ಪುತ್ತೂರು, ಅಕ್ಟೋಬರ್ 12, 2026 (ಕರಾವಳಿ ಟೈಮ್ಸ್) : ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆಯುವ ಅಶೋಕ ಜನ-ಮನ-2026 ಕಾರ್ಯಕ್ರಮಕ್ಕೆ ಗ್ರಾಮದ ಜನರನ್ನು ಆಹ್ವಾನಿಸುವ ಗ್ರಾಮ ಭೇಟಿ ಕಾರ್ಯಕ್ರಮದ ಉದ್ಘಾಟನೆಯು ಅಳಿಕೆ ಗ್ರಾಮದ ಆನೆಪದವು ಭಜನಾ ಮಂದಿರದಲ್ಲಿ ನಡೆಯಿತು.
ಅಳಿಕೆ ಕೃಷಿ ಪತ್ತಿನ ವ್ಯವಸಾಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕಾನ ಈಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಜಯಪ್ರಕಾಶ್ ಬದಿನಾರು, ರಾಮಣ್ಣ ಪಿಲಿಂಜ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಎಲ್ಯಣ್ಣ ಪೂಜಾರಿ, ನಾರಾಯಣ ಪೂಜಾರಿ ಬದಿಗುಡ್ಡೆ, ಗೋವಿಂದ, ಪ್ರಕಾಶ್ ವಿ ಜಿ, ವೆಂಕಟೇಶ್ ಭಟ್ ಒಳಬೈಲು, ಸುಂದರ ಭಟ್, ಮಹಾಲಿಂಗ ನಾಯಕ್, ನಾಗರಾಜ ಜೆಡ್ಡು, ಶ್ರೀಧರ್ ಪೂಜಾರಿ ಬಾಳೆಕಲ್ಲು, ಪ್ರವೀಣ್ ಪೂಜಾರಿ ಸಣ್ಣಗುತ್ತು ಅಳಿಕೆ ಮೊದಲಾದವರು ಭಾಗವಹಿಸಿದ್ದರು.












0 comments:
Post a Comment