ಪಾಂಡೇಶ್ವರ : ಅಲ್ಪಸಂಖ್ಯಾತ ಇಲಾಖಾ ಕಚೇರಿ ಬಳಿ ರಸ್ತೆಯಲ್ಲೇ ಹರಿಯುತ್ತಿದೆ ಡ್ರೈನೇಜ್ ನೀರು , ಮೂಗು ಮುಚ್ಚಿ ಸಂಚರಿಸುತ್ತಿರುವ ಸಾರ್ವಜನಿಕರು - Karavali Times ಪಾಂಡೇಶ್ವರ : ಅಲ್ಪಸಂಖ್ಯಾತ ಇಲಾಖಾ ಕಚೇರಿ ಬಳಿ ರಸ್ತೆಯಲ್ಲೇ ಹರಿಯುತ್ತಿದೆ ಡ್ರೈನೇಜ್ ನೀರು , ಮೂಗು ಮುಚ್ಚಿ ಸಂಚರಿಸುತ್ತಿರುವ ಸಾರ್ವಜನಿಕರು - Karavali Times

728x90

22 September 2026

ಪಾಂಡೇಶ್ವರ : ಅಲ್ಪಸಂಖ್ಯಾತ ಇಲಾಖಾ ಕಚೇರಿ ಬಳಿ ರಸ್ತೆಯಲ್ಲೇ ಹರಿಯುತ್ತಿದೆ ಡ್ರೈನೇಜ್ ನೀರು , ಮೂಗು ಮುಚ್ಚಿ ಸಂಚರಿಸುತ್ತಿರುವ ಸಾರ್ವಜನಿಕರು

 ಮಂಗಳೂರು, ಸೆಪ್ಟೆಂಬರ್ 22, 2026 (ಕರಾವಳಿ ಟೈಮ್ಸ್) : ಮಂಗಳೂರು-ಪಾಂಡೇಶ್ವರ ಓಲ್ಡ್ ಕೆಂಟ್ ರೋಡ್ ಅಲ್ಪಸಂಖ್ಯಾತ ಇಲಾಖೆಯ ಮೌಲಾನಾ ಅಝಾದ್ ಭವನ ಕಟ್ಟಡದ ಬಳಿ ಚರಂಡಿಯ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸಾರ್ವಜನಿಕರು ದುರ್ನಾತ ಸಹಿಸಲಾರದೆ ಮೂಗು ಮುಚ್ಚಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. 

ಇಲ್ಲಿನ ರಸ್ತೆ ಬದಿಯ ಕಟ್ಟಡಗಳಿಂದ ಬರುತ್ತಿರುವ ತ್ಯಾಜ್ಯಯುಕ್ತ ಕಲುಷಿತ ನೀರು ರಸ್ತೆ ಬದಿಯ ಚರಂಡಿಯಿಂದ ಓವರ್ ಫ್ಲೋ ಆಗಿ ಕಳೆದ ಕೆಲ ದಿನಗಳಿಂದ ನೇರವಾಗಿ ರಸ್ತೆಯಲ್ಲೇ ಹರಿಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇದರ ಪಕ್ಕದಲ್ಲೇ ಮೌಲಾನಾ ಅಝಾದ್ ಭವನ ಇದ್ದು, ಈ ಭವನದಲ್ಲಿ ಅಲ್ಪಸಂಖ್ಯಾತ ಇಲಾಖೆ, ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ, ವಕ್ಫ್ ಹಾಗೂ ಅಲ್ಪಸಂಖ್ಯಾತ ಇಲಾಖಾ ಸಹಾಯ ಕೇಂದ್ರಗಳು ಕಾರ್ಯಾಚರಿಸುತ್ತಿದೆ. ಈ ಭಾಗದಲ್ಲಿರುವ ಪ್ರಮುಖ ಕಚೇರಿಗಳಾಗಿರುವ ಇಲ್ಲಿಗೆ ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಲು ನಿತ್ಯವೂ ಸಾರ್ವಜನಿಕರು, ವಿದ್ಯಾರ್ಥಿಗಳು, ಮಸೀದಿ-ಮದ್ರಸಗಳಿಗೆ ಸಂಬಂಧಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸಮೀಪದಲ್ಲೇ ಕೇರಳ ಸಮಾಜಂ ಶಾಲೆ ಇದ್ದು, ನಿತ್ಯ ಹಲವು ಮಂದಿ ಶಾಲಾ ವಿದ್ಯಾರ್ಥಿಗಳೂ ಕೂಡಾ ಇದೇ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಇಲ್ಲಿನ ರಸ್ತೆಯಲ್ಲೇ ಈ ತ್ಯಾಜ್ಯ ಕಲುಷಿತ ಚರಂಡಿ ನೀರು ಹರಿಯುತ್ತಿರುವ ಪರಿಣಾಮ ಇಲ್ಲಿಗೆ ಬರುವವರು ದುರ್ನಾತ ಅನುಭವಿಸುತ್ತಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ಇಲ್ಲಿನ ಚರಂಡಿ ಅವ್ಯವಸ್ಥೆಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಜಿಲ್ಲಾ ಅಲ್ಪಸಂಖ್ಯಾತ ಇಲಾಖಾ ಕಛೇರಿಯ ಅಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ಲಿಖಿತ ಪತ್ರ ಬರೆದು ಸೂಕ್ತ ಕಾಯಕಲ್ಪಕ್ಕಾಗಿ ಆಗ್ರಹಿಸಿದ್ದಾರೆ. ಪ್ರಮುಖ ಸರಕಾರಿ ಕಚೇರಿಗಳು ಹಾಗೂ ಶಾಲಾ ವಠಾರವಾಗಿರುವ ಇಲ್ಲಿನ ತ್ಯಾಜ್ಯ ಸಮಸ್ಯೆ ಚರಂಡಿ ಕಾಯಕಲ್ಪಕ್ಕೆ ಶೀಘ್ರ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಂಡೇಶ್ವರ : ಅಲ್ಪಸಂಖ್ಯಾತ ಇಲಾಖಾ ಕಚೇರಿ ಬಳಿ ರಸ್ತೆಯಲ್ಲೇ ಹರಿಯುತ್ತಿದೆ ಡ್ರೈನೇಜ್ ನೀರು , ಮೂಗು ಮುಚ್ಚಿ ಸಂಚರಿಸುತ್ತಿರುವ ಸಾರ್ವಜನಿಕರು Rating: 5 Reviewed By: karavali Times
Scroll to Top