9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆರೋಪಿ ದಸ್ತಗಿರಿ - Karavali Times 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆರೋಪಿ ದಸ್ತಗಿರಿ - Karavali Times

728x90

22 September 2026

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆರೋಪಿ ದಸ್ತಗಿರಿ

ಮಂಗಳೂರು, ಸೆಪ್ಟೆಂಬರ್ 22, 2026 (ಕರಾವಳಿ ಟೈಮ್ಸ್) : ಮಂಗಳೂರು 2ನೇ ಸಿಜೆಎಂ ನ್ಯಾಯಾಲಯ ಎಲ್ ಪಿ ಸಿ ವಾರಂಟ್ ಹೊರಡಿಸಿದ್ದ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ, ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಕುಕ್ಕುಂದೂರ ಕೆಳಗಿನ ಅಂಗಡಿ ಮನೆ ಜೋಡು ರಸ್ತೆ ನಿವಾಸಿ, ಪಾರ್ಥ ಅಲಿಯಾಸ್ ಪಾರ್ಥಸಾರಥಿ  ಎಂಬಾತನನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಪೆÇಲೀಸ್ ಠಾಣಾ ಸಿಬ್ಬಂದಿಗಳಾದ ಗಣೇಶ್, ಮಂಜುನಾಥ್ ಹಾಗೂ ಮಲ್ಲಿಕ್ ಜಾನ್ ಅವರು ಕದ್ರಿ ಮೈದಾನ ಬಳಿ ಬಂಧಿಸಿದ್ದು, ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆರೋಪಿ ದಸ್ತಗಿರಿ Rating: 5 Reviewed By: karavali Times
Scroll to Top