ಮಂಗಳೂರು, ಅಕ್ಟೋಬರ್ 05, 2026 (ಕರಾವಳಿ ಟೈಮ್ಸ್) : ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಆಗಸ್ಟ್ 28 ರಂದು ಹೊರಡಿಸಿದ ಆದೇಶದಲ್ಲಿ ಈ ಹಿಂದೆ ಅಂದರೆ 2022 ರ ನವೆಂಬರ್ 23 ರಲ್ಲಿ ಹೊರಡಿಸಲಾದ ಪರಿಷ್ಕøತ ಅಧಿಸೂಚನೆಯಲ್ಲಿ ನಂತರದ ಪ್ರತಿ ಕಿ.ಮೀ ನಿಗದಿಪಡಿಸಿದ 20 ರೂಪಾಯಿಯನ್ನು ಪರಿಗಣಿಸದ ಕಾರಣ ಆಗಸ್ಟ್ 28ರ ಆದೇಶವನ್ನು ಹಿಂಪಡೆದು ಪರಿಷ್ಕøತ ಆದೇಶವನ್ನು ಹೊರಡಿಸಿದ್ದು, ಪರಿಷ್ಕøತ ಆಟೋ ರಿಕ್ಷಾ ಪ್ರಯಾಣ ದರವು ನವೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಸಿ.ಎನ್.ಜಿ, ಎಲ್.ಪಿ.ಜಿ ಮತ್ತು ಡೀಸೆಲ್ ಬೆಲೆಗಳು ಹಾಗೂ ವಾಹನದ ಬಿಡಿ ಭಾಗಗಳ ಬೆಲೆ ಏರಿಕೆಯಾಗಿರುತ್ತದೆ. ಇದರಿಂದ ಆಟೋ ಚಾಲಕರ ಖರ್ಚು ವೆಚ್ಚಗಳು ಕೂಡಾ ಹೆಚ್ಚಾಗಿರುತ್ತದೆ. ಆಟೋ ಚಾಲಕರ ಕ್ಷೇಮಾಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಳಗಿನಂತೆ ದರವನ್ನು ಪರಿಷ್ಕರಿಸಿ ಆದೇಶಿಸಿದೆ. ಪರಿಷ್ಕøತ ದರಗಳು ನವೆಂಬರ್ 1 ರಿಂದ ಜಾರಿಗೆ ಬರಲಿದೆ.
ಪರಿಷ್ಕøತ ದರಗಳು :
ಕನಿಷ್ಠ ದರ ಮೊದಲ 1.5 ಕಿ.ಮೀ.ಗೆ 40 ರೂಪಾಯಿ (ಗರಿಷ್ಠ 3 ಜನ ಪ್ರಯಾಣಿಕರು), ನಂತರದ ಪ್ರತಿ ಕಿಲೋ ಮೀಟರ್ ದರ : ರೂ. 23 (ಗರಿಷ್ಠ 3 ಜನ ಪ್ರಯಾಣಿಕರು), ಕಾಯುವ ದರಗಳು : ಮೊದಲ 10 ನಿಮಿಷ ಉಚಿತ ನಂತರದ 15 ನಿಮಿಷದವರಗೆ ಅಥವಾ ಅದರ ಭಾಗಕ್ಕೆ 5 ರೂಪಾಯಿ.
ಪ್ರಯಾಣಿಕರ ಸರಕಿಗೆ (ಲಗೇಜ್) : ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆ ಇರಬೇಕು, ಮೊದಲ 20 ಕಿ.ಗ್ರಾಂ.ಗಳಿಗೆ ಉಚಿತ ನಂತರದ 20 ಕೆ.ಜಿ.ಗಳಿಗೆ ಅಥವಾ ಅದರ ಭಾಗಕ್ಕೆ 5 ರೂಪಾಯಿ, ರಾತ್ರಿ ವೇಳೆ ದರ : ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ದರದ ಪಟ್ಟಿಯನ್ನು ಪ್ರತಿಯೊಂದು ಆಟೋ ರಿಕ್ಷಾಗಳಲ್ಲಿಯೂ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು.
ಅಟೋ ರಿಕ್ಷಾ ಚಾಲಕ ಮಾಲಕರು ತಮ್ಮ ಆಟೋ ರಿಕ್ಷಾಗಳ ಪ್ಲಾಗ್ ಮೀಟರಿನಲ್ಲಿ ಪರಿಷ್ಕರಿಸಿ ನಿಗದಿಪಡಿಸಿದ ದರವನ್ನು ರಿಕ್ಯಾಲೀಬರೇಷನ್ ಹಾಗೂ ಸೀಲ್ ಮಾಡಿಕೊಂಡು ಪ್ರಯಾಣಿಕರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿದ ಮೀಟರ್ ದರವನ್ನು ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ.
ಇದಕ್ಕೆ ತಪ್ಪಿದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನಿನಂತೆ ದಂಡ ವಿಧಿಸುವುದು/ ಪರವಾನಿಗೆ ಅಮಾನತ್ತು/ ರದ್ದತಿ ಕುರಿತು ಕ್ರಮ ಕೈಗೊಳ್ಳುವುದು ಹಾಗೂ ಇತರೇ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೆÇಲೀಸ್ ಇಲಾಖೆ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸೂಚಿಸಿದೆ.













0 comments:
Post a Comment