ಬಂಟ್ವಾಳ, ಸೆಪ್ಟೆಂಬರ್ 07, 2026 (ಕರಾವಳಿ ಟೈಮ್ಸ್) : ಬಿ ಕಸಬಾ ಗ್ರಾಮದ ತುಂಬ್ಯಾ ಜಂಕ್ಷನ್ ಎಂಬಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಅಟೋ ರಿಕ್ಷಾ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಸೆ 5 ರಂದು ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಪಂಜಿಕಲ್ಲು ಗ್ರಾಮದ ಸೊರ್ನಾಡು ಎನಿಲಕೋಡಿ ನಿವಾಸಿ ಉಮೇಶ್ ಸಪಾಲ್ಯ ಎಂಬವರ ಪತ್ನಿ ಶಶಿಕಲಾ ಎಂದು ಹೆಸರಿಸಲಾಗಿದೆ.
ಶಶಿಕಲಾ ಅವರು ಸೆ 5 ರಂದು ಹೋಟೆಲಿನಲ್ಲಿ ಊಟ ಮಾಡಿ ಕೆಲಸದ ನಿಮಿತ್ತ ಬಿ ಕಸಬಾ ಗ್ರಾಮದ ತುಂಬ್ಯಾ ಜಂಕ್ಷನ್ ಬೈಪಾಸ್ ಬಳಿ ಸಾರಥಿ ಹೋಟೆಲ್ ಎದುರು ಬಂಟ್ವಾಳ ಪೇಟೆ-ತುಂಬ್ಯಾ ಬೈಪಾಸ್ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 2.30 ರ ವೇಳೆಗೆ ಬಂಟ್ವಾಳ ಪೇಟೆ ಕಡೆಯಿಂದ ತುಂಬ್ಯಾ ಜಂಕ್ಷನ್ ಕಡೆಗೆ ರೂಪಕ್ ಎಂಬವರು ಚಲಾಯಿಸಿಕೊಂಡು ಬಂದ ಅಟೋ ರಿಕ್ಷಾ ಡಿಕ್ಕಿ ಹೊಡೆದಿದೆ. ಅಟೋ ರಿಕ್ಷಾ ಚಾಲಕ ಮಹಿಳೆಗೆ ಡಿಕ್ಕಿ ಹೊಡೆದು ರಿಕ್ಷಾ ನಿಲ್ಲಿಸದೆ ಗಾಯಾಳುವನ್ನು ಉಪಚರಿಸದೇ ಪೆÇಲೀಸರಿಗೂ ಮಾಹಿತಿ ನೀಡದೇ ಸ್ಥಳದಿಂದ ಆಟೋ ರಿಕ್ಷಾ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭ ಸ್ಥಳೀಯರು ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿದ್ದಾರೆ. ಅಪಘಾತದಿಂದ ಪಾದಾಚಾರಿ ಶಶಿಕಲಾ ರಸ್ತೆಗೆ ಬಿದ್ದು ಕಿವಿಗೆ ರಕ್ತ ಸ್ರಾವದ ಗಾಯ, ಬೆನ್ನಿಗೆ, ಸೊಂಟಕ್ಕೆ ಕೈಕಾಲುಗಳಿಗೆ ಗಾಯಗಳಾಗಿದ್ದು, ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಶಶಿಕಲಾ ಅವರ ಪತಿ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment