರಮುಖರಾದ ಡಾ ಪ್ರಭಾಕರ್ ಭಟ್ ಕಲ್ಲಡ್ಕ, ಸತೀಶ್ ದಾವಣಗೆರೆ, ಪ್ರಸಾದ್ ಕುಮಾರ್ ರೈ, ಪ್ರಭಂಜನ್ ಸೂರ್ಯ, ಗೋಪಾಲ ಕುತ್ತಾರ್, ಸಚಿನ್ ಮೆಲ್ಕಾರ್, ಭಾಸ್ಕರ್ ರಾವ್, ಸತೀಶ್ ಕುಂಪಲ, ಕಮಲಾ ಪ್ರಭಾಕರ್ ಭಟ್, ಶರಣ್ ಪಂಪ್ ವೆಲ್, ವಿಕಾಸ್ ಪುತ್ತೂರು, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ನರಸಿಂಹ ಮಾಣಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

ಪ್ರತಿಭಟನಾಕಾರರು ಪೊಲೀಸ್ ಇಲಾಖೆ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ದ ಕಿಡಿಕಾರಿದರು. ಪ್ರತಿಭಟನೆ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ಹೆಚ್ಚುವರಿ ಪೆÇಲೀಸರನ್ನು ನಿಯೋಜಿಸಲಾಗಿದ್ದು, ಓರ್ವ ಹೆಚ್ಚುವರಿ ಪೆÇಲೀಸ್ ಅಧೀಕ್ಷಕರು, ಓರ್ವ ಸಹಾಯಕ ಪೆÇಲೀಸ್ ಅಧೀಕ್ಷಕರು, 8 ಮಂದಿ ಪೆÇಲೀಸ್ ಇನ್ಸ್ ಪೆಕ್ಟರ್ ಗಳು, 23 ಮಂದಿ ಪಿಎಸ್ಸೈಗಳು, 34 ಮಂದಿ ಎಎಸೈಗಳು, 184 ಮಂದಿ ಪೆÇಲೀಸ್ ಸಿಬ್ಬಂದಿಗಳು ಹಾಗೂ 5 ಮಂದಿ ಹೋಂಗಾರ್ಡ್ ಗಳು, 2 ಎಸ್ ಎ ಎಫ್ ತುಕಡಿ, 3 ಡಿ ಎ ಆರ್ ತುಕಡಿ, 4 ಕೆ ಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಕಾರ್ಯಕರ್ತರ ವಿರುದ್ದ ಗೂಂಡಾ ಕಾಯ್ದೆ ವಿರೋಧಿಸಿ ಹಿಂದೂ ಸಂಘಟನೆಗಳಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ Rating: 5 Reviewed By: lk
Scroll to Top