ಧರ್ಮಸ್ಥಳ : ರುಡ್ ಸೆಟ್ ತರಬೇತಿದಾರರಿಗೆ ಡಾ ಹೆಗ್ಗಡೆ ಮಾರ್ಗದರ್ಶನ - Karavali Times ಧರ್ಮಸ್ಥಳ : ರುಡ್ ಸೆಟ್ ತರಬೇತಿದಾರರಿಗೆ ಡಾ ಹೆಗ್ಗಡೆ ಮಾರ್ಗದರ್ಶನ - Karavali Times

728x90

29 October 2026

ಧರ್ಮಸ್ಥಳ : ರುಡ್ ಸೆಟ್ ತರಬೇತಿದಾರರಿಗೆ ಡಾ ಹೆಗ್ಗಡೆ ಮಾರ್ಗದರ್ಶನ

ಧರ್ಮಸ್ಥಳ, ಅಕ್ಟೋಬರ್ 29, 2026 (ಕರಾವಳಿ ಟೈಮ್ಸ್) : ರುಡ್ ಸೆಟ್ ಸಂಸ್ಥೆಯಲ್ಲಿ ನಡೆಯುತ್ತಿರುವ ಮಹಿಳಾ ಟೈಲರಿಂಗ್ ತರಬೇತಿ ಶಿಬಿರದ ಶಿಬಿರಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ. ಹೆಗ್ಗಡೆಯವರು, ಅವರಿಗೆ ಸೂಕ್ತ ಸಲಹೆಗಳನ್ನು ನೀಡಿ, ತರಬೇತಿಯ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವಂತೆ ಪ್ರೇರೇಪಿಸಿದರು. ಶಿಬಿರಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಈ ಸಂದರ್ಭ ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಸುನಿಲ್ ಜಿ. ನಾಯಕ್, ಹಿರಿಯ ಉಪನ್ಯಾಸಕ ಕರುಣಾಕರ ಜೈನ್, ಅತಿಥಿ ಉಪನ್ಯಾಸಕಿ ರಶ್ಮಿ ರಾಘವೇಂದ್ರ ಹಾಗೂ ಸುರೇಶ ಗೌಡ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಧರ್ಮಸ್ಥಳ : ರುಡ್ ಸೆಟ್ ತರಬೇತಿದಾರರಿಗೆ ಡಾ ಹೆಗ್ಗಡೆ ಮಾರ್ಗದರ್ಶನ Rating: 5 Reviewed By: karavali Times
Scroll to Top