2020ರ ಸುಲಿಗೆ ಪ್ರಕರಣ ಆರೋಪಿಗಳಿಗೆ 7 ವರ್ಷ ಶಿಕ್ಷೆ ವಿಧಿಸಿ ತೀರ್ಪಿತ್ತ ನ್ಯಾಯಾಲಯ - Karavali Times 2020ರ ಸುಲಿಗೆ ಪ್ರಕರಣ ಆರೋಪಿಗಳಿಗೆ 7 ವರ್ಷ ಶಿಕ್ಷೆ ವಿಧಿಸಿ ತೀರ್ಪಿತ್ತ ನ್ಯಾಯಾಲಯ - Karavali Times

728x90

16 September 2026

2020ರ ಸುಲಿಗೆ ಪ್ರಕರಣ ಆರೋಪಿಗಳಿಗೆ 7 ವರ್ಷ ಶಿಕ್ಷೆ ವಿಧಿಸಿ ತೀರ್ಪಿತ್ತ ನ್ಯಾಯಾಲಯ

ಮಂಗಳೂರು, ಸೆಪ್ಟೆಂಬರ್ 16, 2026 (ಕರಾವಳಿ ಟೈಮ್ಸ್) : 2020ರಲ್ಲಿ ನಡೆದ ಸುಲಿಗೆ ಪ್ರಕರಣದ ಆರೋಪಿಗಳಿಗೆ 7 ವರ್ಷಗಳ ಜೈಲು ಹಾಗೂ 25 ಸಾವಿರ ರೂಪಾಯಿ ದಂಡದೊಂದಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. 

ಶಿಕ್ಷೆಗೊಳಗಾದ ಅಪರಾಧಿಗಳನ್ನು ಮಂಗಳೂರು, ಕೆಂಜಾರು ಗ್ರಾಮದ ಪೋರ್ಕೋಡಿ ನಿವಾಸಿ ಸಂಶುದ್ದೀನ್ ಎಂಬವರ ಪುತ್ರ ಜಾವೀದ್ ಅಖ್ತರ್ ಅಲಿಯಾಸ್ ಅಖ್ತರ್ (28) ಹಾಗೂ ಕಸಬಾ ಬೆಂಗ್ರೆ ನಿವಾಸಿ ಅನ್ವರ್ ಎಂಬವರ ಪುತ್ರ ತೋಹಿದ್ ಖಾದರ್ ಅಲಿಯಾಸ್ ತೋಯಿ (24) ಎಂದು ಹೆಸರಿಸಲಾಗಿದೆ. 

2020 ರ ನವೆಂಬರ್ 16 ರಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಬಿಹಾರ ಮೂಲದ ಕಾರ್ಮಿಕ ಗೋವಿಂದ್ ಕುಮಾರ್ ಅವರು ಮನೆಯಿಂದ ಕೆಲಸಕ್ಕೆಂದು ಹೊರಟು ಪಣಂಬೂರು ದೀಪಕ್ ಪೆಟ್ರೋಲ್ ಬಂಕ್ ಹಿಂಭಾಗ ಎನ್.ಎಂ.ಪಿ.ಎ ಮುಖ್ಯ ಆಡಳಿತ ಕಛೇರಿಯ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಆರೋಪಿಗಳು ಸ್ಕೂಟರಿನಲ್ಲಿ ಬಂದು ಅಡ್ಡ ಹಾಕಿ ತಡೆದು ನಿಲ್ಲಿಸಿ, ಕಬ್ಬಿಣದ ರಾಡನ್ನು ತೋರಿಸಿ, ಗೋವಿಂದ್ ಅವರಿಂದ ಸುಮಾರು 5 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಪೆÇೀನ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಗೋವಿಂದ್ ಅವರು ನೀಡಿದ ದೂರಿನಂತೆ ಪಣಂಬೂರು ಪೆÇಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 56/2020 ಕಲಂ 392,397 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. 

ಪ್ರಕರಣದಲ್ಲಿ ಪಣಂಬೂರು ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ಅಜ್ಮತ್ ಆಲಿ ಅವರು ತನಿಖೆ ಕೈಗೊಂಡು 2020ರ ನವೆಂಬರ್ 17 ರಂದು ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರಿಂದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳನ್ನು 2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆ ಮುಂದುವರೆಸಿ, ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. 

4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಭಾಗಶಃ ವಿಚಾರಣೆ ನಡೆದು, ನಂತರ ಪ್ರಕರಣವು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ ಟಿ ಎಸ್ ಸಿ-1) ಕ್ಕೆ ವರ್ಗಾವಣೆಗೊಂಡು ನ್ಯಾಯಾಲಯದಲ್ಲಿ ಎಸ್.ಸಿ ನಂಬ್ರ 84/2021 ರಂತೆ ವಿಚಾರಣೆ ನಡೆದು ಸೆ 16 ರಂದು ನ್ಯಾಯಾಧೀಶ ಮೋಹನ್ ಜೆ.ಎಸ್ ಅವರು ಆರೋಪಿಗಳಿಗೆ ಕಲಂ 392 ಜೊತೆಗೆ 34 ಐಪಿಸಿ ಕಾಯ್ದೆ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಭದರಿನಾಥ ನೈಯಾರಿ ಅವರು ವಾದ ಮಂಡಿಸಿರುತ್ತಾರೆ.

  • Blogger Comments
  • Facebook Comments

0 comments:

Post a Comment

Item Reviewed: 2020ರ ಸುಲಿಗೆ ಪ್ರಕರಣ ಆರೋಪಿಗಳಿಗೆ 7 ವರ್ಷ ಶಿಕ್ಷೆ ವಿಧಿಸಿ ತೀರ್ಪಿತ್ತ ನ್ಯಾಯಾಲಯ Rating: 5 Reviewed By: karavali Times
Scroll to Top