ಮಂಗಳೂರು, ಸೆಪ್ಟೆಂಬರ್ 16, 2026 (ಕರಾವಳಿ ಟೈಮ್ಸ್) : ಸೆಪ್ಟೆಂಬರ್ 18 ರಂದು ಬೆಳಿಗ್ಗೆ ಕರ್ನಾಟಕ ರಾಜ್ಯ ಸರಕಾರವು ಸಚಿವ ಸಂಪುಟ ಸಭೆಯನ್ನು ಮಂಗಳೂರು ನಗರದ ಪಡೀಲಿನ ಪ್ರಜಾಸೌಧ ಜಿಲ್ಲಾಧಿಕಾರಿ ಕಛೇರಿಯಲ್ಲಿ ಹಮ್ಮಿಕೊಂಡಿರುತ್ತದೆ. ಸೆ 17 ರಂದು ಸಂಜೆ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆಯ ಸಚಿವರು ಬರುವವರಿದ್ದು, ಸೆ 18 ರಂದು ಬೆಳಿಗ್ಗೆ ಮಂಗಳೂರು ನಗರದ ಮುಖ್ಯ ರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳ (ಪ್ರಜಾಸೌಧ) ಕಛೇರಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ ಮೇರಿಹಿಲ್ ನಲ್ಲಿರುವ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ ನಂತರ ಮಂಗಳೂರು ನಗರಕ್ಕೆ ವಾಪಸ್ಸಾಗಿ ವಾಸ್ತವ್ಯ ಹೂಡಲಿದ್ದು, ನಂತರ ಮರುದಿನ ಬೆಳಿಗ್ಗೆ ನಿರ್ಗಮಿಸಲಿದ್ದಾರೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆಯಾಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಗಣ್ಯರ ಭದ್ರತೆ ದೃಷ್ಠಿಯಿಂದ ಹಾಗೂ ನಗರದಲ್ಲಿ ಸಂಚಾರ ಸುವ್ಯವಸ್ಥೆ ಹಿತದೃಷ್ಠ್ಠಿಯಿಂದ ಸಾರ್ವಜನಿಕರು ಸುರಕ್ಷಿತವಾಗಿ ಪರ್ಯಾಯ ಮಾರ್ಗಗಳನ್ನು ಉಪಯೋಗಿಸಿಕೊಂಡು ಪೆÇಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.
ಗಣ್ಯರ ಸಂಚಾರ ಇರುವ ರಸ್ತೆಗಳು :
ಸೆ 17 ರಂದು ಸಂಜೆ ಮತ್ತು ಸೆ 19 ರಂದು ಬೆಳಿಗ್ಗೆ ಬಜಪೆ ವಿಮಾನ ನಿಲ್ದಾಣದಿಂದ ಕಾವೂರು-ಬೋಂದೆಲ್-ಮೇರಿಹಿಲ್-ಕೆ.ಪಿ.ಟಿ.-ಕದ್ರಿ ಕಂಬಳ-ಬಂಟ್ಸ್ ಹಾಸ್ಟೆಲ್-ಡಾ ಬಿ.ಆರ್. ಅಂಬೇಡ್ಕರ್ ಜಂಕ್ಷನ್-ಹಂಪನಕಟ್ಟೆ-ಕ್ಲಾಕ್ ಟವರ್-ಹ್ಯಾಮಿಲ್ಟನ್ ಜಂಕ್ಷನ್.
ಸೆ 18 ರಂದು ಬೆಳಿಗ್ಗೆ ಹ್ಯಾಮಿಲ್ಟನ್ ಜಂಕ್ಷನ್-ಕ್ಲಾಕ್ ಟವರ್-ಹಂಪನಕಟ್ಟ-ಡಾ ಬಿ.ಆರ್. ಅಂಬೇಡ್ಕರ್ ಜಂಕ್ಷನ್-ಕೆ.ಪಿ.ಟಿ. ಜಂಕ್ಷನ್-ನಂತೂರು ವೃತ್ತ-ಪಂಪುವೆಲ್-ನಾಗುರಿ-ಬಜಾಲ್ ಕ್ರಾಸ್ (ಪ್ರಜಾಸೌಧ)-ಪಡೀಲ್ ಜಂಕ್ಷನ್.
ವಿಶೇಷ ಸೂಚನೆ : ಮೇಲ್ಕಂಡ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಆಂಬ್ಯುಲೆನ್ಸ್ ಹಾಗೂ ಇತರೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಸಾರ್ವಜನಿಕರು ಪೆÇಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೋರಲಾಗಿದೆ.
ಬದಲಿ ಮಾರ್ಗಗಳು : ಬದ್ರಿಯಾ ಜಂಕ್ಷನ್ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲಾ ವಾಹನಗಳು ಪರ್ಯಾಯವಾಗಿ ಬದ್ರಿಯಾ ಜಂಕ್ಷನ್-ನಿಲೇಶ್ವರ ರಸ್ತೆ-ರೋಸಾರಿಯೋ ರಸ್ತೆ ಮೂಲಕ ಸಂಚರಿಸುವುದು.
ಅದೇ ರೀತಿ ಹ್ಯಾಮಿಲ್ಟನ್ ಜಂಕ್ಷನ್ನಿನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಬದ್ರಿಯಾ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲಾ ವಾಹನಗಳು ಪರ್ಯಾಯವಾಗಿ ಹ್ಯಾಮಿಲ್ಟನ್ ಜಂಕ್ಷನ್-ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸುವುದು.
ಪಂಪುವೆಲ್ ಜಂಕ್ಷನ್ನಿನಿಂದ ನಾಗುರಿ ಮೂಲಕ ಪಡಿಲ್ ಜಂಕ್ಷನ್ ಕಡೆಗೆ ಅಥವಾ ಪಡಿಲ್ ಜಂಕ್ಷನ್ ಕಡೆಯಿಂದ ನಾಗುರಿ ಮೂಲಕ ಪಂಪುವೆಲ್ ಕಡೆಗೆ ಸಂಚರಿಸಬೇಕಾದ ಎಲ್ಲಾ ವಾಹನಗಳು ಪರ್ಯಾಯವಾಗಿ ನಂತೂರು ವೃತ್ತ-ಕೈಕಂಬ-ಮರೋಳಿ ಮೂಲಕ ಅಥವಾ ತೊಕ್ಕೊಟ್ಟು-ದೇರಳಕಟ್ಟೆ-ಮುಡಿಪು-ಬೋಳಿಯಾರು-ಮೆಲ್ಕಾರ್ ಮೂಲಕ ಸಂಚರಿಸುವುದು.
ಬಜಾಲ್ ಕ್ರಾಸ್ (ಪ್ರಜಾಸೌಧ) ನಿಂದ ಬಜಾಲ್ ಕಡೆಗೆ ಅಥವಾ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣ ಕಡೆಗೆ ಬರುವ ಮತ್ತು ಹೋಗುವ ಎಲ್ಲಾ ವಾಹನಗಳು ಪಡಿಲ್ ಬಜಾಲ್ ಕ್ರಾಸ್ ಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ-ಬಜಾಲ್ ಮೂಲಕ ಸಂಚರಿಸುವುದು.
ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಮಹಾಕಾಳಿಪಡ್ಪು-ಮಂಗಳಾದೇವಿ ಮೂಲಕ ನಗರಕ್ಕೆ ಸಂಚರಿಸುವ ಮೂಲಕ ಸಹರಿಸುವಂತೆ ಮಂಗಳೂರು ನಗರ ಪೆÇಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
















0 comments:
Post a Comment