ತುಂಬೆ : ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸ್ ದಾಳಿ, ಮರಳು, ವಾಹನಗಳ ಸಹಿತ ನಾಲ್ವರು ಬಂಧನ - Karavali Times ತುಂಬೆ : ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸ್ ದಾಳಿ, ಮರಳು, ವಾಹನಗಳ ಸಹಿತ ನಾಲ್ವರು ಬಂಧನ - Karavali Times

728x90

25 September 2026

ತುಂಬೆ : ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸ್ ದಾಳಿ, ಮರಳು, ವಾಹನಗಳ ಸಹಿತ ನಾಲ್ವರು ಬಂಧನ

ಬಂಟ್ವಾಳ, ಸೆಪ್ಟೆಂಬರ್ 25, 2026 (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮರಳು, ಟಿಪ್ಪರ್ ಹಾಗೂ ಜೆಸಿಬಿ ಸಹಿತ ನಾಲ್ವರನ್ನು ಬಂಧಿಸಿದ ಘಟನೆ ಸೆ 25 ರಂದು ಮುಂಜಾನೆ ವೇಳೆ ನಡೆದಿದೆ. 

ಬಂಟ್ವಾಳ ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳನ್ನು ತೆಗೆದು, ಲಾರಿಗಳಲ್ಲಿ ತುಂಬಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಪಿಎಸ್ಸೈ ರನ್ನಗೌಡ ಪಾಟೀಲ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 

ದಾಳಿ ವೇಳೆ 3 ಟಿಪ್ಪರ್ ಲಾರಿ ಮತ್ತು 1 ಜೆ ಸಿ ಬಿ ಕಂಡುಬಂದಿದ್ದು, ಅಕ್ರಮವಾಗಿ ಮರಳು ತುಂಬಿರುವುದು ಕಂಡು ಬಂದಿರುತ್ತದೆ. ದಾಳಿ ನಡೆಸಿ ಸ್ಥಳದಲ್ಲಿದ್ದ 4 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಮರಳು ಲೋಡ್ ಮಾಡಲಾಗಿದ್ದ ಕೆಎ06 ಡಿ8454, ಕೆಎ19 ಎಫ್ 9094 ಹಾಗೂ ಕೆಎ19 ಎಬಿ1508 ನೋಂದಣಿ ಸಂಖ್ಯೆಯ  ಟಿಪ್ಪರ್ ಲಾರಿಗಳನ್ನು ಹಾಗೂ ಕೆಎ20 ಎನ್7175 ನೋಂದಣಿ ಸಂಖ್ಯೆಯ ಜೆಸಿಬಿ ವಾಹನ ಸಹಿತ ಸ್ಥಳದಲ್ಲಿದ್ದ ಸುಮಾರು 2 ಲೋಡ್ ಮರಳು ಮತ್ತು ಲೋಡ್ ಮಾಡಲು ಬಳಸುವ ಸಾಮಾಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 25,24,700/- ರೂಪಾಯಿ ಎಂದು ಅಂದಾಜಿಸಲಾಗಿದೆ. 

ಈ ಬಗ್ಗೆ ಆರೋಪಿಗಳಾದ ನಿಹಾನ್, ರಾಜೀಕ್, ಮೊಹಮ್ಮದ್ ಶಂಶೀರ್, ಮಹಮ್ಮದ್ ಅಶ್ರಫ್, ಸ್ಟೀವನ್ ಡಿಸೋಜಾ ಎಂಬವರುಗಳು ಹಾಗೂ ಕೃತ್ಯಕ್ಕೆ ಸಹಕರಿಸಿದ ರೈಟರ್ ಶಿವಪ್ರಸಾದ್ ಆಳ್ವ ಮತ್ತು ಇತರರ ವಿರುದ್ದ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ : ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸ್ ದಾಳಿ, ಮರಳು, ವಾಹನಗಳ ಸಹಿತ ನಾಲ್ವರು ಬಂಧನ Rating: 5 Reviewed By: karavali Times
Scroll to Top