ಬಂಟ್ವಾಳ, ಸೆಪ್ಟೆಂಬರ್ 24, 2026 (ಕರಾವಳಿ ಟೈಮ್ಸ್) : ಬಿ ಕಸ್ಬಾ ಗ್ರಾಮದ ಕೆಮ್ಮಟ್ಟೆ ಗುಡ್ಡೆ ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹೆಜ್ಜೇನು ಕಡಿತದಿಂದ ಅಸ್ವಸ್ಥಗೊಂಡ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೆ 23 ರಂದು ಸಂಭವಿಸಿದೆ.
ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ದಿವಂಗತ ವೆಂಕಟ್ರಮಣ ಗೌಡ ಅವರ ಪತ್ನಿ ಕಮಲಾ (74) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೃತರ ಪುತ್ರ ದಿನೇಶ್ (50) ಅವರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದು, ಇವರ ತಾಯಿ ಕಮಲಾ ಅವರು ಸೆ 23 ರಂದು ಮನೆಯ ಪಕ್ಕ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯಲು ಮತ್ತು ಕೃಷಿ ಕೆಲಸ ಮಾಡಲು ಹೋಗಿರುತ್ತಾರೆ. ಸುಮಾರು 11 ಗಂಟೆಗೆ ಮನೆಗೆ ಬಂದವರು ನನಗೆ ತೋಟದಲ್ಲಿ ಹೆಜ್ಜೇನು ಕಡಿದಿರುವುದಾಗಿ ಪುತ್ರನಿಗೆ ತಿಳಿಸಿರುತ್ತಾರೆ. ತಕ್ಷಣ ಪುತ್ರ ಅವರನ್ನು ಬಂಟ್ವಾಳದ ಕ್ಲಿನಿಕಿಗೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದರು. ಬಳಿಕ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಮನೆಯಲ್ಲಿದ್ದ ಅವರು ಮಧ್ಯಾಹ್ನ 1.30 ಗಂಟೆಗೆ ಮಾತನಾಡದೆ ಅಸ್ವಸ್ಥರಾದವರನ್ನು ಪುತ್ರ ಮತ್ತೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಪರೀಕ್ಷಿಸಿ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೆÇೀಲಿಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.














0 comments:
Post a Comment