ಔಷಧಿಯೇ ಆಹಾರವಾಗದೆ, ಆಹಾರವೇ ಔಷಧಿಯಾಗುವಂತೆ ಜೀವನ ಪದ್ದತಿ ಬದಲಾಗಬೇಕು : ಅಬೂಬಕ್ಕರ್ ಅಮ್ಮುಂಜೆ ಸಲಹೆ - Karavali Times ಔಷಧಿಯೇ ಆಹಾರವಾಗದೆ, ಆಹಾರವೇ ಔಷಧಿಯಾಗುವಂತೆ ಜೀವನ ಪದ್ದತಿ ಬದಲಾಗಬೇಕು : ಅಬೂಬಕ್ಕರ್ ಅಮ್ಮುಂಜೆ ಸಲಹೆ - Karavali Times

728x90

28 September 2026

ಔಷಧಿಯೇ ಆಹಾರವಾಗದೆ, ಆಹಾರವೇ ಔಷಧಿಯಾಗುವಂತೆ ಜೀವನ ಪದ್ದತಿ ಬದಲಾಗಬೇಕು : ಅಬೂಬಕ್ಕರ್ ಅಮ್ಮುಂಜೆ ಸಲಹೆ

ಬಂಟ್ವಾಳ, ಸೆಪ್ಟೆಂಬರ್ 28, 2026 (ಕರಾವಳಿ ಟೈಮ್ಸ್) : ಔಷಧಿಯೇ ಆಹಾರವಾಗದೆ, ಆಹಾರವೇ ಔಷಧಿಯಾಗುವಂತಿರಬೇಕು ಎಂದು ಬಂಟ್ವಾಳ ತಾಲೂಕು ರೈತರ ಸಲಹಾ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಅಮ್ಮುಂಜೆ ಹೇಳಿದರು.

ಅಮ್ಮುಂಜೆ ವೀರ ಯೋಧ ಯಾಧವ ಫ್ರೆಂಡ್ಸ್ (ರಿ.), ವೀರ ಯೋಧ ಯಾಧವ ಫ್ರೆಂಡ್ಸ್ ಮಹಿಳಾ ಘಟಕ, ಇವುಗಳ ಆಶ್ರಯದಲ್ಲಿ ಮಂಗಳೂರು ಎ ಜೆ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್ ಇವರ ಸಹಯೋಗದಲ್ಲಿ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸೆ 27 ರಂದು ನಡೆದ ಉಚಿತ ವೈದ್ಯಕೀಯ ಶಿಬಿರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಲುಷಿತ ಆಹಾರ ಹಾಗೂ ಪರಿಸರದಿಂದ ಜನರ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಒತ್ತಡಮುಕ್ತ ಜೀವನ ನಡೆಸಬೇಕು. ದೇಶ ಸೇವೆ ಮಾಡಿದ ವೀರ ಯೋಧ ಯಾದವರ ಹೆಸರಿನಲ್ಲಿ ಸಮಾಜಮುಖಿ ಸೇವೆಗಳನ್ನು ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು. 

ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದ ಆಡಳಿತ ಮುಕ್ತೇಸರ ಡಿ ಎ ನಾಗೇಶ ರಾವ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಅಮ್ಮುಂಜೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಉದ್ಯಮಿ ಬಿ ಮಹಮ್ಮದ್ ಬಟ್ಲಬೆಟ್ಟು, ಅಮ್ಮುಂಜೆ ಶಾಲಾ ಮುಖ್ಯೋಪಾಧ್ಯಾಯ ಡಿ ಎ ಹರೀಶ್ ರಾವ್, ವೀರ ಯೋಧ ಯಾದವರ ಸಹೋದರ ಉಮೇಶ್ ಪೂಜಾರಿ, ವೀರ ಯೋಧ ಯಾಧವ ಫ್ರೆಂಡ್ಸ್ ಗೌರವಾಧ್ಯಕ್ಷ ದೇವದಾಸ ಹೆಗ್ಡೆ ಅಮ್ಮುಂಜೆಗುತ್ತು, ಎ ಕರುಣಾಕರ ಆಳ್ವ, ಮಹಿಳಾ ಘಟಕದ ಗೌರವಾಧ್ಯಕ್ಷರಾದ ಹೇಮಲತಾ ಎನ್ ರಾವ್, ವಿಜಯಲಕ್ಷ್ಮಿ ಬಲ್ಲಾಳ್, ಅಧ್ಯಕ್ಷೆ ಚೇತನಾ ಎಚ್ ರಾವ್, ಎ ಜೆ ಹಾಸ್ಪಿಟಲ್ ವೈದ್ಯಧಿಕಾರಿ ಡಾ ಮಿಥಾಲಿ ಭಾಗವಹಿಸಿದ್ದರು. ಇದೇ ವೇಳೆ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವೀರ ಯೋಧ ಯಾಧವ ಫ್ರೆಂಡ್ಸ್ ಅಧ್ಯಕ್ಷ ಪ್ರಸಾದ್ ಕೆ ಸ್ವಾಗತಿಸಿ, ಶ್ರೀಮಹಿ ಭಜನಾ ತಂಡದ ಸದಸ್ಯೆಯರು ಪ್ರಾರ್ಥಿಸಿದರು. ಯಕ್ಷ ಸಂಘಟಕ ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಔಷಧಿಯೇ ಆಹಾರವಾಗದೆ, ಆಹಾರವೇ ಔಷಧಿಯಾಗುವಂತೆ ಜೀವನ ಪದ್ದತಿ ಬದಲಾಗಬೇಕು : ಅಬೂಬಕ್ಕರ್ ಅಮ್ಮುಂಜೆ ಸಲಹೆ Rating: 5 Reviewed By: karavali Times
Scroll to Top