ಸೆ 12 ರಂದು ಸುರತ್ಕಲ್ ಬಂಟರ ಭವನದಲ್ಲಿ ಮಂಗಳೂರು ಪ್ರಜಾಸೇವಾ ಆಂದೋಲನ - Karavali Times ಸೆ 12 ರಂದು ಸುರತ್ಕಲ್ ಬಂಟರ ಭವನದಲ್ಲಿ ಮಂಗಳೂರು ಪ್ರಜಾಸೇವಾ ಆಂದೋಲನ - Karavali Times

728x90

10 September 2026

ಸೆ 12 ರಂದು ಸುರತ್ಕಲ್ ಬಂಟರ ಭವನದಲ್ಲಿ ಮಂಗಳೂರು ಪ್ರಜಾಸೇವಾ ಆಂದೋಲನ

ಮಂಗಳೂರು, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) :  ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಅವುಗಳಿಗೆ ಸಕಾಲದಲ್ಲಿ ಸೂಕ್ತ ಸಮಾಧಾನದ ಪರಿಹಾರ ನೀಡುವುದು ಸರ್ಕಾರದ ಆದ್ಯತೆ ಆಗಿರುತ್ತದೆ. ಅದರಂತೆ ರಾಜ್ಯಾದ್ಯಂತ ಪ್ರತೀ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತೀ ತಿಂಗಳ ಎಲ್ಲಾ ಶನಿವಾರದಂದು ಪ್ರಜಾ ಸೇವೆ ಆಂದೋಲನ ಸಭೆಗಳನ್ನು ಆಯೋಜಿಸಲು ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ.

ಅದರಂತೆ ಸೆಪ್ಟೆಂಬರ್ 12 ರಂದು ಮಂಗಳೂರು ತಾಲೂಕಿನಲ್ಲಿ ಪ್ರಜಾ ಸೇವೆ ಆಂದೋಲನ ಸಭೆಯು ಸುರತ್ಕಲ್ ಬಂಟರ ಭವನ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ನಡೆಯಲಿದೆ ಎಂದು ಮಂಗಳೂರು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸೆ 12 ರಂದು ಸುರತ್ಕಲ್ ಬಂಟರ ಭವನದಲ್ಲಿ ಮಂಗಳೂರು ಪ್ರಜಾಸೇವಾ ಆಂದೋಲನ Rating: 5 Reviewed By: karavali Times
Scroll to Top