ಆದಿದ್ರಾವಿಡ ಸಮಾಜದ ಮುಖಂಡರಿಂದ ಮಾಜಿ ಸಚಿವ ರಮಾನಾಥ ರೈ ಅವರಿಗೆ ಅಭಿನಂದನೆ - Karavali Times ಆದಿದ್ರಾವಿಡ ಸಮಾಜದ ಮುಖಂಡರಿಂದ ಮಾಜಿ ಸಚಿವ ರಮಾನಾಥ ರೈ ಅವರಿಗೆ ಅಭಿನಂದನೆ - Karavali Times

728x90

2 October 2026

ಆದಿದ್ರಾವಿಡ ಸಮಾಜದ ಮುಖಂಡರಿಂದ ಮಾಜಿ ಸಚಿವ ರಮಾನಾಥ ರೈ ಅವರಿಗೆ ಅಭಿನಂದನೆ

ಬಂಟ್ವಾಳ, ಅಕ್ಟೋಬರ್ 02, 2026 (ಕರಾವಳಿ ಟೈಮ್ಸ್) : ಬೆಂಗಳೂರಿನ ವಸಂತ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ, ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವ ಕೆ.ಎಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ತುಳು ಭಾಷಿಕ ಆದಿದ್ರಾವಿಡ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮ ನೆರವೇರಲು ಹಾಗೂ ಸಮುದಾಯದ ಮೂಲ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಸರ್ಕಾರದಿಂದ ಅನುದಾನ ಘೋಷಣೆಯಾಗಲು ಮೂಲ ಕಾರಣಕರ್ತರೂ, ಆದಿದ್ರಾವಿಡ ಸಮುದಾಯದ ಭರವಸೆಯ ಬೆಳಕಾಗಿರುವ ಮಾಜಿ ಸಚಿವರೂ, ಹಿರಿಯ ಮುಖಂಡರೂ ಆಗಿರುವ ಬಿ ರಮಾನಾಥ ರೈ ಅವರನ್ನು ಬಂಟ್ವಾಳ ತಾಲೂಕು ಆದಿದ್ರಾವಿಡ ಸಮುದಾಯದ ವತಿಯಿಂದ ಅವರ ಕಳ್ಳಿಗೆಯ ಸ್ವಗೃಹದಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭ ಆದಿದ್ರಾವಿಡ ಸಮುದಾಯದ ಮುಖಂಡರಾದ ಮೋಹನ್ ಚೆಂಡ್ತಿಮಾರ್, ಶ್ರೀನಿವಾಸ ಅರ್ಬಿಗುಡ್ಡೆ, ರಾಜ ಚೆಂಡ್ತಿಮಾರ್, ಚಂದ್ರಹಾಸ ಅರ್ಬಿಗುಡ್ಡೆ, ರಾಮ ಚೆಂಡ್ತಿಮಾರ್, ಮಾಧವ್ ವಿ ಎಸ್ ಕಡೇಶಿವಾಲಯ, ಸಂತೋಷ್ ಭಂಡಾರಿಬೆಟ್ಟು, ಪ್ರಕಾಶ್ ಅರ್ಬಿಗುಡ್ಡೆ, ಲಕ್ಷ್ಮಣ್ ಚೆಂಡ್ತಿಮಾರ್ ಮೊದಲಾದವರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಆದಿದ್ರಾವಿಡ ಸಮಾಜದ ಮುಖಂಡರಿಂದ ಮಾಜಿ ಸಚಿವ ರಮಾನಾಥ ರೈ ಅವರಿಗೆ ಅಭಿನಂದನೆ Rating: 5 Reviewed By: karavali Times
Scroll to Top