ದೇವಸ್ಯಮೂಡೂರು : ಟ್ಯೂಶನ್ ಹೋಗುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ - Karavali Times ದೇವಸ್ಯಮೂಡೂರು : ಟ್ಯೂಶನ್ ಹೋಗುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ - Karavali Times

728x90

25 September 2026

ದೇವಸ್ಯಮೂಡೂರು : ಟ್ಯೂಶನ್ ಹೋಗುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ, ಸೆಪ್ಟೆಂಬರ್ 25, 2026 (ಕರಾವಳಿ ಟೈಮ್ಸ್) : ಟ್ಯೂಶನ್ನಿಗೆ ಹೋಗುತ್ತಿದ್ದ ವಿದ್ಯಾರ್ಥಿಯೋರ್ವ ಬಾವಿಗೆ ಹಾಕಿದ ಕಬ್ಬಿಣದ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವಸ್ಯಮೂಡೂರು ಗ್ರಾಮದ ಕೊಡೊಟ್ಟು ಎಂಬಲ್ಲಿ ಸೆ 24 ರಂದು ಸಂಭವಿಸಿದೆ. 

ಮೃತ ಯುವಕನನ್ನು ಕಾವಳಮೂಡೂರು ಗ್ರಾಮದ ಕಾಂದ್ರೋಡಿ ನಿವಾಸಿ ತುಕ್ರಪ್ಪ ನಾಯ್ಕ ಎಂಬವರ ಪುತ್ರ ಯಶವಂತ (23) ಎಂದು ಹೆಸರಿಸಲಾಗಿದೆ. ಈತ 10ನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿದ್ದು, ಬಳಿಕ ವಿಧ್ಯಾಭ್ಯಾಸ ಮುಂದುವರಿಸಲು ಇಚ್ಚೆ ಇಲ್ಲದೇ ಇದ್ದರಿಂದ ಮನೆಯಲ್ಲಿಯೇ ಇದ್ದು, ಕೂಲಿ ಕೆಲಸ ಮಾಡಿಕೊಂಡಿದ್ದನು. ಅಲ್ಲದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಈ ಬಗ್ಗೆ ಫರಂಗಿಪೇಟೆಯಲ್ಲಿರುವ ಮನಸ್ವಿನಿ ಆಸ್ಪತ್ರೆಯಲ್ಲಿ ಡಾ ರವೀಶ್ ತುಂಗಾ ಅವರಿಂದ ಚಿಕಿತ್ಸೆ ಕೊಡಿಸಿದ್ದು, ಬಳಿಕ ಗುಣಮುಖ ಹೊಂದಿ ಬೆಂಗಳೂರಿಗೆ ಕೆಲಸಕ್ಕೆಂದು ಹೋದವನು ಸ್ವಲ್ಪ ಸಮಯ ಬೆಂಗಳೂರಿನಲ್ಲಿ ಕೆಲಸ ಮಾಡಿ ವಾಪಾಸು ಊರಿಗೆ ಬಂದವನು ಆತನ ಸ್ವಚ್ಚೆಯಿಂದ ವಿಧ್ಯಾಭ್ಯಾಸ ಮುಂದುವರಿಸುವುದಾಗಿ ತಿಳಿಸಿ ಚಿಕ್ಕಮ್ಮ ಯಶೋಧರವರ ಮನೆಯಾದ ಮಾಣಿ ಬುಡೋಳಿಯಲ್ಲಿ ಇದ್ದುಕೊಂಡು ಬಿ ಸಿ ರೋಡಿನಲ್ಲಿ ಟ್ಯೂಶನ್ ಹೋಗುವುದಾಗಿ ತಿಳಿಸಿ ಅಲ್ಲಿಂದ ಟ್ಯೂಶನ್ನಿಗೆ ಹೋಗುತ್ತಿದ್ದನು.

ಸೆ 24 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.15 ರ ಮಧ್ಯದ ಅವದಿಯಲ್ಲಿ ತಾಯಿಯ ತಂಗಿ ಮನೆಯಾದ ದೇವಸ್ಯಮುಡೂರು ಗ್ರಾಮದ ಕೊಡೊಟ್ಟು ಎಂಬಲ್ಲಿ ಬಾವಿಯ ನೀರು ತೆಗೆಯಲೆಂದು ಅಳವಡಿಸಲಾದ  ನೈಲಾನ್ ಹಗ್ಗದ ಒಂದು ತುದಿಯನ್ನು ಬಾವಿಗೆ ಅಡ್ಡಲಾಗಿ ಹಾಕಿದ ಕಬ್ಬಿಣದ ರಾಡಿಗೆ ಮತ್ತು ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ದೇವಸ್ಯಮೂಡೂರು : ಟ್ಯೂಶನ್ ಹೋಗುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ Rating: 5 Reviewed By: karavali Times
Scroll to Top