ಅಪೋಲೋ ಫಾರ್ಮಸಿ ಕಂಪೆನಿಯಿಂದ ಉದ್ಯೋಗಾವಕಾಶ : ಸೆ. 15 ರಂದು ನೇರ ಸಂದರ್ಶನ - Karavali Times ಅಪೋಲೋ ಫಾರ್ಮಸಿ ಕಂಪೆನಿಯಿಂದ ಉದ್ಯೋಗಾವಕಾಶ : ಸೆ. 15 ರಂದು ನೇರ ಸಂದರ್ಶನ - Karavali Times

728x90

10 September 2026

ಅಪೋಲೋ ಫಾರ್ಮಸಿ ಕಂಪೆನಿಯಿಂದ ಉದ್ಯೋಗಾವಕಾಶ : ಸೆ. 15 ರಂದು ನೇರ ಸಂದರ್ಶನ

ಮಂಗಳೂರು, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ಅಪೋಲೋ ಫಾರ್ಮಸಿ ಕಂಪೆನಿಯ ವತಿಯಿಂದ ಪುತ್ತೂರು, ಬೆಳ್ತಂಗಡಿ, ಉಜಿರೆ, ಬಿ.ಸಿ.ರೋಡ್ ಹಾಗೂ ಮಂಗಳೂರಿನಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್, ಸ್ಟೋರ್ ಇನ್‍ಚಾರ್ಜ್, ಸೇಲ್ಸ್ ಅಸೋಸಿಯೇಟ್ ಮತ್ತು ಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಸೆಪ್ಟೆಂಬರ್ 15 ರಂದು ಬೆಳಿಗ್ಗೆ 10:30 ರಿಂದ 1:30 ರವರೆಗೆ ಪಡೀಲ್ ಜಿಲ್ಲಾಡಳಿತ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. 
ನೇರ ಸಂದರ್ಶನದಲ್ಲಿ ಪಿ.ಯು.ಸಿ, ಯಾವುದೇ ಪದವಿ ಅಥವಾ ಡಿ. ಫಾರ್ಮಾ, ಬಿ. ಫಾರ್ಮಾ ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳು ಮತ್ತು ಡಿ. ಫಾರ್ಮಾ, ಬಿ. ಫಾರ್ಮಾ ವಿದ್ಯಾರ್ಹತೆ ಹೊಂದಿರುವ ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಕಂಪೆನಿ ವತಿಯಿಂದ ಪಿ.ಎಫ್, ಇ.ಎಸ್.ಐ, ಬೋನಸ್, ಗ್ರಾಚುಟಿ ಇರುತ್ತದೆ.  
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಅಪೋಲೋ ಫಾರ್ಮಸಿ ಕಂಪೆನಿಯಿಂದ ಉದ್ಯೋಗಾವಕಾಶ : ಸೆ. 15 ರಂದು ನೇರ ಸಂದರ್ಶನ Rating: 5 Reviewed By: karavali Times
Scroll to Top