ಇ-ಕೆವೈಸಿಗಾಗಿ ರಾಜ್ಯಾದ್ಯಂತ “ಅನ್ನಸೇವೆ” ಮೊಬೈಲ್ ಆಪ್ ಬಿಡುಗಡೆ, ಅಕ್ಟೋಬರ್ 20 ಕೊನೆ ದಿನಾಂಕ : ಸಚಿವ ರಿಝ್ವಾನ್ ಅರ್ಶದ್ - Karavali Times ಇ-ಕೆವೈಸಿಗಾಗಿ ರಾಜ್ಯಾದ್ಯಂತ “ಅನ್ನಸೇವೆ” ಮೊಬೈಲ್ ಆಪ್ ಬಿಡುಗಡೆ, ಅಕ್ಟೋಬರ್ 20 ಕೊನೆ ದಿನಾಂಕ : ಸಚಿವ ರಿಝ್ವಾನ್ ಅರ್ಶದ್ - Karavali Times

728x90

13 October 2026

ಇ-ಕೆವೈಸಿಗಾಗಿ ರಾಜ್ಯಾದ್ಯಂತ “ಅನ್ನಸೇವೆ” ಮೊಬೈಲ್ ಆಪ್ ಬಿಡುಗಡೆ, ಅಕ್ಟೋಬರ್ 20 ಕೊನೆ ದಿನಾಂಕ : ಸಚಿವ ರಿಝ್ವಾನ್ ಅರ್ಶದ್

ಬೆಂಗಳೂರು, ಅಕ್ಟೋಬರ್ 13, 2026 (ಕರಾವಳಿ ಟೈಮ್ಸ್) : ಅನ್ನಭಾಗ್ಯ ಸೇರಿದಂತೆ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳು ಇನ್ನು ಮುಂದೆ ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಿಕೊಳ್ಳಲು ಅನುಕೂಲವಾಗುವ ‘ಅನ್ನಸೇವೆ’ ಮೊಬೈಲ್ ಆಪ್ ಅಕ್ಟೋಬರ್ 14 ರಿಂದ ರಾಜ್ಯಾದ್ಯಂತ ಲಭ್ಯವಾಗಲಿದೆ. ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ ಐ ಸಿ) ಮತ್ತು ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಈ ಆಪ್ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅಕ್ಟೋಬರ್ 1 ರಂದು ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಅವಕಾಶ ನೀಡಲಾಗಿತ್ತು. ಇದೀಗ ರಾಜ್ಯದ ಎಲ್ಲ ಜಿಲ್ಲೆಗಳ ಫಲಾನುಭವಿಗಳೂ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಪ್ ಡೌನ್ ಲೋಡ್ ಮಾಡಿಕೊಂಡು UIDAI Face Authentication ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು.

ಅಕ್ಟೋಬರ್ 1 ರಿಂದ 12 ರವರೆಗೆ ಎಂಟು ಜಿಲ್ಲೆಗಳ 1,60,267 ಫಲಾನುಭವಿಗಳು ಆಪ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ರಾಜ್ಯದಲ್ಲಿ ಇ-ಕೆವೈಸಿ ಮಾಡಿಸಬೇಕಿರುವ 2.67 ಕೋಟಿಗೂ ಅಧಿಕ ಫಲಾನುಭವಿಗಳ ಪೈಕಿ 2,06,76,278 ಮಂದಿ ಈಗಾಗಲೇ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ. 

ಕೆಲಸಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗುವ ಕಾರ್ಮಿಕರು ಇ-ಕೆವೈಸಿಗಾಗಿ ಸ್ವಗ್ರಾಮಕ್ಕೆ ಬಂದು ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ತೊಂದರೆಯನ್ನು ಈ ಆಪ್ ಕಡಿಮೆ ಮಾಡಲಿದೆ. ಒಂದು ವರ್ಷದ ಹಿಂದೆ ಇ-ಕೆವೈಸಿ ಮಾಡಿಸಿದ್ದವರೂ ಮತ್ತೊಮ್ಮೆ ಕಡ್ಡಾಯವಾಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಇಲಾಖೆ ತಿಳಿಸಿದೆ. ಉಳಿದ ಫಲಾನುಭವಿಗಳು ಅಕ್ಟೋಬರ್ 20ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಸಚಿವ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಇ-ಕೆವೈಸಿಗಾಗಿ ರಾಜ್ಯಾದ್ಯಂತ “ಅನ್ನಸೇವೆ” ಮೊಬೈಲ್ ಆಪ್ ಬಿಡುಗಡೆ, ಅಕ್ಟೋಬರ್ 20 ಕೊನೆ ದಿನಾಂಕ : ಸಚಿವ ರಿಝ್ವಾನ್ ಅರ್ಶದ್ Rating: 5 Reviewed By: karavali Times
Scroll to Top