ಸಂಪೂರ್ಣ ಹದಗೆಟ್ಟು ಹೋಗಿರುವ ಪಂಜಿಕಲ್ಲು ಗ್ರಾಮದ ಕಜೆಬೈಲು-ಮುಕುಡ ಸಂಪರ್ಕ ರಸ್ತೆಗೆ ಕಾಯಲ್ಪ ಒದಗಿಸುವಂತೆ ಆಗ್ರಹ - Karavali Times ಸಂಪೂರ್ಣ ಹದಗೆಟ್ಟು ಹೋಗಿರುವ ಪಂಜಿಕಲ್ಲು ಗ್ರಾಮದ ಕಜೆಬೈಲು-ಮುಕುಡ ಸಂಪರ್ಕ ರಸ್ತೆಗೆ ಕಾಯಲ್ಪ ಒದಗಿಸುವಂತೆ ಆಗ್ರಹ - Karavali Times

728x90

10 September 2026

ಸಂಪೂರ್ಣ ಹದಗೆಟ್ಟು ಹೋಗಿರುವ ಪಂಜಿಕಲ್ಲು ಗ್ರಾಮದ ಕಜೆಬೈಲು-ಮುಕುಡ ಸಂಪರ್ಕ ರಸ್ತೆಗೆ ಕಾಯಲ್ಪ ಒದಗಿಸುವಂತೆ ಆಗ್ರಹ

ಬಂಟ್ವಾಳ, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆಬೈಲು-ಮುಕುಡ ರಸ್ತೆಯು ಕಳೆದ ಕೆಲವು ಸಮಯಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿನ ನಾಗರಿಕರು ಸಂಚಾರ ಸಾಧ್ಯವಾಗದೆ ನರಕಯಾತನೆ ಅನುಭವಿಸುವಂತಾಗಿದೆ. 

ಪಂಜಿಕಲ್ಲು ಗ್ರಾಮದ ಕಚ್ಚೆ ಬಾಯಿಲು, ಮುಕುಡ, ಅತ್ರೆಯಲ್ ಸಂಪರ್ಕದ ಈ ರಸ್ತೆಯು ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ವಿದ್ಯುತ್ ಲೈನ್ ಟವರ್ ನಿರ್ಮಾಣದ ಹಿನ್ನಲೆಯಲ್ಲಿ ಕಾಮಗಾರಿ ನಡೆಸುವ ಸಂಸ್ಥೆಗೆ ಸಂಬಂಧಿಸಿದಂತೆ ಭಾರೀ ಗಾತ್ರದ ಟ್ರಕ್, ಲಾರಿಗಳು ಸಾಮಾಗ್ರಿ ಸಾಗಿಸಲು ಸಂಚರಿಸಿದ ಪರಿಣಾಮ ಈ ರಸ್ತೆ ತೀವ್ರ ಹದಗೆಟ್ಟಿದೆ ಎನ್ನುವ ಸ್ಥಳೀಯರು ಕಂಪೆನಿಯೇ ಈ ರಸ್ತೆಯ ಕಾಯಕಲ್ಪಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ. 

ಈ ಪ್ರದೇಶದಲ್ಲಿ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿದ್ದು, ವಾರಕ್ಕೆ ಎರಡು ಮೂಲ ಬಾರಿ ಡಯಾಲಿಸಿಸ್ ಸಹಿತ ವಿವಿಧ ರೋಗಗಳಿಗೆ ಚಿಕಿತ್ಸೆಗೆ ತೆರಳುವ ರೋಗಿಗಳಿದ್ದು, ನಿತ್ಯ ಕೆಲಸಕ್ಕೆ ಹೋಗಿ ಬರುವ ಕಾರ್ಮಿಕರು, ದಿನಕೂಲಿ ನೌಕರರು ಇದ್ದು ಇಲ್ಲಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟ ಪರಿಣಾಮ ಸಂಚಾರಕ್ಕೆ ತೀವ್ರ ಅನಾನುಕೂಲಕತೆ ಎದುರಿಸುತ್ತಿದ್ದಾರೆ. ಇಲ್ಲಿನ ರಸ್ತೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತಿದ್ದು, ಇದರ ದುರಸ್ತಿ ಬಗ್ಗೆ ಈಗಾಗಲೇ ಸ್ಥಳೀಯರು ಹಲವು ಬಾರಿ ಸ್ಥಳೀಯ ಪಂಜಿಕಲ್ಲು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ಲಿಖಿತವಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಆದರೆ ಇದುವರೆಗೂ ಯಾವುದೇ ತುರ್ತು ಸ್ಪಂದನೆ ಇರುವುದಿಲ್ಲ ಎನ್ನುತ್ತಾರೆ ಸ್ಥಳೀಯರು. 

ಹಲವು ವಾಸ್ತವ್ಯ ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅತ್ಯಂತ ಶೀಘ್ರವಾಗಿ ಸಂಚಾರ ಯೋಗ್ಯ ರಸ್ತೆಯನ್ನಾಗಿ ಅಭಿವೃದ್ದಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಕಂಪೆನಿ, ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸಂಪೂರ್ಣ ಹದಗೆಟ್ಟು ಹೋಗಿರುವ ಪಂಜಿಕಲ್ಲು ಗ್ರಾಮದ ಕಜೆಬೈಲು-ಮುಕುಡ ಸಂಪರ್ಕ ರಸ್ತೆಗೆ ಕಾಯಲ್ಪ ಒದಗಿಸುವಂತೆ ಆಗ್ರಹ Rating: 5 Reviewed By: karavali Times
Scroll to Top