ಅಳಕೆಮಜಲು : ವಾಸ್ತು ತಜ್ಞ ಬಾಬುರಾಯ ಆಚಾರ್ಯ ನಿಧನ - Karavali Times ಅಳಕೆಮಜಲು : ವಾಸ್ತು ತಜ್ಞ ಬಾಬುರಾಯ ಆಚಾರ್ಯ ನಿಧನ - Karavali Times

728x90

29 October 2026

ಅಳಕೆಮಜಲು : ವಾಸ್ತು ತಜ್ಞ ಬಾಬುರಾಯ ಆಚಾರ್ಯ ನಿಧನ

ಬಂಟ್ವಾಳ, ಅಕ್ಟೋಬರ್ 29, 2026 (ಕರಾವಳಿ ಟೈಮ್ಸ್) : ಕುಳ ಗ್ರಾಮದ ಅಳಕೆಮಜಲು ನಿವಾಸಿ ಬಾಬುರಾಯ ಆಚಾರ್ಯ (75) ಅವರು ಅ 28 ರಂದು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಮರದ ಕೆಲಸದಲ್ಲಿ ಪರಿಣತಿ ಪಡೆಯುವುದರ ಜೊತೆಗೆ ವಾಸ್ತು ತಜ್ಞರಾಗಿದ್ದ ಇವರು ಹಲವು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಅಳಕೆ ಮಜಲು ಕೂಡುವಳಿಕೆ ಮುಕ್ತೇಸರರಾಗಿದ್ದ ಇವರು ಅಳಕೆಮಜಲು ಕುಟುಂಬದ ಹಿರಿಯರಾಗಿದ್ದರು. ಸ್ಥಳೀಯ ಹಲವು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದರು. ಮೃತರು ಪುತ್ರ, ಪುತ್ರಿ, ಸೊಸೆ, ಅಳಿಯ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಳಕೆಮಜಲು : ವಾಸ್ತು ತಜ್ಞ ಬಾಬುರಾಯ ಆಚಾರ್ಯ ನಿಧನ Rating: 5 Reviewed By: karavali Times
Scroll to Top