ಬಂಟ್ವಾಳ, ಸೆಪ್ಟೆಂಬರ್ 16, 2026 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮದಲ್ಲಿ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ಸೆ 15 ರಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಇಲ್ಲಿನ £ವಾಸಿ ಶ್ರೀಮತಿ ಪ್ರಪುಲ್ಲಾ ಜಾನೆಟ್ ಡಿಕ್ರೂಸ್ (37) ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಸೆ 14 ರಂದು ಸಂಜೆ ಮಕ್ಕಳೊಂದಿಗೆ ಬೆಳ್ಳಾರೆಗೆ ಹೋಗಿದ್ದು, ಮರುದಿನ ಬೆಳಿಗ್ಗೆ ವಾಪಾಸು ಮನೆಗೆ ಬಂದಾಗ ಮನೆಯ ಬೆಡ್ ರೂಮಿನ ಮಂಚದಲ್ಲಿದ್ದ ಬೆಡ್ ಸರಿಸಿದ್ದು ಕಂಡು ಬಂದಿದೆ. ಈ ಬಗ್ಗೆ ಅನುಮಾನಗೊಂಡ ಪ್ರಪುಲ್ಲಾ ಅವರು ರೂಮಿನ ಒಳಗೆ ಹೋಗಿ ನೋಡಿದಾಗ ವಾರ್ಡ್ ರೂಮಿನ ಬಾಗಿಲು ತೆರೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು ಕಂಡು ಬಂದಿದೆ. ವಾರ್ಡ್ ರೂಮಿನಲ್ಲಿಟ್ಟಿದ್ದ ಸುಮಾರು 40 ಸಾವಿರ ರೂಪಾಯಿ ಮೌಲ್ಯದ 4 ಗ್ರಾಂ ತೂಕದ 2 ಜೊತೆ ಚಿನ್ನದ ಕಿವಿಯೋಳೆ ಹಾಗೂ ಮನೆಯ ಸೋಪಾದಲ್ಲಿ ಡಬ್ಬದಲ್ಲಿಟ್ಟಿದ್ದ 5 ಸಾವಿರ ರೂಪಾಯಿ ನಗದು ಹಣ ಕಳವಾಗಿರುವುದು ಗೊತ್ತಾಗಿದೆ.
ಮನೆಯ ಹಿಂಬದಿಯ ಕಬ್ಬಿಣದ ಬಾಗಿಲಿಗೆ ಹಾಕಿದ ಬೀಗ ಮುರಿದು ಕಳ್ಳರು ಒಳಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ ಎಂದವರು ನೀಡಿರುವ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















0 comments:
Post a Comment