ಗೂಡಿನಬಳಿ ನಿವಾಸಿ ಭಿನ್ನಚೇತನ ಯುವಕ ಹಠಾತ್ ಅನಾರೋಗ್ಯಕ್ಕೀಡಾಗಿ ನಿಧನ - Karavali Times ಗೂಡಿನಬಳಿ ನಿವಾಸಿ ಭಿನ್ನಚೇತನ ಯುವಕ ಹಠಾತ್ ಅನಾರೋಗ್ಯಕ್ಕೀಡಾಗಿ ನಿಧನ - Karavali Times

728x90

29 October 2026

ಗೂಡಿನಬಳಿ ನಿವಾಸಿ ಭಿನ್ನಚೇತನ ಯುವಕ ಹಠಾತ್ ಅನಾರೋಗ್ಯಕ್ಕೀಡಾಗಿ ನಿಧನ

ಬಂಟ್ವಾಳ, ಅಕ್ಟೋಬರ್ 29, 2026 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿ, ಆಟೋ ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ಅವರ ಪುತ್ರ ಮಹಮ್ಮದ್ ಅಝ್ಮಲ್ (25) ಅವರು ಹಠಾತ್ ಅನಾರೋಗ್ಯದಿಂದ ಅ 29 ರಂದು ಗುರುವಾರ ನಿಧನರಾದರು. ಸತ್ತಾರ್ ಅವರ ಪತ್ನಿ ಸಹಿತ ಇಬ್ಬರು ಮಕ್ಕಳು ಕೂಡಾ ಭಿನ್ನಚೇತನರಾಗಿದ್ದು, ಇಬ್ಬರು ಮಕ್ಕಳ ಪೈಕಿ ಅಝ್ಮಲ್ ಎರಡನೇಯವನಾಗಿದ್ದು, ಗುರುವಾರ ಬೆಳಿಗ್ಗೆ ಹಠಾತ್ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಗುರುವಾರ ಅಪರಾಹ್ನ ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ಮಸೀದಿಯಲ್ಲಿ ಮೃತದೇಹದ ದಫನ ಕಾರ್ಯ ನೆರವೇರಿಸಲಾಗಿದೆ.

ಮೃತರ ಮನೆಗೆ ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಗೂಡಿನಬಳಿ ನಿವಾಸಿ ಭಿನ್ನಚೇತನ ಯುವಕ ಹಠಾತ್ ಅನಾರೋಗ್ಯಕ್ಕೀಡಾಗಿ ನಿಧನ Rating: 5 Reviewed By: karavali Times
Scroll to Top